K Sudhakar : '60 ವರ್ಷ ಮೇಲ್ಪಟ್ಟವರು ಅತೀ ಬೇಗ 3ನೇ ಡೋಸ್, ಮಾಸ್ಕ್ ಕಡ್ಡಾಯ' 

60 ವರ್ಷದ ಮೇಲಿರುವವರು ಅತೀ ಬೇಗ ಮೂರನೇ ಡೋಸ್ ಪಡೆಯಬೇಕು. ಮಾಸ್ಕ್ ಕಡ್ಡಾಯ ಮಾಡಿಕೊಳ್ಳಿ. ಕೋವಿಡ್ ಅಂದರೆ ಭಯ ಹೋಗಿದೆ. ಶೀತ ಕೆಮ್ಮು, ಮೈಕೈನೋವು ಇರುತ್ತೇ ಒಂದು ವಾರದ ನಂತ್ರ ಹೋಗುತ್ತೆ ಅಂತ ಅಸಡೆ ಇದೆ. ಲಸಿಕೆ ಲಭ್ಯ ಇದ್ರೂ ತೆಗೆದುಕೊಳ್ಳದೇ ಇರುವುದು ಮಹಾ ಅಪರಾಧವಾಗುತ್ತದೆ ಎಂದು ಮನವಿ ಮಾಡಿದ್ದಾರೆ. 

Written by - Zee Kannada News Desk | Last Updated : Aug 11, 2022, 05:25 PM IST
  • ಒಂದು ವರ್ಷ ಆದ ಮೇಲೆ ಮೂರನೇ ಡೋಸ್ ತೆಗೆದುಕೊಳ್ಳಬೇಕು
  • ಧಾರವಾಡದಲ್ಲಿದೆ ಪಾಸಿಟಿವ್ ರೆಟ್ ಅತೀ ಹೆಚ್ಚು
  • 60 ವರ್ಷದ ಮೇಲಿರುವವರು ಅತೀ ಬೇಗ ಮೂರನೇ ಡೋಸ್ ಪಡೆಯಬೇಕು
K Sudhakar : '60 ವರ್ಷ ಮೇಲ್ಪಟ್ಟವರು ಅತೀ ಬೇಗ 3ನೇ ಡೋಸ್, ಮಾಸ್ಕ್ ಕಡ್ಡಾಯ'  title=

ಬೆಂಗಳೂರು : ಒಂದು ವರ್ಷ ಆದ ಮೇಲೆ ಮೂರನೇ ಡೋಸ್ ತೆಗೆದುಕೊಳ್ಳಬೇಕು. ಮೂರು ಡೋಸ್ ತೆಗೆದುಕೊಂಡವರಿಗೆ ಯಾವುದೇ ರೀತಿಯ ಸಾವುನೋವು ಆಗುವುದಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. 

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸುಧಾಕರ್, ಕೋವಿಡ್ ಬಗ್ಗೆ ಬಹಳ ದಿನಗಳ ಬಗ್ಗೆ ರಿವ್ಯೂ ಮಾಡಲಾಗಿದೆ. ಪಾಸಿಟಿವ್ ರೆಟ್ ಎಷ್ಟಿದೆ? ಕಳದೆ ಒಂದೆರಡು ತಿಂಗಳಿನಿಂದ ಪಾಸಿಟಿವ್ ರೆಟ್ ಹೆಚ್ಚಾಗುತ್ತಿದೆ. ದೆಹಲಿಯಲ್ಲಿ ಶೇ.15 ರಷ್ಟು ಹೆಚ್ಚಾಗಿದೆ. ನಮ್ಮಲ್ಲಿ ಶೇ. 7 ರಷ್ಟು ಹೆಚ್ಚಾಗಿದೆ. ಅತೀ ಹೆಚ್ಚು ಧಾರವಾಡದಲ್ಲಿದೆ. ಯಾರಿಗೆ ರೋಗದ ಲಕ್ಷಣಗಳಿವೆ ಅವರಿಗೆ ನಾವು ಟೆಸ್ಟ್ ಮಾಡಲಾಗಿತ್ತಿದೆ. ಪ್ರಾಥಮಿಕ ಸಂಪರ್ಕ ಇದ್ದವರಲ್ಲಿ ಲಕ್ಷಣಗಳು ಕಂಡುಬಂದಿಲ್ಲ ಅವರಿಗೂ ಟೆಸ್ಟ್ ಮಾಡಲಾಗುತ್ತಿದೆ. ಪಾಸಿಟಿವ್ ರೆಟ್ ಮೂರನೇ ಡೋಸ್ ತೆಗೆದುಕೊಂಡವರಲ್ಲಿ ಕಡಿಮೆಯಾಗಿದೆ. ಪಿಎಂ ಮೋದಿಯವರು ಎಲ್ಲಾರನ್ನೂ ಕಾಪಾಡಬೇಕು ಅಂತ ಮೂರನೇ ಡೋಸ್ ನ್ನ ಉಚಿತವಾಗಿ ಕೊಡುತ್ತಿದ್ದಾರೆ. ಲಕ್ಷಾಂತರ ಡೋಸ್ ಗಳು ನಮ್ಮಲ್ಲಿ ಇದ್ರು ಕೂಡ ಜನ ಬರದೇ ಇರುವುದು ಸರಿಯಲ್ಲ ಎಂದರು. 

