ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯನ್ನ ಎಲ್ಲೆಡೆ ಸಂಭ್ರಮ,ಸಡಗರದಿಂದ ಆಚರಣೆ ಮಾಡಲಾಗಿದೆ. ಈ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಅದು ಪಟಾಕಿ. ದೀಪದಿಂದ ದೀಪ ಹಚ್ಚಿ ಆಚರಿಸಬೇಕಿದ್ದ ದೀಪಾವಳಿ ಈಗ ಹಲವರ  ಬದುಕು ಕತ್ತಲಿಗೆ ದೂಡಿದೆ. ಪಟಾಕಿಯಿಂದಾಗಿ ನಗರದ ಹಲವೆಡೆ ಅನಾಹುತುಗಳ ಉಂಟಾಗಿ, ಆಸ್ಪತ್ರೆ ಸೇರಿದ್ದಾರೆ. ಪಟಾಕಿಯಿಂದ ಗಾಯಗೂಂಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗತ್ತಿದೆ. ಇದರ ಕುರಿತು ಒಂದು ಕಂಪ್ಲೀಟ್​ ವರದಿ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Love Proposal: ಇಂಡೋ-ಡಚ್ಚ್ ಪಂದ್ಯದ ವೇಳೆ ‘ಲವ್ ಪ್ರಪೋಸ್’: ಪ್ರಿಯಕರನ ತಬ್ಬಿಕೊಂಡು ‘ಒಕೆ’ ಅಂದ್ಳು ಚೆಲುವೆ


ದೀಪದಿಂದ ದೀಪ ಹಚ್ಚಿ ">ದೀಪಾವಳಿ ಆಚರಿಸಿ ಅಂತಾ ಎಷ್ಟೇ ಅರಿವು ಮೂಡಿಸಿದ್ರೂ ">ಪಟಾಕಿ ಅಬ್ಬರ ಮಾತ್ರ ಕಡಿಮೆಯಾಗಿಲ್ಲ.ಈ ಬಾರಿಯೂ ಕೂಡ ಬೆಳಕಿನ ಹಬ್ಬ ದೀಪಾವಳಿ ವೇಳೆ ಸಾಕಷ್ಟು ಮಕ್ಕಳ ಬದುಕು ಕತ್ತಲಾಗಿದೆ‌..ನಗರದಲ್ಲಿ ಪಟಾಕಿಯಿಂದ ಗಾಯಗೂಂಡವರ ಸಂಖ್ಯೆ ದಿನೇ ದಿನೇ ಹೆಚ್ಚಾಗತ್ತಿವೆ.ಕಳೆದ ಮೂರು ದಿನದಿಂದ 80 ಕೇಸ್ಗಳು ನಗರದ ಆಸ್ಪತ್ರೆಗಳಲ್ಲಿ ದಾಖಲಾಗಿವೆ. ಇದ್ರಲ್ಲಿ ಹಲವು ಗಂಭೀರ ಪ್ರಕರಣಗಳು ಆಗಿದ್ದು ದೃಷ್ಠಿಯನ್ನು ಕಳೆದುಕೂಂಡಿದ್ದಾರೆ.


ಇದನ್ನೂ ಓದಿ: Love Proposal: ಇಂಡೋ-ಡಚ್ಚ್ ಪಂದ್ಯದ ವೇಳೆ ‘ಲವ್ ಪ್ರಪೋಸ್’: ಪ್ರಿಯಕರನ ತಬ್ಬಿಕೊಂಡು ‘ಒಕೆ’ ಅಂದ್ಳು ಚೆಲುವೆ


ಹೌದು‌...ಪಟಾಕಿ ಬಗ್ಗೆ ಸರ್ಕಾರ ಹಾಗೂ ವೈದ್ಯರು ಎಷ್ಟೇ ಜಾಗೃತಿ ಮೂಡಿಸಿದರೂ ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗ್ತಿವೆ‌. ನಗರ ಮಿಂಟೋ ಆಸ್ಪತ್ರೆ ಯಲ್ಲಿ 21ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಸುಮಾರು ಬಾಲಕರ ಕಣ್ಣಿಗೆ ಗಂಭೀರ ಹಾನಿಯಾಗಿದ್ದು, ದೃಷ್ಟಿ ಕಳೆದುಕೊಳ್ಳುವ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.


ಯಾವೆಲ್ಲಾ ಆಸ್ಪತ್ರೆಯಲ್ಲಿ ಎಷ್ಟೆಷ್ಟು ಪ್ರಕರಣ ದಾಖಲು.


ಆಸ್ಪತ್ರೆ ಹೆಸರು - ಗಾಯಾಳುಗಳ ಸಂಖ್ಯೆ .
ಮಿಂಟೋ  ಕಣ್ಣಿನ ಆಸ್ಪತ್ರೆ- 25
ನಾರಾಯಣ ನೇತ್ರಾಲಯ -22    
ನೇತ್ರಧಾಮ ಕಣ್ಣಿನ ಆಸ್ಪತ್ರೆ-26
ಶಂಕರ ಕಣ್ಣಿನ ಆಸ್ಪತ್ರೆ-10
ಮೋದಿ ಆಸ್ಪತ್ರೆ-1


ಪಟಾಕಿ ಸಿಡಿದು ನಗರದ ವಿವಿಧ ಆಸ್ಪತ್ರೆಗಳಿಗೆ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿಯಿಂದ ಕಣ್ಣಿಗೆ ಗಾಯಮಾಡಿಕೂಂಡ ಮಕ್ಕಳ ಸಂಖ್ಯೆ 21ಕ್ಕೆ ಏರಿದೆ.. ಇನ್ನೂ ">ನಾರಾಯಣ ನೇತ್ರಾಲಯದಲ್ಲಿ ಗಾಯಾಳುಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ನೇತ್ರಧಾಮದಲ್ಲಿ 26 ಕೇಸ್‌ಗಳು ದಾಖಲು ಆದ್ರೆ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 10 ಹಾಗೂ ಮೋದಿ ಕಣ್ಣಿನ ಆಸ್ಪತ್ರೆ ಒಂದು ಕೇಸ್ ದಾಖಲಾಗಿದೆ. ಇವರಲ್ಲಿ ಹೆಚ್ಚಿನವರು ಲಕ್ಷ್ಮಿ ಬಾಂಬ್ ಜಿಜ್ಲಿ ಪಟಾಕಿ ಹಾಗೂ ಫ್ಲವರ್ ಪಾಟ್ ಸಿಡಿಸಿದವರಾಗಿದ್ದಾರೆ.


ದೀಪಾವಳಿ ಹಬ್ಬ ಬೆಳಕಿನಿಂದ ಕತ್ತಲೆಗೆ ಹೋಗಬಾರದು..ಹೀಗಾಗಿ ಪಟಾಕಿ ಹಚ್ಚುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.ಕಣ್ಣು ಸೇರಿ ವಿವಿಧ ಸೂಕ್ಷ್ಮ ಅಂಗಗಳಿಗೆ ಪಟಾಕಿ ಕಿಡಿ ತಾಕದಂತೆ ಎಚ್ಚರ ವಹಿಸಬೇಕು‌.ಆದ್ರೂ ಜನರು ನಿರ್ಲಕ್ಷ್ಯ ವಹಿಸಿದ್ದಕ್ಕೆ ಈ ಬಾರಿಯ ದೀಪಾವಳಿ ಹಲವರ ಬದುಕಿನಲ್ಲಿ ಕತ್ತಲು ಆವರಿಸುವಂತೆ ಮಾಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