Santosh Hegde : ಎಸಿಬಿ ರದ್ದು : `ಹೈಕೋರ್ಟ್ ಆದೇಶ ನನಗೆ ಬಹಳ ಸಂತೋಷ ತಂದಿದೆ`
ಹೈಕೋರ್ಟ್ ಆದೇಶ ನನಗೆ ಬಹಳ ಸಂತೋಷ ತಂದಿದೆ. ಇದು ಉತ್ತಮವಾದ ನಿರ್ಧಾರ ತೆಗೆದುಕೊಂಡಿದ್ದಾರೆ
ಬೆಂಗಳೂರು : ಹೈಕೋರ್ಟ್ ಆದೇಶ ನನಗೆ ಬಹಳ ಸಂತೋಷ ತಂದಿದೆ. ಇದು ಉತ್ತಮವಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಎಸಿಬಿ ರದ್ದು ಗೊಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಂತೋಷ ಹೆಗ್ಡೆ, ಅದರೆ ಲೋಕಾಯುಕ್ತಕ್ಕೆ ಅಧಿಕಾರವನ್ನು ನೀಡಬೇಕು.. ಜೊತೆಗೆ ಉತ್ತಮ ಅಧಿಕಾರಿಗಳನ್ನು ಕೂಡ ನೇಮಿಸಬೇಕು. ಅಧಿಕಾರಿಗಳ ನೇಮಕದಲ್ಲೂ ಕೂಡ ಸರ್ಕಾರ ತಮಗೆ ಬೇಕಾದ ಅಧಿಕಾರಿಗಳನ್ನ ನೇಮಕ ಮಾಡಬಾರದು. ಲೋಕಾಯುಕ್ತರೇ ತಮಗೆ ಬೇಕಾದ ಅಧಿಕಾರಿಗಳನ್ನ ನೇಮಕ ಮಾಡಿಕೊಳ್ಳಬೇಕು. ಜೊತೆಗೆ ಲೋಕಾಯುಕ್ತಕ್ಕೆ ಕೆವಲ ಅಧಿಕಾರ ನೀಡೋದಲ್ಲ. ಅದಕ್ಕೆ ಬೇಕಾದ ಸೌಲಭ್ಯಗಳನ್ನು ನೀಡಬೇಕು. ಹಾಗೇ ಲೋಕಾಯುಕ್ತರು ಕೊಟ್ಟ ಜವಾಬ್ದಾರಿ ಚನ್ನಾಗಿ ನಿರ್ವಹಿಸಬೇಕು. ಎಲ್ಲಾ ಅಧಿಕಾರ ಸೌಲಭ್ಯ ವನ್ನು ಕೂಟ್ಟ ನಂತರ ಉತ್ತಮವಾಗಿ ನಿರ್ವಹಿಸಬೇಕು. ಇಲ್ಲವಾದ್ರೇ ನಾನೇ ವಿರೋಧ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Karnataka High Court : ಎಸಿಬಿ ರದ್ದುಗೊಳಿಸಿ ತೀರ್ಪು ನೀಡಿದ ಹೈಕೋರ್ಟ್!
ಭ್ರಷ್ಟಾಚಾರ ನಿಗ್ರಹದಳ ಲೋಕಾಯುಕ್ತ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.ಈ ಮೂಲಕ ಎಸಿಬಿ ರಚಿಸಿದ್ದ ಸಿದ್ದರಾಮಯ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ಎಸಿಬಿಯಲ್ಲಿರುವ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿ, ಎಸಿಬಿಯ ಎಲ್ಲಾ ಪೊಲೀಸ್ ಠಾಣೆಗಳನ್ನು ರದ್ದುಪಡಿಸುವಂತೆ ಹೈಕೋರ್ಟ್ ಆದೇಶಿಸಿದೆ. ಅಷ್ಟೇ ಅಲ್ಲದೇ ಲೋಕಾಯುಕ್ತ ಪೊಲೀಸ್ ಠಾಣೆಗಳನ್ನು ಮರುಸ್ಥಾಪಿಸುವಂತೆ ಹೈಕೋರ್ಟ್ ಆದೇಶದಲ್ಲಿ ಸೂಚಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.