ಹಾವೇರಿ: ರಾಷ್ಟ್ರ ರಾಜಕಾರಣದಲ್ಲಿ ಸಖತ್ ಸದ್ದು ಮಾಡುತ್ತಿರುವ ರೆಸಾರ್ಟ್ ಪಾಲಿಟಿಕ್ಸ್ ಗ್ರಾಮ ಪಂಚಾಯತಿಗೂ ಕಾಲಿಟ್ಟಿದೆ. ಬೆಂಗಳೂರಿನ ರೆಸಾರ್ಟ್‍ನಲ್ಲಿ ಬರೋಬ್ಬರಿ 40 ದಿನ ಗ್ರಾಮ ಪಂಚಾಯಿತಿ ಸದಸ್ಯರು ತಂಗಿದ್ದಾರೆ. ಗ್ರಾಪಂ ಅಧ್ಯಕ್ಷರನ್ನು ಕೆಳಗಿಳಿಸಲು ಅವಿಶ್ವಾಸ ನಿರ್ಣಯ ಮಂಡನೆಗೆ ಬೆಂಗಳೂರಿನಿಂದ ವಿಮಾನದಲ್ಲಿಯೇ ಗ್ರಾಮ ಪಂಚಾಯಿತಿ ಸದಸ್ಯರು ತೆರಳಿದ್ದಾರೆ.  


COMMERCIAL BREAK
SCROLL TO CONTINUE READING

ಹೌದು, ಆಪರೇಶನ್ ಕಮಲ’ದ ಮಾದರಿಯಲ್ಲೇ ‘ಆಪರೇಶನ್ ಗ್ರಾಮ ಪಂಚಾಯಿತಿ’ ನಡೆದಿದೆ. ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮ ಪಂಚಾಯತಿಯ ಒಟ್ಟು 13 ಸದಸ್ಯರು ಗ್ರಾಪಂ ಅಧ್ಯಕ್ಷರನ್ನು ಕೆಳಗಿಳಿಲು ಪ್ಲಾನ್ ಮಾಡಿದ್ದಾರೆ. ಮಾಲತೇಶ ದುರಗಪ್ಪ ನಾಯರ್ ಎಂಬುವರು ಗ್ರಾಪಂ ಹಾಲಿ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷರ ಆಡಳಿತಾವಧಿ ವಿಚಾರದಲ್ಲಿ ನಡೆದ ಒಪ್ಪಂದದಂತೆ 15 ತಿಂಗಳು ಅಧಿಕಾರ ನಡೆಸುವುದಾಗಿ ಮಾಲತೇಶ್ ಹೇಳಿದ್ದರು.


ಇದನ್ನೂ ಓದಿ: “ಶೀಘ್ರವೇ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿ”: ಸಚಿವ ಸೋಮಣ್ಣ ಖಡಕ್ ಸೂಚನೆ


15 ತಿಂಗಳ ಬಳಿಕ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವುದಾಗಿ ಮಾಲತೇಶ್ ಪ್ರಮಾಣ ಮಾಡಿದ್ದರು. ಆದರೆ 15 ತಿಂಗಳಾದರೂ ಅಧ್ಯಕ್ಷ ಸ್ಥಾನ ಬಿಟ್ಟುಕೊಡದೇ ಸತಾಯಿಸಿದ್ದಾರೆ. ಹೀಗಾಗಿ ಗ್ರಾಪಂ ಅಧ್ಯಕ್ಷ ಮಾಲತೇಶ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಗ್ರಾಪಂ ಸದಸ್ಯರು ನಿರ್ಧರಿಸಿದ್ದಾರೆ. ಒಟ್ಟು 13 ಜನ ಗ್ರಾಪಂ ಸದಸ್ಯರಲ್ಲಿ 9 ಮಂದಿ ಸಂತೋಷ್ ಭಟ್ ಗುರೂಜಿ ಬಣದವರು, ಇನ್ನುಳಿದ ನಾಲ್ವರು ಬಿಜೆಪಿ ಸದಸ್ಯರಾಗಿದ್ದಾರೆ.


ಸಂತೋಷ ಭಟ್ ಗುರೂಜಿ ದೇವರಗುಡ್ಡದ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದಾರೆ. ಇವರು ‘ನಮ್ಮ ಊರು ನಮ್ಮ ಗುರಿ’ ಸಂಘಟನೆಯನ್ನು ಸ್ಥಾಪಿಸಿದ್ದಾರೆ. ಗ್ರಾಪಂ ಅಧ್ಯಕ್ಷ ಮಾಲತೇಶ್ ಮಾತಿಗೆ ತಪ್ಪಿದ ಕಾರಣ ಅವರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ನಿರ್ಧಾರ ಮಾಡಲಾಗಿತ್ತು. ಆದರೆ ಮಾಲತೇಶ್ ಗ್ರಾಪಂ ಸದಸ್ಯರನ್ನು ಹೈಜಾಕ್ ಮಾಡಬಹುದೆಂಬ ಆತಂಕದ ಹಿನ್ನೆಲೆ, ಅವರನ್ನೆಲ್ಲಾ ಬೆಂಗಳೂರಿನ ರೆಸಾರ್ಟ್‍ಗೆ ಸಂತೋಷ್ ಭಟ್ ಗುರೂಜಿ ಕಳಿಸಿಕೊಟ್ಟಿದ್ದಾರೆ. ರೆಸಾರ್ಟ್‍ನಿಂದ ವಿಮಾನದಲ್ಲಿ ಬಂದು ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆಯಲ್ಲಿ ಗ್ರಾಪಂ ಸದಸ್ಯರು ಭಾಗಿಯಾಗಿದ್ದಾರೆ. ತಾಲೂಕು ಉಪ ವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿಯವರು ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆ ನಡೆಸಿದ್ದಾರೆ.


ಇದನ್ನೂ ಓದಿ: ನೇರ ನೇಮಕಾತಿ ಮೂಲಕ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ : ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.