ಗುರು-ಶಿಷ್ಯ ಪರಂಪರೆಯ ಪ್ರತೀಕ ಈ ಹುಬ್ಬಳ್ಳಿಯ 'ಗುರುಕುಲ'

Last Updated : Nov 21, 2017, 03:57 PM IST
ಗುರು-ಶಿಷ್ಯ ಪರಂಪರೆಯ ಪ್ರತೀಕ ಈ ಹುಬ್ಬಳ್ಳಿಯ 'ಗುರುಕುಲ' title=

ಹಿಂದೂಸ್ತಾನಿ ಸಂಗೀತದ ಪರಂಪರೆಯು ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಪ್ರಮುಖವಾಗಿ ಧಾರವಾಡ,ಗದಗ,ಹಾವೇರಿ,ಬೆಳಗಾವಿ ಪ್ರದೇಶಗಳಲ್ಲಿ ಶತಮಾನಗಳಿಂದಲೂ ಬೆಳೆದುಕೊಂಡು ಬಂದಿದೆ.ಇಂತಹ ಪರಂಪರೆ ಈ ಹಿಂದೆ ಭೀಮಸೇನ್ ಜೋಷಿ ಗಂಗೂಬಾಯಿ ಹಾನಗಲ್,ಬಸವರಾಜ ರಾಜಗುರು ಮಲ್ಲಿಕಾರ್ಜುನ್ ಮನ್ಸೂರ್ ರಂಥ ಹಲವು ಗಣ್ಯ ಸಂಗೀತಗಾರರನ್ನು ಹುಟ್ಟಿಹಾಕಿದೆ.ಮುಖ್ಯವಾಗಿ ಇವರೆಲ್ಲರೂ ಕೂಡಾ ಗುರುಶಿಷ್ಯ ಪರಂಪರೆಯ ಸಂಗೀತ ವಿದ್ಯಾಭ್ಯಾಸವನ್ನು ಮಾಡಿದವರೇ ಆಗಿದ್ದಾರೆ. 

ಆದ್ದರಿಂದ 2009 ರಲ್ಲಿ ಹಿಂದೂಸ್ತಾನಿ ಸಂಗೀತದ ಗಾಯಕಿಯಾಗಿದ್ದ ಗಂಗೂಬಾಯಿ ಹಾನಗಲ್ ರವರು ನಿಧನ ಹೊಂದಿದ ನಂತರ ಅವರ ನೆನಪಿನಲ್ಲಿ ಸರ್ಕಾರವು  ಗುರುಶಿಷ್ಯ ಪರಂಪರೆಯನ್ನು ಮುಂದುವರೆಸುವ ಸಲುವಾಗಿ ಹುಬ್ಬಳಿಯ ಹೊರವಲಯದಲ್ಲಿ ಗಂಗೂಬಾಯಿ ಹಾನಗಲ್ ರವರ ಸಮಾಧಿಯ ಹತ್ತಿರದಲ್ಲೇ 5 ಎಕರೆ ಜಾಗದಲ್ಲಿ ಸಂಗೀತದ ಗುರುಕುಲವನ್ನು ಸ್ಥಾಪಿಸಿತು. ಇದರಲ್ಲಿ ಗುರುಗಳ ಮನೆ, ವಿಧ್ಯಾರ್ಥಿಗಳ ಮನೆ,ಮತ್ತು ಬಯಲು ರಂಗಮಂದಿರ, ಹಾಗೂ ಅತಿಥಿಗಳ ಮನೆಯನ್ನು ಕಟ್ಟಲಾಗಿದೆ. ಈ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ  ಹೊಸಪ್ರತಿಭೆಗಳನ್ನು ಹೊರತರಲು ದೇಶದ ವಿವಿಧ ಭಾಗಗಳಲ್ಲಿ ಹಿಂದೂಸ್ತಾನಿ ಕ್ಷೇತ್ರದಲ್ಲಿ ಹೆಸರು ಮಾಡಿದ ವ್ಯಕ್ತಿಗಳ ಮೂಲಕ ಇಲ್ಲಿನ ವಿಧ್ಯಾರ್ಥಿಗಳಿಗೆ ಸಂಗೀತ ಪಾಠವನ್ನು ಹೇಳಿಕೊಡಲಾಗುತ್ತದೆ.ಇಲ್ಲಿ ಮುಖ್ಯವಾಗಿ ಯಾವುದೇ ಪಠ್ಯದ ಮಾದರಿಯಿಲ್ಲದೆ ಸಂಗೀತವನ್ನು ಕಲಿಸಲಾಗುತ್ತದೆ ಎನ್ನುವುದು ವಿಶೇಷ ಸಂಗತಿ.

ಸದ್ಯ ಗುರುಕುಲವು 6 ಜನ ಗುರುಗಳು ಮತ್ತು 36 ಶಿಷ್ಯರಿಗೆ ಈ ಗುರುಕುಲದಲ್ಲಿ ಸಂಗೀತ ಅಭ್ಯಾಸಕ್ಕೆ ಅವಕಾಶ ನೀಡಲಾಗಿದೆ.ಈ ಗುರುಕುಲವು ಸರ್ಕಾರದಿಂದ ರಚಿಸಲ್ಪಟ್ಟ ಸಮೀತಿಯಿಂದ ಇದನ್ನು ನಿರ್ವಹಿಸಲಾಗುತ್ತದೆ.ಸದ್ಯ  ಬೆಳಗಾವಿ ಪ್ರಾದೇಶಿಕ ವಿಭಾಗದ  ಕಮಿಷನರ್ ಇದಕ್ಕೆ ಚೇರಮನ್ ಆಗಿ ಧಾರವಾಡದ ಜಿಲ್ಲಾಧಿಕಾರಿಗಳು ಇದಕ್ಕೆ ಉಪ ಚೇರಮನ್ ಆಗಿ  ಈ ಗುರುಕುಲ ಟ್ರಸ್ಟ್ ನ್ನು ನಿರ್ವಹಿಸುತ್ತಿದ್ದಾರೆ.

Trending News