ಸಿಸಿಬಿ ದಾಳಿ ವೇಳೆ ನಾಪತ್ತೆಯಾಗಿದ್ದ ಸೈಲೆಂಟ್ ಸುನೀಲ ವೇದಿಕೆ ಮೇಲೆ ಹಾಜರು .! ಕಣ್ಮುಂದೆ ಇದ್ರೂ ಸುಮ್ಮನಿದ್ದ ಪೊಲೀಸರು
ನಾಪತ್ತೆಯಾಗಿದ್ದ ಸೈಲೆಂಟ್ ಸುನೀಲ, ನಿನ್ನೆ ಚಾಮರಾಜಪೇಟೆಯ ಕಾರ್ಯಕ್ರಮದಲ್ಲಿ ಪ್ರತ್ಯಕ್ಷನಾದರೂ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಳ್ಳದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಬೆಂಗಳೂರು : ಅಪರಾಧ ಚಟುವಟಿಕೆ ನಡೆಸುತ್ತಿರುವ ಶಂಕೆ ಮೇರೆಗೆ ರೌಡಿಗಳ ಮೇಲೆ ದಾಳಿ ನಡೆದಾಗ ನಟೋರಿಯಸ್ ರೌಡಿ ಶೀಟರ್ ಆಗಿದ್ದ ಸೈಲೆಂಟ್ ಸುನೀಲ ತಲೆಮರೆಸಿಕೊಂಡಿದ್ದ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದರು. ಆದರೆ ನಾಪತ್ತೆಯಾಗಿದ್ದ ಸೈಲೆಂಟ್ ಸುನೀಲ, ನಿನ್ನೆ ಚಾಮರಾಜಪೇಟೆಯ ಕಾರ್ಯಕ್ರಮದಲ್ಲಿ ಪ್ರತ್ಯಕ್ಷನಾದರೂ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಳ್ಳದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಇದೇ ತಿಂಗಳು 23 ರಂದು ಬೆಂಗಳೂರು ನಗರದ 86 ಮಂದಿ ರೌಡಿಗಳ ಮನೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಕ್ರೈಂ ಚಟುವಟಿಕೆ ಭಾಗಿ ಶಂಕೆ ಮೇರೆಗೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದರು. ಚುನಾವಣೆ ಸಮೀಪ ಹಿನ್ನೆಲೆಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ದಾಳಿ ವೇಳೆ ಸೈಲೆಂಟ್ ಸುನೀಲ ಸೇರಿದಂತೆ ಕೆಲ ರೌಡಿಗಳು ಎಸ್ಕೇಪ್ ಆಗಿದ್ದರು.
ಇದನ್ನೂ ಓದಿ : Bengaluru's potholes: ಹಳೆ ಮುದುಕಿಗೆ ಶೃಂಗಾರ ಅಂದಂಗಾಯ್ತು ಬೆಂಗಳೂರಿನ ರಸ್ತೆಗಳ ಅವಸ್ಥೆ!
ಈ ಮಧ್ಯೆ, ನಿನ್ನೆ ಚಾಮರಾಜಪೇಟೆಯಲ್ಲಿ ರಕ್ತದಾನ ಶಿಬಿರ ಸೈಲೆಂಟ್ ಸುನೀಲನ ನೇತೃತ್ವದಲ್ಲಿ ನಡೆದಿದೆ. ಈ ಬಗ್ಗೆ ಎಲ್ಲಾ ವಿಷಯ ತಿಳಿದಿದ್ದರೂ ಸೈಲೆಂಟ್ ಸುನೀಲನನ್ನು ಸಿಸಿಬಿ ವಶಕ್ಕೆ ಪಡೆದುಕೊಳ್ಳದಿರುವುದು ಹಾಸ್ಪಾಸ್ಯದವಾಗಿದೆ. ಸಣ್ಣ-ಪುಟ್ಟ ರೌಡಿಗಳ ಮೇಲೆ ಸಿಸಿಬಿ ಪೊಲೀಸರು ಪ್ರತಾಪ ತೋರಿಸಿ ಸುಮ್ಮನಾದ್ರಾ ? ಎಂಬ ಪ್ರಶ್ನೆ ಉದ್ಭವವಾಗಿದೆ.
ಈ ಬಗ್ಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಮಾತನಾಡಿ, ಕಳೆದ ವಾರ ಸಿಸಿಬಿ ವತಿಯಿಂದ ರೌಡಿ ಗಳ ಮನೆ ಮೇಲೆ ಸರ್ಚ್ ಮಾಡಿದಿದ್ದೆವು. ಕೆಲವರು ಮನೆಯಲ್ಲಿ ಇರ್ಲಿಲ್ಲಾ. ಇದ್ದವರನ್ನು ವಶಕ್ಕೆ ಪಡೆದು ಎಚ್ಚರಿಕೆ ಕೊಡಲಾಗಿತ್ತು. ಮನೆಯಲ್ಲಿ ಇಲ್ಲದ ಒಂಬತ್ತು ರೌಡಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅದರಲ್ಲಿ ಸೈಲೆಂಟ್ ಸುನಿಲ್, ಸೈಕಲ್ ರವಿ, ಮುಲಾಮ , ರೋಹಿತ್ ಸೇರಿ ಹಲವಾರ ಮೇಲೆ ನಿಗಾ ಇಟ್ಟಿದ್ದೆವು. ನಿನ್ನೆ ಒಂದು ಕಾರ್ಯಕ್ರಮ ಆಗಿದೆ. ಅಲ್ಲಿಗೆ ಸುನೀಲ್ ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಯಾರ ಯಾರ ಮೇಲೆ ಕೇಸ್ ಇದೆ ಅದನ್ನು ಗಮದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ.
ಇದನ್ನೂ ಓದಿ : ಗಡಿ ವಿವಾದ: ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ!
ಮುಲಾಮ , ರಾಜ ದೊರೈ, ರೋಹಿತ್ ಗೌಡ, ಮಂಜು,ಗಜೇಂದ್ರ ಸೇರಿ ಒಂಬತ್ತು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಯಾರ ಮೇಲೆ ಕೇಸ್ ಇದೆ ಎನ್ನುವುದನ್ನು ನೋಡಿ ಕ್ರಮ ಕೈಗೊಳ್ಳುತ್ತೇವೆ. ಸುನೀಲ್ ಮೇಲೆ ಸದ್ಯಕ್ಕೆ ಯಾವುದೇ ಕೇಸ್ ಬಾಕಿ ಉಳಿದಿಲ್ಲ. ಯಾವುದೇ ವಾರೆಂಟ್ ಬಾಕಿ ಇರ್ಲಿಲ್ಲಾ. ಯಾವುದೇ ರಾಜಕೀಯ ನಾಯಕರ ಒತ್ತಡ ಇಲ್ಲಾ. ರೌಡಿ ಶೀಟ್ ಗಳ ವಿಚಾರದಲ್ಲಿ ಯಾವುದೇ ಮುಲಾಜಿಲ್ಲಾ ಎಂದಿದ್ದಾರೆ. ಇನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ, ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.