ಬೆಂಗಳೂರು: ಕಳೆದ ಕೆಲ ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದು, ನಿನ್ನೆ 'ಹಿಟ್ ಅಂಡ್ ರನ್'ಗೆ ಯುವತಿ ಬಲಿಯಾಗಿದ್ದಾಳೆ. ಬೆಂಗಳೂರಿನಿಂದ ಕೆಐಎಎಲ್ ಮಾರ್ಗವಾಗಿ ಬೈಕ್ ಸವಾರರು ತೆರಳುತ್ತಿದ್ದಾಗ ಯಲಹಂಕ‌ ರೈಲ್ವೆ ಬ್ರಿಡ್ಜ್ ಬಳಿ ಈ ಘಟನೆ ಸಂಭವಿಸಿದೆ. 


COMMERCIAL BREAK
SCROLL TO CONTINUE READING

ಯಲಹಂಕ‌ ರೈಲ್ವೆ ಬ್ರಿಡ್ಜ್  (Yelahanka Railway Bridge) ಬಳಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ನಿನ್ನೆ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ. ಮತ್ತೊಬ್ಬನ ಪರಿಸ್ಥಿತಿ ಚಿಂತಾಜನಕವಾಗಿದೆ. 


ಇದನ್ನೂ ಓದಿ- Lockdown In Karnataka: ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಡೌಟ್; ಒಂದುವೇಳೆ ಆದರೂ ಯಾವಾಗ?


ನಿನ್ನೆ  ಮಧ್ಯಾಹ್ನ ಭೀಕರ ಅಪಘಾತದಲ್ಲಿ (Accident) ಪಾದಚಾರಿ ಜೀವ ಕಳೆದುಕೊಂಡಿದ್ದ. ನಿನ್ನೆ ರಾತ್ರಿ ಕೂಡ ಮತ್ತೊಂದು ಘೋರ ದುರಂತ ಸಂಭವಿಸಿ ಯುವತಿ ಜೀವ ಬಿಟ್ಟಿದ್ದಾಳೆ. ಆದರೆ ಯುವತಿಯ ಗುರುತು ಪತ್ತೆಯಾಗಿಲ್ಲ.


ಇದನ್ನೂ ಓದಿ- ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವ ಗಂಡಸ್ತನ ಇರೋದು ಬಿಜೆಪಿಗೆ ಮಾತ್ರ: ಅಶ್ವತ್ಥ ನಾರಾಯಣ


ಬೆಂಗಳೂರಿನಿಂದ ಕೆಐಎಎಲ್ ಏರ್ಪೋರ್ಟ್ (KIAL Airport) ಮಾರ್ಗವಾಗಿ ತೆರಳುತ್ತಿದ್ದ ಬೈಕ್ ಸವಾರರಿಗೆ ಅಪರಿಚಿತ ವಾಹನ ಗುದ್ದಿದೆ. ಈ ವೇಳೆ ಹಿಂದೆ ಕೂತಿದ್ದ 25 ವರ್ಷದ ಯುವತಿ ಜೀವ ಬಿಟ್ಟರೆ, ಬೈಕ್ ಓಡಿಸುತ್ತಿದ್ದ ಯುವಕನ ಪರಿಸ್ಥಿತಿ ಗಂಭೀರವಾಗಿದೆ. ಹೀಗೆ ಒಂದೇ ಸ್ಥಳದಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಎರಡೆರಡು ಭೀಕರ ಅಪಘಾತಗಳು ಸಂಭವಿಸಿವೆ. ಯಲಹಂಕ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.