ಬೆಂಗಳೂರು: ಪಠ್ಯ ಪರಿಷ್ಕರಣ ಸಮಿತಿಯನ್ನು ಹೊಸದಾಗಿ ರಚಿಸಬೇಕು ಮತ್ತು ಅದನ್ನು ನ್ಯಾಯಾಂಗದ ರೀತಿಯಲ್ಲಿ ಸ್ವಾತಂತ್ರ್ಯವಾಗಿ ಕೆಲಸ ಮಾಡಲು ಹಕ್ಕು ನೀಡಬೇಕು ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಒತ್ತಾಯಿಸಿದ್ದಾರೆ.


COMMERCIAL BREAK
SCROLL TO CONTINUE READING

ನಗರದ ಗಾಂಧಿಭವನದಲ್ಲಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ವತಿಯಿಂದ ಬುಧವಾರ ಪಠ್ಯ ಪರಿಷ್ಕರಣೆ ಕುರಿತು ಸಂವಾದವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾಗಮೋಹನ್ ದಾಸ್ ರವರು,


ಸ್ವಾತಂತ್ರ್ಯದ ನಂತರ ಶಿಕ್ಷಣ ವ್ಯವಸ್ಥೆಯಲ್ಲಿಗುಣಾತ್ಮಕ ಮತ್ತು ಸಕಾರಾತ್ಮಕ ಕೊರತೆಯ ಶಿಕ್ಷಣವಾಗಿದೆ. ಅದರಲ್ಲೂ ಮುಖ್ಯವಾಗಿ ಗುಣಾತ್ಮಕ ಶಿಕ್ಷಣದ ಕುರಿತು ಇಂದು ಚರ್ಚೆ ಮಾಡುವ ಅಗತ್ಯ ಇದೆ. ಇದನ್ನು ಮಾಡುವ ಹಾದಿಯಲ್ಲಿ ಪಠ್ಯ ಪುಸ್ತಕಗಳು ನೈಜ್ಯತೆ ಮತ್ತು ಸಮತೋಲನದ ವಿಷಯಗಳನ್ನು ಒಳಗೊಳ್ಳಬೇಕು. ಅದಕ್ಕೆ ರಚಿಸುವ ಸಮಿತಿ ಸ್ವಾತಂತ್ಯವಾಗಿದ್ದು ಮತ್ತು ವಿಷಯಾಧಾರಿತ ಮನಸ್ಥಿತಿಯಿಂದ ಹೊರಗಿಡಬೇಕು ಎಂದರು. ಜೊತೆಗೆ ನ್ಯಾಯಾಂಗದ ರೀತಿಯಲ್ಲೇ ಪಠ್ಯ ಪಸ್ತಕ ಪರಿಷ್ಕರಣೆ ಸಮಿತಿಯನ್ನು ಸ್ವಾತಂತ್ರ್ಯವಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.


ಇದನ್ನೂ ಓದಿ: ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಿಸದ ಸರ್ಕಾರ: ಸಿದ್ದರಾಮಯ್ಯ ಆಕ್ರೋಶ


ಮಕ್ಕಳಲ್ಲಿ ಅಸಮಾನತೆ, ಸಾಮಾಜಿಕ ಗೊಂದಲ ಸೃಷಿಸುವಂತೆ ಮಾಡಬಾರದು;


