WATCH:'ಕ್ಷಮಿಸಿ, ಸರಿ!' ಮಾಧ್ಯಮದವರ ಬಳಿ ಕ್ಷಮೆ ಕೇಳಿದ ಅಲ್ಲು ಅರ್ಜುನ್.. ಕಾರಣವೇನು?

Allu Arjun asks sorry: ಈ ವಾರದ ಆರಂಭದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ನಟ ಅಲ್ಲು ಅರ್ಜುನ್ ಪತ್ರಕರ್ತರ ಕ್ಷಮೆಯಾಚಿಸಿದರು. 'ಪುಷ್ಪ' ಚಿತ್ರದ ಪ್ರಚಾರ ಈವೆಂಟ್‌ನಲ್ಲಿ ಈ ಕ್ಷಣ ಜರುಗಿತು. 

Edited by - Zee Kannada News Desk | Last Updated : Dec 16, 2021, 03:48 PM IST
  • ನಾಳೆ ರಿಲೀಸ್ ಆಗಲಿರುವ ತೆಲುಗು ಚಿತ್ರ ಪುಷ್ಪ: ದಿ ರೈಸ್‌
  • ಪ್ರಚಾರದಲ್ಲಿ ನಿರತರಾಗಿರುವ ನಟ ಅಲ್ಲು ಅರ್ಜುನ್
  • ಕಾರ್ಯಕ್ರಮಕ್ಕೆ ಎರಡು ಗಂಟೆ ತಡವಾಗಿ ಆಗಮಿಸಿದ್ದಕ್ಕಾಗಿ ಕ್ಷಮೆ ಕೇಳಿದ ಅಲ್ಲು
WATCH:'ಕ್ಷಮಿಸಿ, ಸರಿ!' ಮಾಧ್ಯಮದವರ ಬಳಿ ಕ್ಷಮೆ ಕೇಳಿದ ಅಲ್ಲು ಅರ್ಜುನ್.. ಕಾರಣವೇನು? title=
ನಟ ಅಲ್ಲು ಅರ್ಜುನ್

ನಾಳೆ ರಿಲೀಸ್ ಆಗಲಿರುವ ತೆಲುಗು ಚಿತ್ರ ಪುಷ್ಪ: ದಿ ರೈಸ್‌ (Pushpa: The Rise) ಪ್ರಚಾರದಲ್ಲಿ ನಿರತರಾಗಿರುವ ನಟ ಅಲ್ಲು ಅರ್ಜುನ್ (Allu Arjun), ಬುಧವಾರದ ಕಾರ್ಯಕ್ರಮಕ್ಕೆ ಎರಡು ಗಂಟೆ ತಡವಾಗಿ ಆಗಮಿಸಿದ್ದಕ್ಕಾಗಿ ಮಾಧ್ಯಮಗೋಷ್ಠಿಯಲ್ಲಿ ಕ್ಷಮೆಯಾಚಿಸಿದ್ದಾರೆ (Allu Arjun asks sorry). 

ಮಾಧ್ಯಮ ಕಾರ್ಯಕ್ರಮದಲ್ಲಿ ಪತ್ರಕರ್ತರೊಬ್ಬರು ಮಾಧ್ಯಮಗೋಷ್ಠಿಯಲ್ಲಿ ಕಾಯುವಂತೆ ಮಾಡಿದ್ದಕ್ಕಾಗಿ ಅವರ ಬಳಿ ಪ್ರಶ್ನಿಸಿದರು. ಕಾರ್ಯಕ್ರಮ ಬೆಳಗ್ಗೆ 11.30ಕ್ಕೆ ಆರಂಭವಾಗಬೇಕಿತ್ತು. ಆದರೆ, ಅಲ್ಲು ಅರ್ಜುನ್ ಎರಡು ಗಂಟೆ ತಡವಾಗಿ ಬಂದರು. ಮಂಜಿನಿಂದಾಗಿ ತನ್ನ ಚಾರ್ಟರ್ಡ್ ಫ್ಲೈಟ್ ಸರಿಯಾದ ಸಮಯಕ್ಕೆ ಹೊರಡಲು ಸಾಧ್ಯವಾಗಲಿಲ್ಲ ಎಂದು ಅಲ್ಲು ಹೇಳಿದರು.

"ಮೊದಲನೆಯದಾಗಿ, ನಾನು ಅತ್ಯಂತ ವಿಷಾದಿಸುತ್ತೇನೆ. ನಾವು ಖಾಸಗಿ ವಿಮಾನದಲ್ಲಿ ಬಂದಿದ್ದೇವೆ ಮತ್ತು ದಟ್ಟವಾದ ಮಂಜಿನಿಂದಾಗಿ ಅದು ಸಮಯಕ್ಕೆ ಟೇಕಾಫ್ ಆಗಲಿಲ್ಲ. ನಾನು ಯಾರನ್ನೂ ನೋಯಿಸಲು ಬಯಸುವುದಿಲ್ಲ. ಕಾರ್ಯಕ್ರಮದ ಸಮಯದ ಬಗ್ಗೆ ನನಗೆ ತಿಳಿದಿರಲಿಲ್ಲ. ಕ್ಷಮಿಸಿ, ಸರಿ!" ಎಂದು ಅಲ್ಲು ಅರ್ಜುನ್ ಹೇಳಿದರು.

 

 

ಶುಕ್ರವಾರ ಚಿತ್ರಮಂದಿರಗಳಲ್ಲಿ ಪುಷ್ಪಾ ಬಿಡುಗಡೆಯಾಗುತ್ತಿದೆ. ಮೂಲತಃ ತೆಲುಗಿನಲ್ಲಿ ತಯಾರಾದ ಈ ಚಿತ್ರವನ್ನು ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲು ಡಬ್ ಮಾಡಲಾಗಿದೆ.

ಚಿತ್ರದಲ್ಲಿ ಅಲ್ಲು ಅರ್ಜುನ್ ಕೆಂಪು ಚಂದನವನ್ನು (red sandalwood) ಕಳ್ಳಸಾಗಣೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಫಹಾದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಸೇರಿದಂತೆ ಇತರರು ನಟಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದ ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.

ಪುಷ್ಪ ಶೀರ್ಷಿಕೆಯ ವಿಶೇಷ ಹಾಡಿನಲ್ಲಿ ಸಮಂತಾ ರುತ್ ಪ್ರಭು (Samantha Ruth Prabhu) ಹೆಜ್ಜೆಹಾಕಿದ್ದಾರೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಪುಷ್ಪ, ನಿರ್ದೇಶಕ ಸುಕುಮಾರ್ ಮತ್ತು ಅಲ್ಲು ಅರ್ಜುನ್ ಜೋಡಿಯ ಮೂರನೇ ಸಿನಿಮಾ ಆಗಿದೆ. ಅವರು ಈ ಹಿಂದೆ ಆರ್ಯ ಮತ್ತು ಆರ್ಯ 2 ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಇದನ್ನೂ ಓದಿ: ಎಲ್ಲರೆದುರು ರಣಬೀರ್ ಕಪೂರ್ ಕೇಳಿದ ಪ್ರಶ್ನೆಗೆ ನಾಚಿ ನೀರಾದ ಆಲಿಯಾ, ಇಲ್ಲಿದೆ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News