Rohini Sindhuri D Roopa controversy : ಐಪಿಎಸ್ ಐಎಎಸ್‌ ಮಹಿಳಾ ಅಧಿಕಾರಿಗಳ ಪೇಸ್ ಬುಕ್ ಸಮರ ಪೊಲೀಸ್ ಠಾಣೆ ಹಾಗೂ ವಿಧಾನಸೌಧ ತಲುಪಿದೆ. ನಿನ್ನೆಯವರೆಗು ಪೇಸ್ ಬುಕ್ ನಲ್ಲಿ ಆರೋಪ ಪ್ರತ್ಯಾರೋಪ ಮಾಡ್ತಿದ್ದ ರೋಹಿಣಿ ಸಿಂಧೂರಿ ಮತ್ತು ರೂಪಾ, ಇಂದು ಇಬ್ಬರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಪ್ರತಿದೂರು ನೀಡಿ, ವಿವಾದವನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ. 


COMMERCIAL BREAK
SCROLL TO CONTINUE READING

ಐಜಿಪಿ ಡಿ. ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಪೇಸ್ ಬುಕ್ ಸಮರ ತಾರಕಕ್ಕೇರಿದೆ. ನಿನ್ನೆ ಪೇಸ್ ಬುಕ್ ನಲ್ಲಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದ ಇಬ್ಬರು ಮಹಿಳಾ ಅಧಿಕಾರಿಗಳು, ಇಂದು ಪರಸ್ಪರ ಒಬ್ಬರ ಮೇಲೆ ಒಬ್ಬರು ದೂರು ನೀಡಲು ಮುಂದಾಗಿದ್ದಾರೆ. ಅದರಲ್ಲೂ ಐಜಿಪಿ ಡಿ. ರೂಪಾ ಅವರು ರೋಹಿಣಿ ಸಿಂಧೂರಿಯವರ ವೈಯಕ್ತಿಕ ಪೋಟೊಗಳನ್ನ ತಮ್ಮ ಪೇಸ್ ಬುಕ್ ಪೇಜ್ ನಲ್ಲಿ ಬಿಡುಗಡೆ ಮಾಡಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ.


ಇದನ್ನೂ ಓದಿ: ಹಿರಿಯ ಮಹಿಳಾ ಅಧಿಕಾರಿಗಳ ಜಟಾಪಟಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೇಸರ


ಹೌದು... ಐಜಿಪಿ ಡಿ. ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಪೇಸ್ ಬುಕ್ ವಾರ್ ಈಗ ಪೊಲೀಸ್ ಠಾಣೆಗೆ ತಲುಪಿದೆ. ರೋಹಿಣಿ ಸಿಂಧೂರಿ ಅವರ ವೈಯಕ್ತಿಕ ಪೋಟೊಗಳನ್ನ ಪೇಸ್ ಬುಕ್ ಪೇಜ್ ನಲ್ಲಿ ಹಾಕಿದ್ದಾರೆ ಎಂದು ರೂಪಾ ಅವರ ಮೇಲೆ ಸಿಂಧೂರಿ ಗಂಡ ಸುಧೀರ್ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎರಡು ಪುಟಗಳ ದೂರು ನೀಡಿದ ಸುಧೀರ್, ಅದರಲ್ಲಿ ಫೇಸ್ ಬುಕ್ ಫೋಸ್ಟ್, ಟ್ವಿಟರ್ ಲಿಂಕ್ ಗಳನ್ನ ಅಟ್ಯಾಚ್ ಮಾಡಿದ್ದಾರೆ. ಮಹಿಳೆಯ ವೈಯಕ್ತಿಕ ಫೋಟೋವನ್ನು ದುರುಪಯೋಗ ಮಾಡುವುದು ಹಾಗೂ ದುರುಪಯೋಗ ಮಾಡುವುದರ ಬಗ್ಗೆ ದೂರು ಸುಧೀರ್ ದೂರು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ರೋಹಿಣಿ ಸಿಂಧೂರಿ ಗಂಡ ಸುಧೀರ್, ರೂಪಾ ಅಂತ ಇದಾರಲ್ಲ ಯಾರು ಅವರು..? ಸಿಂಧೂ ಅವರ ಡಿಪಾರ್ಟ್ಮೆಂಟ್ ಹಾ, ಇಲ್ಲ ಸಿಂಧೂ ಅವರಿಗೆ ಸೀನಿಯರ್ ಹಾ ಎಂದು ಪ್ರಶ್ನೆ ಮಾಡಿದ್ದಾರೆ. ಇವರ ಪರ್ಸನಲ್ ಅಜೆಂಡಾ ಏನಿದೆ ಗೊತ್ತಾಗಬೇಕು, ರೂಪಾ ಅವರಿಗೆ ಮಾನಸಿಕ ತೊಂದರೆ ಇರಬಹುದು ಎಂದು ಕಿಡಿಕಾರಿದರು.