ಕಾಲ ಬದಲಾದಂತೆ ಮಕ್ಕಳಿಗೆ ನೀಡುವ ಮಾಹಿತಿಯನ್ನು ಅಂದಿನ ಪರಿಸ್ಥಿತಿಗೆ ತಕ್ಕಂತೆ ಬದಲಿಸಬೇಕು. ಆದರೆ ಅದು ಸತ್ಯ ಮತ್ತು ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವಂತೆ ಇರಬೇಕು. ಅದನ್ನು ಬಿಟ್ಟು ಮಕ್ಕಳಲ್ಲಿ ಅಸಮಾನತೆ, ಸಾಮಾಜಿಕ ಗೊಂದಲ ಸೃಷಿಸುವಂತೆ ಮಾಡಬಾರದು. ಮಕ್ಕಳು ಯಾವುದೇ ಒಂದು ವಿಚಾರವಾದಿಯಾಗಿ ಯೋಚಿಸುವಂತೆ ಮಾಡಬಾರದು. ಬೆಳೆಯುವ ಮಕ್ಕಳು ರಾಜ್ಯ ಮತ್ತು ರಾಷ್ಟ್ರ ಪ್ರೇಮಿಗಳಾಗಿ, ಸಂವಿಧಾನ ಆಧಾರದ ಮೇಲೆ ಅವರ ಮನಸ್ಥಿತಿ ಬೆಳೆಯಬೇಕು ಅದಕ್ಕೆ ತಕ್ಕಂತೆ ಪಠ್ಯ ಕಾಲ ಕಾಲಕ್ಕೆ ಬದಲಾಯಿಸಬೇಕು ಎಂದು ತಿಳಿಸಿದರು. 


ವೈಯಕ್ತಿಕ ತೇಜೋವದೆ ನಡೆದಿದೆ; 


ಬೆಂಗಳೂರು: ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಮಾತನಾಡಿ, ರಾಷ್ಟೀಯ ಪಠ್ಯ ಕ್ರಮ ಮತ್ತು ರಾಜ್ಯ ಪಠ್ಯ ಕ್ರಮ ಚೌಕಟ್ಟು ಇದ್ದು, ಅದನ್ನು ಆಧರಿಸಿ ಪಠ್ಯ ಪರಿಷ್ಕರಣೆ ಆಗಬೇಕು. ಅದಕ್ಕೆ ಅದರದ್ದೇ ಆದ ನೀತಿ ನಿಯಮವಿದೆ. ಆದರೆ ಇಂದು ನಡೆದಿರುವ ಪಠ್ಯ ಪರಿಷ್ಕರಣೆ ಯಾವುದನ್ನು ಒಳಗೊಂಡಿಲ್ಲ. ಇಲ್ಲಿ ವೈಯಕ್ತಿಕ ತೇಜೋವದೆ ಮಾಡುವ ಕೆಲಸ ಮಾಡಿದ್ದಾರೆ ಎಂದು ಅಸಮಧಾನ ಹೊರಹಾಕಿದರು.  ನಾವು ಮಾಡಿದ್ದಾಗ ಯಾರೂ ಹಿಂದಿನ ಸಮಿತಿಯಗಳ ಕುರಿತು ಮಾತನಾಡಿಲ್ಲ.ನಮ್ಮ ಪಠ್ಯ ಪರಿಷ್ಕರಣಾ ಸಮಿತಿ ಇರುವ ಸತ್ಯವನ್ನು ಎತ್ತಿ ಹಿಡಿದಿದೆ ಎಂದು ಹೇಳಿದರು.


ಇದನ್ನೂ ಓದಿ: ​Job Alert: ಕೃಷಿ ವಿವಿ ತಾತ್ಕಾಲಿಕ ಹುದ್ದೆಗಳಿಗೆ ಜು.21 ರಂದು ನೇರ ಸಂದರ್ಶನ


ಇನ್ನುಳಿದಂತೆ ಪ್ರೊ. ರಾಜಪ್ಪ ದಳವಾಯಿ, ಡಾ. ನಿರಂಜನಾರಾಧ್ಯ ವಿ. ಪಿ., ಬಿ. ಎಂ. ಹನೀಷ್, ಕೆ. ಆರ್. ಸೌಮ್ಯ, ಜಿ. ಬಿ. ಪಾಟೀಲ್, ಬಿಟಿ ಲಲಿತಾ ನಾಯಕ್ ಮತ್ತಿತರರು ಸಂವಾದದಲ್ಲಿ ಹಾಜರಿದ್ದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