ರೋಹಿಣಿ ಸಿಂಧೂರಿ, ಡಿ ರೂಪಾ ಇಡೀ ಅಧಿಕಾರಿ ವರ್ಗಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ..!

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ಸೋಷಿಯಲ್‌ ಮೀಡಿಯಾದಲ್ಲಿ ದಾಳಿ ವಾಗ್ದಾಳಿ ನಡೆಸಿದ್ದಾರೆ. ರೂಪಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸಿಂಧೂರಿ ಅವರ ಮೇಲೆ ಆರೋಪಗಳ ಹೊರಿಸಿದ್ದಾರೆ. ಅಲ್ಲದೆ ಐಎಎಸ್‌ ಅಧಿಕಾರಿ ದುರ್ನಡತೆ ತೋರಿದ್ದಾರೆ ಎಂದು ದೂರಿದ್ದಾರೆ. ಜೊತೆಗೆ ಅವರ ವೈಯಕ್ತಿಕ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಇದೀಗ ಅಧಿಕಾರಿಗಳ ಜಗಳದ ವಿಚಾರವಾಗಿ ಗೃಹ ಸಚಿವರ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Written by - Krishna N K | Last Updated : Feb 20, 2023, 04:15 PM IST
  • ಅಧಿಕಾರಿಗಳ ಜಗಳದ ವಿಚಾರವಾಗಿ ಗೃಹ ಸಚಿವರ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.
  • ರೋಹಿಣಿ ಸಿಂಧೂರಿ, ಡಿ ರೂಪ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
  • ನಾಗರಿಕ ಸೇವಾ ಅಧಿಕಾರಿಗಳಿಗೆ ಅಗೌರವ ಮತ್ತು ಅವಮಾನವನ್ನು ಉಂಟುಮಾಡುವಂತಿದೆ.
ರೋಹಿಣಿ ಸಿಂಧೂರಿ, ಡಿ ರೂಪಾ ಇಡೀ ಅಧಿಕಾರಿ ವರ್ಗಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ..! title=

ಬೆಂಗಳೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ಸೋಷಿಯಲ್‌ ಮೀಡಿಯಾದಲ್ಲಿ ದಾಳಿ ವಾಗ್ದಾಳಿ ನಡೆಸಿದ್ದಾರೆ. ರೂಪಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸಿಂಧೂರಿ ಅವರ ಮೇಲೆ ಆರೋಪಗಳ ಹೊರಿಸಿದ್ದಾರೆ. ಅಲ್ಲದೆ ಐಎಎಸ್‌ ಅಧಿಕಾರಿ ದುರ್ನಡತೆ ತೋರಿದ್ದಾರೆ ಎಂದು ದೂರಿದ್ದಾರೆ. ಜೊತೆಗೆ ಅವರ ವೈಯಕ್ತಿಕ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಇದೀಗ ಅಧಿಕಾರಿಗಳ ಜಗಳದ ವಿಚಾರವಾಗಿ ಗೃಹ ಸಚಿವರ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಈನ್ನು  ರೂಪಾ ಅವರ ಆರೋಪಗಳನ್ನು ಸಿಂಧೂರಿ ಅವರು ಅಲ್ಲಗಳೆದಿದ್ದಾರೆ. ರೂಪಾ ಅವರು ವೈಯಕ್ತಿಕ ದ್ವೇಷದಿಂದ ತಮ್ಮ ವಿರುದ್ಧ ಇಂತಹ ಕಾಮೆಂಟ್‌ಗಳನ್ನು ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ರೂಪಾ ಅವರು ಮಾನಸಿಕ ಸಮತೋಲನ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದರು. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ರೂಪಾ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಿಂಧೂರಿ ಅವರು ತಿಳಿಸಿದ್ದರು.

ಇದನ್ನೂ ಓದಿ: ಐಎಎಸ್‌ Vs ಐಪಿಎಸ್‌ ವಾರ್‌ : 8 ವರ್ಷಗಳ ನಂತರ ಡಿಕೆ ರವಿ ಸಾವಿನ ಸುದ್ದಿ ಕೆದಕಿದ್ಯಾಕೆ..!

