ಗಡಿ ವಿವಾದ: ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ!

Maharashtra-Karnataka Border Dispute: ಗಡಿ ವಿವಾದ ಹಿನ್ನೆಲೆ ಯಾವಾಗ ಬಸ್ ಬರುತ್ತೋ, ಯಾವಾಗ ಊರಿಗೆ ತೆರಳುತ್ತೇವೆಯೋ ಅಂತಾ ಮಹಾರಾಷ್ಟ್ರದ ಜನರು ಹುಬ್ಬಳ್ಳಿಯ ಬಸ್‍ ನಿಲ್ದಾಣದಲ್ಲಿ ಕಾಯುವಂತಾಗಿದೆ.

Written by - Zee Kannada News Desk | Last Updated : Nov 27, 2022, 11:21 AM IST
  • ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ
  • ಗಡಿ ವಿವಾದದ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ಖಂಡಿಸಿ ಮಹಾರಾಷ್ಟ್ರದಲ್ಲಿ ಉಗ್ರ ಪ್ರತಿಭಟನೆ
  • ಗಡಿ ವಿವಾದ ಹಿನ್ನೆಲೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ
ಗಡಿ ವಿವಾದ: ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ! title=
ಮಹಾರಾಷ್ಟ್ರ & ಕರ್ನಾಟಕ ಗಡಿ ವಿವಾದ

ಹುಬ್ಬಳ್ಳಿ: ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವಿವಾದ ಮುಂದುವರಿಯುತ್ತಿದೆ. ಗಡಿ ವಿವಾದದ ಬಗ್ಗೆ ಉಭಯ ರಾಜ್ಯದ ನಾಯಕರು ನೀಡಿರುವ ಹೇಳಿಕೆ ವಿಚಾರವಾಗಿ ಬೆಳಗಾವಿ ಗಡಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.

ಗಡಿ ವಿವಾದದ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ಖಂಡಿಸಿ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಸಿದ ಮರಾಠ ಸಂಘಟನೆಗಳು ರಾಜ್ಯದ KSRTC ಬಸ್ಸುಗಳಿಗೆ ಕಪ್ಪು ಬಣ್ಣ ಬಳಿದು ಆಕ್ರೋಶ ಹೊರಹಾಕಿದ್ದಾರೆ. ನಿಪ್ಪಾಣಿ-ಔರಂಗಬಾದ್‌ ನಡುವೆ ಸಂಚರಿಸುವ ರಾಜ್ಯ ಸಾರಿಗೆ ನಿಗಮದ ಬಸ್ಸಿಗೆ ಕಿಡಿಗೇಡಿಗಳು ಕಪ್ಪು ಹಾಗೂ ಕೇಸರಿ ಬಣ್ಣದಲ್ಲಿ ಮಹಾರಾಷ್ಟ್ರ ಪರ ಘೋಷ ವಾಖ್ಯಗಳನ್ನು ಬರೆದು ಆಕ್ರೋಶ ಹೊರಹಾಕಿದ್ದರು.  

ಇದನ್ನೂ ಓದಿ: ಬೂಬು ಹೇಳುವ ರೋಗ ಬಿಜೆಪಿ ಸರ್ಕಾರಕ್ಕೆ ಅಂಟಿಕೊಂಡಿದೆ-ಸಿದ್ದರಾಮಯ್ಯ

ಹುಬ್ಬಳ್ಳಿಯಲ್ಲಿ ಪ್ರಯಾಣಿಕರ ಪರದಾಟ

ಇನ್ನು ಗಡಿ ವಿವಾದ ಹಿನ್ನೆಲೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಮಹಾರಾಷ್ಟ್ರಕ್ಕೆ ತೆರಳುವ ಬಸ್ ರದ್ದಾಗಿರುವ ಹಿನ್ನೆಲೆ ಮಹಾರಾಷ್ಟ್ರದ ಗಡಹಿಂಗ್ಲಜ್, ಜತ್ತ, ಕೊಲ್ಲಾಪುರ,  ಮಿರಜ್ ಸೇರಿ ವಿವಿಧ ಕಡೆ ಹೋಗುವ ಪ್ರಯಾಣಿಕರು ತೊಂದರೆ ಎದುರಿಸುತ್ತಿದ್ದಾರೆ. ಕಳೆದ 3 ದಿನಗಳಿಂದ ಮಹಾರಾಷ್ಟ್ರ ಕಡೆ ಹೋಗುವ ಮತ್ತು ಬರುವ ಬಸ್ ಸಂಚಾರ ಬಂದ್ ಆಗಿದೆ.

ಯಾವಾಗ ಬಸ್ ಬರುತ್ತೋ, ಯಾವಾಗ ಊರಿಗೆ ತೆರಳುತ್ತೇವೆಯೋ ಅಂತಾ ಮಹಾರಾಷ್ಟ್ರದ ಜನರು ಹುಬ್ಬಳ್ಳಿಯ ಬಸ್‍ ನಿಲ್ದಾಣದಲ್ಲಿ ಕಾಯುವಂತಾಗಿದೆ. ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಮಹಾರಾಷ್ಟ್ರದ ಪುಂಡರಿಗೆ ಪ್ರತ್ಯುತ್ತರ ನೀಡಲು ಕನ್ನಡಿಗರು ಸಜ್ಜಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಮೇಲೆ ‘ಜೈ ಮಹಾರಾಷ್ಟ್ರ’ ಎಂದು ಕಿಡಗೇಡಿಗಳು ಬರೆದಿದ್ದರು. ಇದನ್ನು ಖಂಡಿಸಿ ಇದೀಗ ಕನ್ನಡಿಗರೂ ಸಹ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಹೊಸ ಬಸ್ ನಿಲ್ದಾಣಕ್ಕೆ ಪೊಲೀಸ್ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 2 ಲಕ್ಷ‌ ಕೋಟಿ ಬಂಡವಾಳ ಹೂಡಿಕೆ: ಸಿಎಂ ಬೊಮ್ಮಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News