ಇದನ್ನೂ ಓದಿ : ಕೋವಿಡ್‌ ಲಸಿಕೆಯ ಮೂರನೇ ಡೋಸ್‌ ಪಡೆದವರು 17% ಮಾತ್ರ : ಸಚಿವ ಸುಧಾಕರ್‌

ಇನ್ನು ಮುಂದುವರೆದು ಮಾತನಾಡಿದ ಅವರು,  ಮಂಕಿಪಾಕ್ಸ್ ವಿಚಾರವಾಗಿ ಚರ್ಚೆಯಾಗಿದೆ. 9 ಪ್ರಕರಣಗಳು ದಾಖಲಾಗಿದೆ. ಕೇರಳದಲ್ಲಿ 5 ಕೇಸ್, ದೆಹಲಿಯಲ್ಲಿ 4 ಕೇಸ್ ಪತ್ತೆಯಾಗಿದೆ. ನಮ್ಮ ರಾಜ್ಯದಲ್ಲಿ ಯಾವುದೇ ಕೇಸ್ ಪತ್ತೆಯಾಗಿಲ್ಲ. ಆದ್ರೆ ಕೇರಳ ಗಡಿಭಾಗ ಹತ್ರ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನ ವಹಿಸಬೇಕಾಗಿದೆ. ಈ ಬಾರೀ ಮಳೆ ಹೆಚ್ಚಾಗಿರುವುದರಿಂದ ಕೆಲವು ರೋಗಗಳು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

60 ವರ್ಷದ ಮೇಲಿರುವವರು ಅತೀ ಬೇಗ ಮೂರನೇ ಡೋಸ್ ಪಡೆಯಬೇಕು. ಮಾಸ್ಕ್ ಕಡ್ಡಾಯ ಮಾಡಿಕೊಳ್ಳಿ. ಕೋವಿಡ್ ಅಂದರೆ ಭಯ ಹೋಗಿದೆ. ಶೀತ ಕೆಮ್ಮು, ಮೈಕೈನೋವು ಇರುತ್ತೇ ಒಂದು ವಾರದ ನಂತ್ರ ಹೋಗುತ್ತೆ ಅಂತ ಅಸಡೆ ಇದೆ. ಲಸಿಕೆ ಲಭ್ಯ ಇದ್ರೂ ತೆಗೆದುಕೊಳ್ಳದೇ ಇರುವುದು ಮಹಾ ಅಪರಾಧವಾಗುತ್ತದೆ ಎಂದು ಮನವಿ ಮಾಡಿದ್ದಾರೆ. 

ಸದ್ಯಕ್ಕೆ ದಂಡ ಹಾಕುವ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ. ಆದ್ರೆ ಎಲ್ಲಾರೂ ಮಾಸ್ಕ್ ಹಾಕಬೇಕು. 15 ದಿನಗಳ ನಂತ್ರ ಮತ್ತೆ ಸಭೆ ಕರೆಯಲಾಗುವುದು. ಆರ್ಥಿಕ, ಸಾಮಾಜಿಕ ಚಟುವಟಿಕೆಗಳನ್ನು ನಿಯಂತ್ರಣ ಮಾಡುವ ಪ್ರಶ್ನೆ ಸರ್ಕಾರದ ಮುಂದೆ ಇಲ್ಲ. ಯಾವುದೇ ಚಟುವಟಿಕೆ ತೆಗೆದುಕೊಳ್ಳುವಾಗ ಜನರೇ ಜವಾಬ್ದಾರಿ ತೆಗೆದುಕೊಂಡ್ರೆ ಕೋವಿಡ್ ನಿಯಂತ್ರಣಕ್ಕೆ ಬರುತ್ತೆ ಅಂತ ಹೇಳಿದ್ದಾರೆ. ತಕ್ಷಣ ಯಾವುದೇ ನಿಯಂತ್ರಣ ತೆಗೆದುಕೊಳ್ಳುವ  ಪ್ರಸ್ತಾವ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 

60 ವರ್ಷ ಮೇಲ್ಪಟ್ಟವರು 60 ವರ್ಷ ಮೇಲ್ಪಟ್ಟವರಿಗೆ ಆಸ್ಪತ್ರೆಯಲ್ಲಿ ದಾಖಲು ಮಾಡಿ. ಯಾವುದೇ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗೆ ಚಿಕಿತ್ಸೆ ಇಲ್ಲ ಅಂತ ಕಳುಹಿಸುವಂತಿಲ್ಲ. ಇವತ್ತು ಸರ್ಕಾರದಿಂದಲೂ ಆದೇಶ ನೀಡಲಾಗುವುದು. ಈ ಬಗ್ಗೆ ನನಗೆ ದೂರುಗಳು ಬಂದಿವೆ. ಹಾಗಾಗಿ ಸರ್ಕಾರದಿಂದ ಆದೇಶ ಹೊರಡಿಸಲಾಗುವುದು. ಚಿಕಿತ್ಸೆ ಪಡೆಯದೇ ಇದ್ರೆ, ಕೆಪಿಎಂಇ ಆ್ಯಟ್ ಅಡಿಯಲ್ಲಿ ಕ್ರಮವಾಗುತ್ತದೆ. 

