ರಾಜಧಾನಿಯಲಿ ರ‍್ಯಾಪಿಡ್ ರೋಡ್ ಟೆಕ್ನಾಲಜಿ ಬಳಸಿ ರಸ್ತೆ ನಿರ್ಮಾಣ.! 45ಕ್ಕೂ ಅಧಿಕ ವರ್ಷ ಬಾಳಿಕೆ ಬರುತ್ತದೆಯಂತೆ ಈ ರಸ್ತೆಗಳು
ರ‍್ಯಾಪಿಡ್ ರೋಡ್ ಟೆಕ್ನಾಲಜಿ ಬಳಸಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಬಿಬಿಎಂಪಿ ಕೈ ಹಾಕಿದೆ. ನಗರದ ಹಳೆ ಮದ್ರಾಸ್ ರಸ್ತೆಯಲ್ಲಿ ಈ ವಿನೂತನ ಟೆಕ್ನಾಲಜಿ ಬಳಸಿ ರಸ್ತೆ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ವಿನೂತನ ಟೆಕ್ನಾಲಜಿ ಬಳಸಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಟೆಕ್ನಾಲಜಿ ಬಳಸಿ ರಸ್ತೆ ನಿರ್ಮಾಣ ಕಾರ್ಯ ನಡೆಸುತ್ತಿರುವುದು ದೇಶದಲ್ಲೇ ಮೊದಲು ಎನ್ನಲಾಗುತ್ತಿದೆ. ಈ ನೂತನ ಟೆಕ್ನಾಲಜಿಗೆ ರ‍್ಯಾಪಿಡ್ ರೋಡ್ ಟೆಕ್ನಾಲಜಿ ಎಂದು ಕರೆಯಲಾಗುತ್ತದೆ.
ರ‍್ಯಾಪಿಡ್ ರೋಡ್ ಟೆಕ್ನಾಲಜಿ ಬಳಸಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಬಿಬಿಎಂಪಿ ಕೈ ಹಾಕಿದೆ. ನಗರದ ಹಳೆ ಮದ್ರಾಸ್ ರಸ್ತೆಯಲ್ಲಿ ಈ ವಿನೂತನ ಟೆಕ್ನಾಲಜಿ ಬಳಸಿ ರಸ್ತೆ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ಈ ಟೆಕ್ನಾಲಜಿಯಲ್ಲಿ ಕಾರ್ಖಾನೆಗಳಲ್ಲಿ ತಯಾರಿಸಿದ ಕಾಂಕ್ರೀಟ್ ಸ್ಲಾಬ್ ಗಳನ್ನು ನೇರವಾಗಿ ತಂದು ರಸ್ತೆಗೆ ಹಾಕಲಾಗುತ್ತದೆ. ಹೀಗಾಗಿ ಸ್ಥಳದಲ್ಲಿ ಕಾಂಕ್ರೀಟ್ ಮಿಶ್ರಣ ಸೇರಿದಂತೆ ಯಾವುದೇ ರೀತಿಯ ಕಿರಿ ಕಿರಿ ಇರುವುದಿಲ್ಲ.
ಇದನ್ನೂ ಓದಿ : Basavaraj Bommai : 'ಭ್ರಷ್ಟಾಚಾರವನ್ನು ಹುಟ್ಟಿಹಾಕಿದ್ದೇ ಕಾಂಗ್ರೆಸ್ ಪಾರ್ಟಿ'
ಮೊದಲೇ ಹೇಳಿದಂತೆ ಕಾರ್ಖಾನೆಗಳಲ್ಲಿ ತಯಾರಾದ ಸ್ಲಾಬ್ ಗಳನ್ನು ತಂದು ರಸ್ತೆಗೆ ಅಳವಡಿಸಲಾಗುತ್ತದೆ. ಮಾಮೂಲಿನಂತೆ ವೈಟ್ ಟಾಪಿಂಗ್ ಮಾಡಿ, ರಸ್ತೆ ದುರಸ್ತಿ ಕಾರ್ಯ ನಡೆಸಿದರೆ, ಟ್ರಾಫಿಕ್ ಫ್ರೀ ಮಾಡುವುದಕ್ಕೆ 25 ದಿನಗಳ ಅವಧಿ ಬೇಕಾಗುತ್ತದೆ. ಹೀಗಾದಾಗ ಸಾರವಜನಿಕರು ಕಿರಿ ಕಿರಿ ಅನುಭವಿಸಬೇಕಾಗುತ್ತದೆ. ಆದರೆ, ರ‍್ಯಾಪಿಡ್ ರೋಡ್ ಟೆಕ್ನಾಲಜಿ ಮೂಲಕ ರಸ್ತೆ ನಿರ್ಮಾಣ ಮಾಡಿದರೆ, ಕೇವಲ ನಾಲ್ಕೇ ದಿನಗಳಲ್ಲಿ ರಸ್ತೆಯನ್ನು ಸಂಚಾರಕ್ಕೆ ಬಿಟ್ಟು ಕೊಡುವುದು ಸಾಧ್ಯವಾಗುತ್ತದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಈ ಟೆಕ್ನಾಲಜಿ ಬಳಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಪೈಲಟ್ ಯೋಜನೆಯಾಗಿ ನಗರದ ಹಳೆ ಮದ್ರಾಸ್ ರಸ್ತೆಯ 500 ಮೀಟರ್ ರಸ್ತೆಗೆ ಸ್ಲಾಬ್ ಅಳವಡಿಸಲಾಗುತ್ತಿದೆ. ಈ ಟೆಕ್ನಾಲಜಿ ಮೂಲಕ ನಿರ್ಮಾಣ ಮಾಡುವ ರಸ್ತೆಗಳು ಸುಮಾರು 45ಕ್ಕೂ ಅಧಿಕ ವರ್ಷ ಬಾಳಿಕೆ ಬರುತ್ತದೆ ಎನ್ನುತ್ತಿದೆ ಬಿಬಿಎಂಪಿ.
ಇದನ್ನೂ ಓದಿ : ಪೆಟ್ರೋಲ್ ಬಂಕ್ ಮುಂದೆ ನಿಲ್ಲಿಸಿದ್ದ ಆಟೋ ತೆಗೆದುಕೊಂಡು ಪರಾರಿಯಾದ ಮಂಗಳಮುಖಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.