ಅವಿಭಜಿತ ಧಾರವಾಡ ಜಿಲ್ಲೆಗೂ ಹಿಂದೂಸ್ತಾನಿ ಸಂಗೀತಕ್ಕೂ ಬಿಡಿಸಲಾಗದ ನಂಟು, ಹೌದು ಈ ಭಾಗದಲ್ಲಿ ಖ್ಯಾತನಾಮ ಹಿಂದೂಸ್ತಾನಿ ಸಂಗೀತ ದಿಗ್ಗಜರು ದೇಶಾದ್ಯಂತ ಹೆಸರು ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಭೀಮಸೇನ್ ಜೋಷಿ, ಮಲ್ಲಿಕಾರ್ಜುನ್ ಮನ್ಸೂರು, ಬಸವರಾಜ್ ರಾಜಗುರು, ಮಾಧವ್ ಗುಡಿ, ರಾಜಶೇಖರ್ ಮನ್ಸೂರು, ಕೃಷ್ಣಾ ಹಾನಗಲ್, ಪಂಡಿತ್ ವೆಂಕಟೇಶ್ ಕುಮಾರ್ ಹೀಗೆ ಹಲವು ದಿಗ್ಗಜರು ಈ ಭಾಗದಲ್ಲಿ ಕಿರಾಣಾ ಘರಾನಾ ಹಿಂದೂಸ್ತಾನಿ ಸಂಗೀತ ಶೈಲಿಯಲ್ಲಿ ಹೆಸರು ಗಳಿಸಿದ್ದಾರೆ.ಇಂತಹ ದಿಗ್ಗಜರ ನಡುವೆ ಕೇಳಿ ಬರುವ ಮತ್ತೊಂದು ಅಗ್ರ ಹೆಸರೆಂದರೆ ಅದು, ಗಂಗೂಬಾಯಿ ಹಾನಗಲ್ ಎಂದರೆ ತಪ್ಪಾಗಲಾರದು.


ಹೌದು, ಅಷ್ಟಕ್ಕೂ ಗಂಗೂಬಾಯಿ ಹಾನಗಲ್ ಅವರ ಸಂಗೀತ ಪ್ರಯಾಣ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ, ಕೆಳಸಮುದಾಯದಲ್ಲಿ ಜನಿಸಿದ ಗಂಗೂಬಾಯಿಗೆ ಬಾಲ್ಯದಲ್ಲಿಯೇ ಹಲವು ಅವಮಾನಗಳನ್ನು ಎದುರಿಸಬೇಕಾಗಿ ಬಂತು.ಇಂತಹ ಎಲ್ಲ ಸನ್ನಿವೇಶಗಳನ್ನು ಎದುರಿಸಿಯೇ ಅವರು ಸಂಗೀತ ಸಾಮ್ರಾಜ್ಞೆಯಾಗಿದ್ದಂತೂ ನಿಜಕ್ಕೂ ಸ್ಪೂರ್ತಿದಾಯಕ.


ಗುರು-ಶಿಷ್ಯ ಪರಂಪರೆಯ ಪ್ರತೀಕ ಈ ಹುಬ್ಬಳ್ಳಿಯ 'ಗುರುಕುಲ'


ತಮ್ಮ ಹಲವು ದಶಕಗಳ ವೃತ್ತಿ ಜೀವನದಲ್ಲಿ ಗಂಗೂಬಾಯಿ ಹಾನಗಲ್ (Gangubai Hangal) ಗಂಟಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದಾಗಿ ಅವರಲ್ಲಿ ಧ್ವನಿಯಲ್ಲಿ ನಾಟಕೀಯ ಬದಲಾವಣೆಯಾಯಿತು.1930 ರ ಅವಧಿಯಲ್ಲಿ ರಿಕಾರ್ಡಿಂಗ್ ಆಗಿರುವ ಅವರ ಡಿಸ್ಕ್ ನಲ್ಲಿ ಸಾಮಾನ್ಯವಾಗಿ ನಂತರದ ದಶಕಗಳಲ್ಲಿ ಕೇಳುವುದಕ್ಕಿಂತಲೂ ತೆಳುವಾಗಿರುವುದನ್ನು ನಾವು ಕೇಳಬಹುದು.ಈ ಹಿನ್ನಲೆಯಲ್ಲಿ ಆರಂಭಿಕ ಗಂಗೂಬಾಯಿ ಹಾನಗಲ್ ಸುಮಧುರ ಧ್ವನಿಯಿಂದಾಗಿ ಅವರನ್ನು ಗಾಂಧಾರಿ ಹಾನಗಲ್ ಎಂದು ಕರೆಯಲಾಗುತ್ತಿತ್ತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.