ನವದೆಹಲಿ : ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಮಾಜಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ (Bhaskar Rao)ನವದೆಹಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ )Aam Aadmi Party) ಸೇರ್ಪಡೆ ಆಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಆಮ್ ಆದ್ಮಿ ಪಾರ್ಟಿ ಗೆ ಸೇರಿರುವ ಭಾಸ್ಕರ್ ರಾವ್, ಮೊನ್ನೆ ತಮ್ಮ ಐಪಿಎಸ್ ಸೇವೆಗೆ ಗುಡ್ ಬೈ ಹೇಳಿದ್ದರು.


COMMERCIAL BREAK
SCROLL TO CONTINUE READING

ಈ ಮೂಲಕ ಕರ್ನಾಟಕದ ಆಮ್ ಆದ್ಮಿ (Aam Aadmi Party) ಪಕ್ಷಕ್ಕೆ ಹೊಸದೊಂದು ಫೇಸ್ ಸಿಕ್ಕಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಪಕ್ಷವಾಗಿ ಹೊರಹೊಮ್ಮಲು ಆಮ್ ಆದ್ಮಿ ಸಕಲ ಸಿದ್ಧತೆ ನಡೆಸಿದೆ.  ಭಾಸ್ಕರ್ ರಾವ್ (Bhaskar Rao) ಅವರು ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 


ಇದನ್ನೂ ಓದಿ : Vatal Nagaraj : ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ವಾಟಾಳ್ ನಾಗರಾಜ್


ಬಳಿಕ ಮಾತನಾಡಿದ ನಿವೃತ್ತ ಎಡಿಜಿಪಿ ಭಾಸ್ಕರ್‌ ರಾವ್‌ “ಹಿಂದೊಮ್ಮೆ ದೆಹಲಿಗೆ ಬಂದಾಗ ಇಲ್ಲಿನ ಟ್ಯಾಕ್ಸಿ ಡ್ರೈವರ್‌ರೊಬ್ಬರು ಸರ್ಕಾರಿ ಶಾಲೆಗಳು (Delhi government school)ಭಾರೀ ಅಭಿವೃದ್ಧಿ ಹೊಂದಿವೆ ಎಂದು ಹೇಳಿದ್ದರು. ನಾನು ಶಾಲೆಗಳನ್ನು ಪರಿಶೀಲಿಸಿದೆ. ಶಾಲೆಗಳಷ್ಟೇ ಅಲ್ಲದೇ ಆರೋಗ್ಯ ಕೇಂದ್ರಗಳು ಕೂಡ ಆಧುನೀಕರಣಗೊಂಡಿರುವುದು ಕಂಡುಬಂದಿತು. ಇಲ್ಲಿನ ಸರ್ಕಾರವು ಸಾಮಾನ್ಯ ಜನರಿಗೆ ಅತ್ಯಂತ ಹತ್ತಿರವಾಗಿದೆ. ಕರ್ನಾಟಕದಲ್ಲೂ ಇದೇ ಮಾದರಿಯ ಸರ್ಕಾರ ಆಡಳಿತಕ್ಕೆ ಬರಬೇಕು. ಕರ್ನಾಟಕದ ಗ್ರಾಮ ಪಂಚಾಯತಿಗಳಿಂದ ವಿಧಾನಸೌಧದ ತನಕ ಎಲ್ಲವೂ ಬದಲಾಗಬೇಕಿದೆ” ಎಂದು ಹೇಳಿದರು.


“ಕರ್ನಾಟಕದ ಜನರು ಬದಲಾವಣೆ ಬಯಸುತ್ತಿದ್ದಾರೆ. ಕರ್ನಾಟಕ ಹಾಗೂ ಬೆಂಗಳೂರು ಉತ್ತಮ ಆಡಳಿತವನ್ನು ಪಡೆಯಲು ಅರ್ಹವಾಗಿದೆ. ಆದರೆ ಆಡಳಿತ ನಡೆಸುವ ರಾಜಕಾರಣಿಗಳು ಸರಿಯಿಲ್ಲದ ಕಾರಣ ಕರ್ನಾಟಕದ ಜನರಿಗೆ ಉತ್ತಮ ರಸ್ತೆ, ಉತ್ತಮ ಶಾಲೆ, ಉತ್ತಮ ಆಸ್ಪತ್ರೆ ಮುಂತಾದ ಸೌಲಭ್ಯಗಳು ಸಿಗುತ್ತಿಲ್ಲ. ಆಮ್‌ ಆದ್ಮಿ ಪಾರ್ಟಿಯಿಂದ ಮಾತ್ರ ಕರ್ನಾಟಕದ ಬದಲಾವಣೆ ಸಾಧ್ಯ” ಎಂದು ಭಾಸ್ಕರ್‌ ರಾವ್‌ ಹೇಳಿದರು.


ಇದನ್ನೂ ಓದಿ : 2020-21ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕ್ರೀಡಾರತ್ನ, ಕ್ರೀಡಾ ಪೋಷಕ ಪ್ರಶಸ್ತಿ ಘೋಷಣೆ


ಆಮ್‌ ಆದ್ಮಿ ಪಾರ್ಟಿ ನಾಯಕರಾದ ಸಿಎಂ ಅರವಿಂದ್‌ ಕೇಜ್ರಿವಾಲ್‌ (Aravind Kejriwal) ಹಾಗೂ ಡಿಸಿಎಂ ಮನೀಷ್‌ ಸಿಸೋದಿಯಾ ಸಮ್ಮುಖದಲ್ಲಿ, ನಿವೃತ್ತ ಎಡಿಜಿಪಿ ಭಾಸ್ಕರ್‌ ರಾವ್‌ರವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.