ಬೆಂಗಳೂರು : ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ ಯಾವುದೇ ಕಾರಣಕ್ಕೂ ಸಾವರ್ಕರ್ ವಿಚಾರಕ್ಕೆ ಕೈ ಹಾಕುವುದು ಬೇಡ ಎಂದು ನಿರ್ಧಾರ ಮಾಡಿದೆ. ನಾವು ಸಾವರ್ಕರ್ ಬಗ್ಗೆ ಮಾತಾನ್ನಾಡಿದರೆ ಬಿಜೆಪಿಗೆ ಲಾಭ ಆಗಲಿದೆ ಎಂದು ವರಿಷ್ಠರು ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಚ ಬಗ್ಗೆ ಚರ್ಚೆ ನಡೆಸಿ, ಯಾವುದೇ ಕಾರಣಕ್ಕೂ ಸಾವರ್ಕರ್ ವಿಚಾರಕ್ಕೆ ಕೈ ಹಾಕೋದು ಬೇಡ. ಸಾವರ್ಕರ್ ವಿಚಾರ ತಂದು ಬಿಜೆಪಿ ಡೈವರ್ಟ್ ಮಾಡಲು ಪ್ರಯತ್ನಿಸುತ್ತಿದೆ. ನಾವು ಮಾತನಾಡಿದ್ರೆ, ಬಿಜೆಪಿಗೆ ಮತ್ತಷ್ಟು ಲಾಭವಾಗುತ್ತೆ. ಹೀಗಾಗಿ ಸಾವರ್ಕರ್ ಫೋಟೋ ವಿಚಾರ ಇಲ್ಲಿಗೆ ಬಿಡೋಣ. ಆದರೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಎತ್ತಿಕೊಳ್ಳೋಣ ಎಂದು ಸಿಎಲ್‌ಪಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ: ಇಡಿ -ಎಲೆಕ್ಷನ್ ಡಿಪಾರ್ಟ್ಮೆಂಟ್, ಐಟಿ - ಇಂಟಲಿಜೆನ್ಸ್ ಡಿಪಾರ್ಟ್ಮೆಂಟ್ : ಬಿ.ಕೆ. ಹರಿಪ್ರಸಾದ್ ವ್ಯಂಗ್ಯ
ತೊಗರಿ, ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಮಾತನಾಡೋಣ, ಕೃಷ್ಣ, ಮಹದಾಯಿ, ಮೇಕೆದಾಟು ನೀರಾವರಿ ಯೋಜನೆ ವಿಳಂಬದ ಚರ್ಚೆ ಮಾಡೋಣ. ಓಟರ್ ಐಡಿ ಪ್ರಕರಣದಲ್ಲಿ ಸರ್ಕಾರದ ಪಾತ್ರದ ವಿಚಾರ ಎತ್ತೋಣ. ಪಿಎಸ್ಐ ನೇಮಕಾತಿ ಹಗರಣ ಮತ್ತೆ ಪ್ರಸ್ತಾಪ. ಜಾನುವಾರುಗಳಿಗೆ ಗಂಟು ರೋಗದ ಬಗ್ಗೆ ಚರ್ಚೆ, 40% ಕಮಿಷನ್ ಹಾಗೂ ಪೇಸಿಎಂ ವಿಚಾರಗಳನ್ನು ಎತ್ತೋಣ ಅಂತ ಚರ್ಚೆ. ಶಾಸಕಾಂಗ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದಿರುವ ಕೈ ನಾಯಕರು ಎಂದು ತಿಳಿದು ಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.