ರಾಜ್ಯದಲ್ಲಿ 1.6 ಕೋಟಿ ಫಸ್ಟ್ ಹಾಗೂ ಎರಡನೇ ಡೋಸ್ ತೆಗದುಕೊಂಡಿದ್ದಾರೆ.ವ್ಯಾಕ್ಸಿನ್ ನಿಂದ ಸಾವಾಗಿದೆ ಎಂದು ಎಲ್ಲಿಯೂ ಸಾಭಿತಾಗಿಲ್ಲ. ಮೂರನೇ ಡೋಸ್ ಫ್ರೀಯಾಗಿ ಕೊಡಲಾಗುತ್ತಿದೆ. ಇದರ ಉಪಯೋಗವನ್ನ  ಜನರು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ನಮ್ಮಲ್ಲಿ ಕೊರ್ಬಿವ್ಯಾಕ್ಸ್ ಲಸಿಕೆ 1.5 ಲಕ್ಷ ಸ್ಟಾಕ್ ಇದೆ, ನಾಳೆಯಿಂದ ತೆಗೆದುಕೊಳ್ಳಬಹುದು ಫ್ರೀಯಾಗಿ ಕೊಡಲಾಗುವುದು ಕೋವಿಶೀಲ್ಡ್, ಕೋವ್ಯಾಕ್ಸೀನ್ ಯಾವುದೇ ಲಸಿಕೆ 2 ಡೋಸ್ ಪಡೆದಿದ್ರು. 3ನೇ ಡೋಸ್ ಆಗಿ ಇದನ್ನ ಪಡೆಯಬಹುದು, ಕೊರ್ಬಿವ್ಯಾಕ್ಸ್ ಹೆಚ್ಚು ಎಫೆಕ್ಟೀವ್ ಆಗಿದೆ. ಈಗಾಗಲೆ 12-15 ವರ್ಷದ ಮಕ್ಕಳಿಗೆ ಈ ಲಸಿಕೆ ಕೊಡಲಾಗಿದೆ, ಯಾವುದೇ ಪ್ರಾಬ್ಲಮ್ ಆಗಿಲ್ಲ ಒಳ್ಳೆಯ ರಿಸಲ್ಟ್ ಬಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ವೀರಪ್ಪನ್ ತಾಣವಾಗಿದ್ದ ಈ ಊರು ಇಂದು ಯೋಧರ ಗ್ರಾಮ.. ಇಲ್ಲಿದೆ ಸೇನಾ ತರಬೇತಿ ಅಕಾಡೆಮಿ

ಸಿಎಂ ಪದೇ ಪದೇ ದೆಹಲಿ ಹೋಗುವವ ವಿಚಾರವಾಗಿ ಪ್ರತಿಕ್ರಿಯೆ ನೀಡಿದೆ ಅವರು, ಆಡಳಿತ ಯಂತ್ರದ ವಿಚಾರವಾಗಿ ಸಿಎಂ ದೆಹಲಿಗೆ ಹೋಗುತ್ತಾರೆ. ಕೇಂದ್ರ ಸಚಿವ ಜೊತೆಗೆ ಉತ್ತಮ ಸಂಬಂಧಿ ಇಟ್ಟುಕೊಳ್ಳಬೇಕು ಅಲ್ವಾ. ನಮ್ಮ ಮುಖ್ಯಮಂತ್ರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಬಹಳ ವರ್ಷದ ನಂತ್ರ ಇಂತಹ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಒಂದು ಆಡಳಿತವನ್ನ ಹಿಡಿಯದಲ್ಲಿ ಇಟ್ಟುಕೊಂಡು  ಆಡಳಿತ  ನಡೆಸುತ್ತಿದ್ದಾರೆ. 

ಕಾಂಗ್ರೆಸ್ ನವರಿಗೆ ಕೆಲಸ ಇಲ್ಲ. ಹಾಗಾಗಿ ಕೆಲಸ ಹುಡುಕಿಕೊಂಡು ಹೀಗೆ ಮಾತ್ನಾಡುತ್ತಿದ್ದಾರೆ. ಕಾಂಗ್ರೆಸ್ ಡಬಲ್ ಡೋರ್ ಬಸ್ ಇದ್ದ ಹಾಗೇ, ಯಾರು ಯಾವಾಗ್ ಹೇಗೆ ತಿರುಗುತ್ತೋ ಗೊತ್ತಿಲ್ಲ. ಯಾರನ್ನ ಎಲ್ಲಿ ಹೇಗೆ ಇಳಿಯುತ್ತಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News