ಕಡಬ ಹಳೆಸ್ಟೇಷನ್ ಕೆರೆಯ ನೀರಿನಿಂದ ರಸ್ತೆ ಮುಳುಗಡೆ ಮನೆಯಿಂದ ಹೊರ ಹೋಗಲು ಕುಟುಂಬದವರ ಪರದಾಟ... ಅಧಿಕಾರಿಗಳು ಇತ್ತ ಗಮನಹರಿಸುವರೇ?
Rain In Kadaba: ಹಳೆಸ್ಟೇಷನ್ ನಿವಾಸಿ ಪೊಡಿಯ ಎಂಬವರ ಕುಟುಂಬ ಈ ಸಮಸ್ಯೆ ಗೆ ಸಿಳುಕಿದ್ದು ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕಾಗಿದೆ.
ಕಡಬ: ಕುಟ್ರುಪಾಡಿ ಗ್ರಾಮದ ವ್ಯಾಪ್ತಿಗೆ ಬರುವ ಕಡಬ ಹಳೇಸ್ಟೇಷನ್ ಕೆರೆಯಲ್ಲಿ ನೀರು ತುಂಬಿ ಸಮೀಪ ಇರುವ ರಸ್ತೆಗೆ ನೀರು ನುಗ್ಗಿರುವುದರಿಂದ ದಲಿತ ಕುಟುಂಬವೊಂದು ಮನೆಯಿಂದ ಹೊರಹೋಗಲು ಕಷ್ಟ ಪಡುವಂತಾಗಿದೆ.
ಹಳೆಸ್ಟೇಷನ್ ನಿವಾಸಿ ಪೊಡಿಯ ಎಂಬವರ ಕುಟುಂಬ ಈ ಸಮಸ್ಯೆ ಗೆ ಸಿಳುಕಿದ್ದು ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕಾಗಿದೆ. ಹೆಚ್ಚಿನ ಮಳೆಯಾದಾಗ ಮನೆಗೆ ನೀರು ನುಗ್ಗುವ ಸಂಭವವೂ ಇದೆ. ಈ ಮನೆಯಿಂದ ದಿನನಿತ್ಯ ಸಣ್ಣ ಮಕ್ಕಳು ಶಾಲೆಗೆ ಹೋಗುತ್ತಿದ್ದು, ಮಕ್ಕಳ ತಾಯಿಯೂ ಅಪಾಯಕಾರಿ ರೀತಿಯಲ್ಲಿ ನೀರಿನಲ್ಲಿ ಕೊಂಡೊಯ್ಯುತ್ತಿರುವುದು ಕಂಡು ಬಂದಿದೆ.
ಇದನ್ನೂ ಓದಿ : ವಸತಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ
ಸ್ವಲ್ಪ ಹೆಚ್ಚು ಕಮ್ಮಿ ಆದರೂ ದೊಡ್ಡ ತೊಂದರೆ ಆಗಲಿದೆ. ಈ ಕೆರೆಯಿಂದ ಮೋರಿ ಹಾಕಿ ನೀರನ್ನು ಹೊರಗಡೆ ಬಿಡಲಾಗುತ್ತಿದ್ದರೂ ಸರಗಾವಾಗಿ ನೀರು ಹೋಗದೆ ಇರುವುದರಿಂದ ದೊಡ್ಡ ಮಟ್ಟದ ನೀರು ಸಂಗ್ರಾಹವಾಗಿದೆ.
ಜು.5 ರಂದು ಕಡಬ ಸಮುದಾಯ ಕೇಂದ್ರದ ಆರೋಗ್ಯ ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆ ಮನೆ ಭೇಟಿ ಗೆ ಹೋಗುವ ಸಂಧರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಅವರಿಗೆ ಆ ಮನೆಯನ್ನು ಸಂಪರ್ಕ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಕುಮಾರಸ್ವಾಮಿ ಒಬ್ಬ ಹುಚ್ಚ, ಚಿಕಿತ್ಸೆ ಪಡೆಯುವುದು ಉತ್ತಮ: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.