Love Proposal: ಇಂಡೋ-ಡಚ್ಚ್ ಪಂದ್ಯದ ವೇಳೆ ‘ಲವ್ ಪ್ರಪೋಸ್’: ಪ್ರಿಯಕರನ ತಬ್ಬಿಕೊಂಡು ‘ಒಕೆ’ ಅಂದ್ಳು ಚೆಲುವೆ

ಟೀಂ ಇಂಡಿಯಾ- ನೆದರ್ಲ್ಯಾಂಡ್ ಪಂದ್ಯ ವೀಕ್ಷಿಸುತ್ತಿದ್ದ ಯುವತಿಯ ಬಳಿ ಯುವಕನೋರ್ವ ಬಂದು “ವಿಲ್ ಯು ಮ್ಯಾರಿ ಮಿ” (ನನ್ನನ್ನು ಮದುವೆಯಾಗುತ್ತೀಯಾ) ಎಂದು ಮೂರು ಬಾರಿ ಕೇಳಿದ್ದಾನೆ. ಅದಕ್ಕೆ ಆಕೆ ನಗುತ್ತಾ “ಯೆಸ್” ಎಂದಿದ್ದಾಳೆ. ಸಂತೋಷಗೊಂಡ ಪ್ರಿಯಕರ ಮಂಡಿಯೂರಿ ಪ್ರೀತಿಯ ಉಂಗುರ ತೊಡಿಸಿದ್ದಾನೆ. ಈ ವಿಡಿಯೋ ಐಸಿಸಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಹಂಚಿಕೊಂಡಿದೆ.

Written by - Bhavishya Shetty | Last Updated : Oct 27, 2022, 05:03 PM IST
    • ಒಂದೆಡೆ ಟೀಂ ಇಂಡಿಯಾದ ಗೆಲುವಿನ ಸಂಭ್ರಮ
    • ಇನ್ನೊಂದೆಡೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ಪ್ರೇಮ ಪ್ರಸ್ತಾವನೆ ಮಾಡಿದ್ದಾನೆ
    • ಟೀಂ ಇಂಡಿಯಾ- ನೆದರ್ಲ್ಯಾಂಡ್ ಪಂದ್ಯ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ನಡೆದ ದೃಶ್ಯ
Love Proposal: ಇಂಡೋ-ಡಚ್ಚ್ ಪಂದ್ಯದ ವೇಳೆ ‘ಲವ್ ಪ್ರಪೋಸ್’: ಪ್ರಿಯಕರನ ತಬ್ಬಿಕೊಂಡು ‘ಒಕೆ’ ಅಂದ್ಳು ಚೆಲುವೆ title=
Love

ಇಂದು ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ ನಡುವೆ ಭರ್ಜರಿ ಪಂದ್ಯ ನಡೆದಿದೆ. ಈ ಆಟದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಗೆಲುವನ್ನು ಸಾಧಿಸಿದೆ. ಒಂದೆಡೆ ಟೀಂ ಇಂಡಿಯಾದ ಗೆಲುವಿನ ಸಂಭ್ರಮವಾದ್ರೆ, ಇನ್ನೊಂದೆಡೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ಸ್ಟೇಡಿಯಂನಲ್ಲಿಯೇ ಪ್ರೇಮ ಪ್ರಸ್ತಾವನೆ ಮಾಡಿದ್ದಾನೆ.

ಇದನ್ನೂ ಓದಿ: IND vs NED: ಟೀಂ ಇಂಡಿಯಾಗೆ ಸತತ ಗೆಲುವಿನ ಸಂಭ್ರಮ: ನೆದರ್ಲ್ಯಾಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಟೀಂ ಇಂಡಿಯಾ- ನೆದರ್ಲ್ಯಾಂಡ್ ಪಂದ್ಯ ವೀಕ್ಷಿಸುತ್ತಿದ್ದ ಯುವತಿಯ ಬಳಿ ಯುವಕನೋರ್ವ ಬಂದು “ವಿಲ್ ಯು ಮ್ಯಾರಿ ಮಿ” (ನನ್ನನ್ನು ಮದುವೆಯಾಗುತ್ತೀಯಾ) ಎಂದು ಮೂರು ಬಾರಿ ಕೇಳಿದ್ದಾನೆ. ಅದಕ್ಕೆ ಆಕೆ ನಗುತ್ತಾ “ಯೆಸ್” ಎಂದಿದ್ದಾಳೆ. ಸಂತೋಷಗೊಂಡ ಪ್ರಿಯಕರ ಮಂಡಿಯೂರಿ ಪ್ರೀತಿಯ ಉಂಗುರ ತೊಡಿಸಿದ್ದಾನೆ. ಈ ವಿಡಿಯೋ ಐಸಿಸಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಹಂಚಿಕೊಂಡಿದೆ.

ಪ್ರೇಮ ನಿವೇದನೆ ಮಾಡುತ್ತಿರುವ ವಿಡಿಯೋ ಇಲ್ಲಿ ನೋಡಿ: https://www.t20worldcup.com/video/2876790

ಇನ್ನು ಯುವಕ ಪ್ರಪೋಸ್ ಮಾಡುತ್ತಿದ್ದಂತೆ ಅಲ್ಲಿದ್ದ ಜನರು ಚೀಯರ್ ಮಾಡಿದ್ದಾರೆ. ಹುಡುಗಿ ನಾಚಿ ನೀರಾಗಿದ್ದನ್ನು ಈ ವಿಡಿಯೋದಲ್ಲಿ ಕಾಣಬಹುದು. ಬಳಿಕ ಆಕೆ ತನ್ನ ಪ್ರಿಯಕರನನ್ನು ಬಿಗಿದಪ್ಪಿಕೊಂಡು ತನ್ನ ಪ್ರೀತಿಯನ್ನು ತೋರ್ಪಡಿಸುತ್ತಾಳೆ.

ಇದನ್ನೂ ಓದಿ: Team Indiaದ ‘ತ್ರಿಮೂರ್ತಿ’ಗಳ ಅಬ್ಬರ: ರೋಹಿತ್, ಕೊಹ್ಲಿ, ಯಾದವ್ ಆಟಕ್ಕೆ ನಲುಗಿತು ನೆದರ್ಲ್ಯಾಂಡ್

ಇನ್ನು ಇಂದು ನಡೆದ ಭಾರತ ನೆದರ್ಲ್ಯಾಂಡ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ವಿಶ್ವಕಪ್ ನಲ್ಲಿ ನಡೆದ ಭಾರತದ ಎರಡೂ ಪಂದ್ಯಗಳಲ್ಲಿ ಗೆಲುವನ್ನು ಸಾಧಿಸುವ ಮೂಲಕ ಉತ್ತಮ ಫಾರ್ಮ್ ನಲ್ಲಿ ಮುಂದುವರೆದಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News