ಚಾಮರಾಜನಗರ : ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕಾಡುಗಳ್ಳ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಇಂದು ಬೆಳಗ್ಗೆ ಮೈಸೂರಿನ ಕೇಂದ್ರ ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಜ್ಞಾನಪ್ರಕಾಶ್(68) ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದ ನಿವಾಸಿಯಾಗಿದ್ದು ಕಾಡುಗಳ್ಳನ ಮುಖ್ಯ ಸಹಚರಾರಾಗಿದ್ದರು‌. ಭಯಾನಕ ಎನಿಸುವ "ಪಾಲಾರ್ ಬಾಂಬ್ ಸ್ಫೋಟ" ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಜ್ಞಾನಪ್ರಕಾಶ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ‌ಬಳಿಕ, ಸುಪ್ರೀಂ ಕೋರ್ಟ್ 2014 ರಲ್ಲಿ ಗಲ್ಲು ಶಿಕ್ಷೆ ಬದಲಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. 


ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಸಂಪರ್ಕದಲ್ಲಿದ್ದೇನೆ; ಸಿಎಂ ಬೊಮ್ಮಾಯಿ


68 ವರ್ಷದ ಜ್ಞಾನಪ್ರಕಾಶ್ 29 ವರ್ಷಗಳಿಂದ ಜೈಲಿನಲ್ಲೇ ಇದ್ದು ಮೂರು ವರ್ಷಗಳಿಂದ ಶ್ವಾಸಕೋಸ ಕ್ಯಾನ್ಸರ್ ಅವರನ್ನು ಬಾಧಿಸುತ್ತಿದೆ. ಮಾನವೀಯತೆ ಆಧಾರದಲ್ಲಿ ಸುಪ್ರೀಂ ಜಾಮೀನು ಮಂಜೂರು ಮಾಡಿದ್ದರಿಂದ ಚಾಮರಾಜನಗರ ನ್ಯಾಯಾಲಯವು ಇಬ್ಬರಿಂದ ಶೂರಿಟಿ ಪಡೆದು ಸೋಮವಾರ ಜಾಮೀನು ಮಂಜೂರು ಮಾಡಿತ್ತು. ಇಂದು ಬೆಳಗ್ಗೆ ಜಾಮೀನಿನಿಂದ ಜ್ಞಾನಪ್ರಕಾಶ್ ಬಿಡುಗಡೆಯಾಗಿದ್ದು ಕುಟುಂಬವನ್ನು ಸೇರಿಕೊಂಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.