ಇನ್ನೂ ರೋಹಿಣಿ ಸಿಂಧೂರಿ ಗಂಡ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಜಾಲಹಲ್ಳಿಯ ಮನೆಯಿಂದ ಹೊರ ಬಂದ ರೋಹಿಣಿ ಸಿಂಧೂರಿ, ನೇರ ವಿಧಾನಸೌಧಕ್ಕೆ ತೆರಳಿದರು. ಐಜಿಪಿ ರೂಪಾ ಮಾಡಿದ ಆರೋಪಗಳ ಬಗ್ಗೆ ತುಟಿ ಬಿಚ್ಚಿದ ರೋಹಿಣಿ ಸಿಂಧೂರಿ ಗೆಟ್ ವೆಲ್ ಸೂನ್ ಅಂತ ರೂಪಾಗೆ ಟಾಂಗ್ ನೀಡಿದರು. ಅಲ್ಲದೇ ವೈಯಕ್ತಿಕ ತೇಜೋವದೆ ಮಾಡುವುದು ಸರಿಯಲ್ಲ, ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದರು. ನಂತರ ಮನೆಯಿಂದ ನೇರವಾಗಿ ವಿಧಾನಸೌಧಕ್ಕೆ ತೆರಳಿದ ರೋಹಿಣಿ ಸಿಂಧೂರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ರೂಪಾ ವಿರುದ್ಧ ದೂರು ನೀಡಿದರು.


ಇದನ್ನೂ ಓದಿ: ರೋಹಿಣಿ ಸಿಂಧೂರಿ, ಡಿ ರೂಪಾ ಇಡೀ ಅಧಿಕಾರಿ ವರ್ಗಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ..!


ಐಎಎಸ್‌ ಅಧಿಕಾರಿಯಾದ ರೋಹಿಣಿ ಸಿಂಧೂರಿ ವೈಯಕ್ತಿಕ ವಿಚಾರ ಹಾಗೂ ಪೋಟೊಗಳನ್ನ ಬಿಡುಗಡೆ ಮಾಡಿದ್ದಕ್ಕೆ ಗಂಡ ಹೆಂಡತಿ ಇಬ್ಬರು ರೂಪಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ರೋಹಿಣಿ ಸಿಂಧೂರಿ ಗಂಡ ಸುಧೀರ್ ದೂರು ಪಡೆದ ಬಾಗಲಗುಂಟೆ ಪೊಲೀಸರು, ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಕಾನೂನು ಪಂಡಿತರ ಸಲಹೆ ಪಡೆದು ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಅನ್ನೋ ಬಗ್ಗೆ ಚರ್ಚೆ ನಡೆಸಿದ್ದಾರೆ. 


ಸದ್ಯ ಇಬ್ಬರು ಅಧಿಕಾರಿಗಳು ಸಮರ ವಿಧಾನಸೌಧ ತಲುಪಿದ್ದು, ಒಬ್ಬರ ಮೇಲೆ ಒಬ್ಬರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಪ್ರತಿದೂರು ನೀಡಿದ್ದಾರೆ. ಇಬ್ಬರು ಮಹಿಳಾ ಅಧಿಕಾರಿಗಳ ಜಗಳ ವಿಧಾನಸೌಧದ ಅಂಗಳ ಸೇರಿದ್ದು, ಸರ್ಕಾರ ಏನ್ ಕ್ರಮ ತೆಗೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.