ಬೆಂಗಳೂರು: ನಗರದಲ್ಲಿ ಲಾಕ್‌ಡೌನ್ ನಂತರ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಬೆಂಗಳೂರು ಟ್ರಾಫಿಕ್ ಪೊಲೀಸ್ (Bengaluru Traffic Police) ಅಂಕಿಅಂಶಗಳ ಪ್ರಕಾರ, ಈ ವರ್ಷದ ಅಕ್ಟೋಬರ್‌ವರೆಗೆ 2,647 ಅಪಘಾತಗಳು ಮತ್ತು 505 ಮಾರಣಾಂತಿಕ ಅಪಘಾತಗಳನ್ನು ಸಂಭವಿಸಿವೆ.


COMMERCIAL BREAK
SCROLL TO CONTINUE READING

ಹೆಚ್ಚುತ್ತಿರುವ ಖಾಸಗಿ ವಾಹನಗಳು ಮತ್ತು ಅಸಮವಾದ ರಸ್ತೆ ಮೇಲ್ಮೈಯಿಂದಾಗಿ  ರಸ್ತೆ ಅಪಘಾತ ಪ್ರಕರಣಗಳಲ್ಲಿ (Bengaluru Road accident) ಈ ಅಪಾಯಕಾರಿ ಏರಿಕೆ ಕಂಡು ಬಂದಿದೆ ಎಂದು ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಅತಿವೇಗದ ಚಾಲನೆಯೂ ಹಲವಾರು ಅಪಘಾತಗಳಿಗೆ ಕಾರಣವಾಗುತ್ತಿದೆ. ಅಕ್ಟೋಬರ್ 2021 ರವರೆಗೆ 49,000 ಕ್ಕೂ ಹೆಚ್ಚು ವೇಗದಿಂದ ಉಂಟಾದ ಅಪಘಾತ ಪ್ರಕರಣಗಳು ದಾಖಲಾಗಿವೆ. 2019 ರಲ್ಲಿ, 61,531, 2020 ರಲ್ಲಿ ಲಾಕ್‌ಡೌನ್ ಹೊರತಾಗಿಯೂ, ಈ ಸಂಖ್ಯೆ 59,071 ಆಗಿದೆ.


ಎಲ್ಲಾ ಮೂರು ವರ್ಷಗಳ ಅಂಕಿಅಂಶಗಳನ್ನು ನೋಡಿದಾಗ ಮಾಸಿಕ ಸರಾಸರಿ (ತಿಂಗಳೊಂದಕ್ಕೆ ಸಂಭವಿಸುವ ಅಪಘಾತಗಳ ಸಂಖ್ಯೆ) 5,000 ಪ್ರಕರಣಗಳ ಹತ್ತಿರ ಉಳಿದಿದೆ.


ಲಾಕ್‌ಡೌನ್ ನಂತರ, ಖಾಸಗಿ ವಾಹನಗಳ ಸಂಖ್ಯೆ, ವಿಶೇಷವಾಗಿ ದ್ವಿಚಕ್ರ ವಾಹನಗಳ ಸಂಖ್ಯೆಯು ತೀವ್ರವಾಗಿ ಹೆಚ್ಚಾಗಿದೆ. ಹೀಗಾಗಿ ಅಪಘಾತಗಳ ಸಾಧ್ಯತೆಗಳು ಸಹ ಹೆಚ್ಚಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬಿ.ಆರ್.ರವಿಕಾಂತೇಗೌಡ ಹೇಳಿದ್ದಾರೆ.


ರಸ್ತೆಗಳಲ್ಲಿ ಹೇಗೆ ಚಾಲನೆ ಮಾಡಬೇಕೆಂಬುದರ ಬಗ್ಗೆ ಜನರಲ್ಲಿ ಅರಿವು ಕಡಿಮೆಯಾಗಿದೆ. ಅವರು ತಾವು ಹೋಗಬೇಕಾದ ಜಾಗಕ್ಕೆ ತಲುಪುವ ಆತುರದಲ್ಲಿರುತ್ತಾರೆ. ವಿಶೇಷವಾಗಿ ಎಲಿವೇಟೆಡ್/ಹೈ ಡೆನ್ಸಿಟಿ ಕಾರಿಡಾರ್‌ಗಳು ಮತ್ತು ರಿಂಗ್ ರೋಡ್‌ಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ (Road accidents increased in Bengaluru) ಎಂದು ಹೇಳಿದ್ದಾರೆ.


ಮುಖ್ಯವಾಗಿ ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ಸೆಕ್ಷನಲ್ ಸ್ಪೀಡ್ ರೆಗ್ಯುಲೇಟರ್‌ಗಳನ್ನು ಸ್ಥಾಪಿಸಲು ಟ್ರಾಫಿಕ್ ಪೊಲೀಸರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೊಂದಿಗೆ ಸಮಾಲೋಚಿಸಿದ್ದಾರೆ. NHAI ತಾತ್ವಿಕವಾಗಿ ಒಪ್ಪಿಗೆ ನೀಡಿದೆ. 50 ಜಂಕ್ಷನ್‌ಗಳಲ್ಲಿ ರಸ್ತೆಗಳ ಮಧ್ಯದಲ್ಲಿ ವೇಗ ಉಲ್ಲಂಘನೆ ಪತ್ತೆ ಕ್ಯಾಮೆರಾಗಳನ್ನು ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದ್ದು, ಶೀಘ್ರದಲ್ಲಿಯೇ ಜಾರಿಯಾಗಲಿದೆ ಎಂದು ಹೇಳಿದ್ದಾರೆ.


ಕೆಟ್ಟ ರಸ್ತೆಗಳು, ವರವೋ ಅಥವಾ ಶಾಪವೋ?


ಅಪಘಾತಗಳಿಗೆ ಕಾರಣವಾಗುವಷ್ಟು, ಕೆಟ್ಟ ರಸ್ತೆಗಳು ವಾಹನಗಳ ನಿಧಾನ ಚಲನೆ ಮತ್ತು ಕಡಿಮೆ ಅಪಘಾತಗಳಿಗೂ ಕೆಲವೊಮ್ಮೆ ಕಾರಣವಾಗುತ್ತವೆ ಎಂದು ಸಂಚಾರ ಪೊಲೀಸರು ನಂಬುತ್ತಾರೆ. ವಾಹನ ಚಾಲಕರು ಹೊಂಡಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಸಂಚರಿಸುವಾಗ ಕಳೆದುಕೊಳ್ಳುವ ಸಮಯವನ್ನು ಸರಿದೂಗಿಸಲು ಉತ್ತಮ ರಸ್ತೆಗಳಲ್ಲಿ ವೇಗವಾಗಿ ಚಲಿಸುತ್ತಾರೆ. ಇದು ಕೆಲವೊಮ್ಮೆ ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಸಹ ಪೊಲೀಸರು ಹೇಳುತ್ತಾರೆ.


ಒಟ್ಟಿನಲ್ಲಿ ಒತ್ತಡ ಮತ್ತು ಅತಿಯಾದ ವೇಗ ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಲು ಮುಖ್ಯ ಕಾರಣವಾಗಿವೆ. 


ಇದನ್ನೂ ಓದಿ: WATCH:'ಕ್ಷಮಿಸಿ, ಸರಿ!' ಮಾಧ್ಯಮದವರ ಬಳಿ ಕ್ಷಮೆ ಕೇಳಿದ ಅಲ್ಲು ಅರ್ಜುನ್.. ಕಾರಣವೇನು?