ರೋಹಿಣಿ ಸಿಂಧೂರಿ, ಡಿ ರೂಪ ವಿರುದ್ಧ ಕ್ರಮ ಕೈಗೊಳ್ಳಲಾಗುವುದು : ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಾರ್ವಜನಿಕವಾಗಿ ಅಧಿಕಾರಿಗಳ ಕಿತ್ತಾಟಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ರೋಹಿಣಿ ಸಿಂಧೂರಿ ಮತ್ತು ಡಿ ರೂಪ ಅವರ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೇವಾ ನಿಯಮ ಉಲ್ಲಂಘನೆಯನ್ನು ಉಲ್ಲೇಖಿಸಿ ಕ್ರಮಕ್ಕೆ ಎಚ್ಚರಿಕೆ ನೀಡಿದ್ದಾರೆ. ಜನರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಗೌರವದಿಂದ ಕಾಣುತ್ತಾರೆ. ಆದರೆ, ರೋಹಿಣಿ ಮತ್ತು ರೂಪ ಅವರ ನಡವಳಿಕೆಯನ್ನು ನೋಡಿದರೆ ನಾಗರಿಕ ಸೇವಾ ಅಧಿಕಾರಿಗಳಿಗೆ ಅಗೌರವ ಮತ್ತು ಅವಮಾನವನ್ನು ಉಂಟುಮಾಡುವಂತಿದೆ.

ಇದರಿಂದಾಗಿ ನಾವು ಸುಮ್ಮನೆ ಕೂರುವುದಿಲ್ಲ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಹಾಗೂ ಅವರಿಬ್ಬರೂ ಸಾಮಾನ್ಯ ಜನರು ಸಹ ಮಾತನಾಡದ ರೀತಿಯಲ್ಲಿ ಕೆಟ್ಟದಾಗಿ ವರ್ತಿಸುತ್ತಿದ್ದಾರೆ, ಅವರ ವೈಯಕ್ತಿಕ ವಿಷಯಗಳಲ್ಲಿ ಅವರು ಏನು ಮಾಡಲಿ, ಮಾಧ್ಯಮದ ಮುಂದೆ ಬಂದು ಮಾತನಾಡುವುದು ಸರಿಯಲ್ಲ. ನಮ್ಮಲ್ಲಿ ಉನ್ನತ ಹುದ್ದೆಯ ಉತ್ತಮ ಅಧಿಕಾರಿಗಳಿದ್ದಾರೆ, ಅವರೇ ರಾಜ್ಯ ಮತ್ತು ದೇಶವನ್ನು ನಡೆಸುವವರು. ಆದರೆ ಇವರಿಬ್ಬರು ಇಡೀ ಅಧಿಕಾರಿ ವರ್ಗಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದರು. 

ಇದನ್ನೂ ಓದಿ:  Rohini Sindhuri :ನನ್ನ ಪ್ರಶ್ನೆ ಇಷ್ಟೇ..ʼರೋಹಿಣಿ ಸಿಂಧೂರಿ ಯಾಕೆ ಡಿ ಕೆ ರವಿನ ಬ್ಲಾಕ್ ಮಾಡಲಿಲ್ಲʼ ?

ಈಗಾಗಲೇ ನಾನು ಡಿಜಿ ಅವರೊಂದಿಗೆ ಮಾತನಾಡಿದ್ದೇನೆ. ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಮಾತನಾಡುತ್ತಾರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಈ ವಿಚಾರ ತಿಳಿದಿದೆ. ಅಧಿಕಾರಿಗಳು ನೀತಿ ನಿಯಮಗಳಿಗೆ ಬದ್ಧರಾಗಿರುವುದನ್ನು ಗಮನಿಸಿದ ಜ್ಞಾನೇಂದ್ರ ಅವರು, ʼಈ ಹಿಂದೆಯೇ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಇದೀಗ ಅವರ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಪರಿಶೀಲಿಸುತ್ತದೆ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News