ಕುಮಾರಸ್ವಾಮಿಗೆ ಶುರುವಾಯ್ತು ಸಂಕಷ್ಟ! ಒಂದು ತಿಂಗಳಲ್ಲಿ ದಾಖಲೆ ಬಿಡುಗಡೆ!
ಒಂದು ತಿಂಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಭೂಹಗರಣದ ಸಂಪೂರ್ಣ ದಾಖಲೆ ಬಿಚ್ಚಿಡುತ್ತೇವೆ
ರಾಯಚೂರು: ಒಂದು ತಿಂಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಭೂಹಗರಣದ ಸಂಪೂರ್ಣ ದಾಖಲೆ ಬಿಚ್ಚಿಡುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನಗರ(Ramanagara)ದ ಕೇತಗಾನಹಳ್ಳಿ ಪರಿಶಿಷ್ಟ ಜಾತಿಗೆ ಸೇರಿದ 200 ಎಕರೆ, 65 ಎಕರೆ ಗೋಮಾಳ ಕಬಳಿಕೆ ಮಾಡಿದ್ದಾರೆ. ಶೀಘ್ರದಲ್ಲೇ ಅವರ ವಿರುದ್ಧದ ದಾಖಲೆ ಬಿಡುಗಡೆ ಮಾಡುವುದಾಗಿ ತಿಳಿಸಿದರು.
'ಗ್ರಾ. ಪಂ. ಚುನಾವಣೆ' ಸ್ಪರ್ಧಿ ಮಾಡ್ತಿರಾ? ಹಾಗಿದ್ರೆ, ಯಾವೆಲ್ಲಾ ದಾಖಲೆಗಳು ಬೇಕು ಗೊತ್ತಾ..?
ಈ ಭ್ರಷ್ಟಾಚಾರ ಪ್ರಕರಣ ಲೋಕಾಯುಕ್ತ ಮೆಟ್ಟಿಲು ಏರಿತ್ತು, ಹೈಕೋರ್ಟ್ಗೂ ಹೋಗಿತ್ತು. ಇವರೆಲ್ಲರ ನಿರ್ದೇಶನವಿದ್ದರೂ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ. ಈ ವಿಚಾರವನ್ನು ನಾನು ಸುಮ್ಮನೇ ಬಿಡುವುದಿಲ್ಲ. ಅಂತ್ಯ ಕಾಣಿಸುತ್ತೇನೆ ಎಂದಿದ್ದಾರೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2020-21ನೇ ಸಾಲಿನ ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನ
ಕಾಫಿ ಡೇ ಹಗರಣ ಕುರಿತು ಸಿಬಿಐ ನಿವೃತ್ತ ಡಿಐಜಿ ಅಶೋಕ ಮಲ್ಹೋತ್ರ ವರದಿ ನೀಡಿದ್ದಾರೆ. ಆದರೆ, ವರದಿಯಲ್ಲಿ ಅನೇಕ ಭ್ರಷ್ಟರ ,ಭ್ರಷ್ಟತನದ ಉಲ್ಲೇಖವಿಲ್ಲ. ಡಿಕೆಶಿ, ಮಾಳವಿಕ ಹೆಗಡೆ ಸೇರಿ ಅನೇಕರು ಸಾರ್ವಜನಿಕ ಹಣ ಲೂಟಿ ಮಾಡಿದ್ದಾರೆ. ಹಗರಣದ ಬಗ್ಗೆ ಗಂಭೀರವಾದ ತನಿಖೆ ನಡೆದಿಲ್ಲ. ನಿವೃತ್ತ ರಾಜ್ಯ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಕಾಫೀ ಡೇ ಚೆರ್ಮನ್ ಆಗಿದ್ದಾರೆ. ರಂಗನಾಥ್ ಎಷ್ಟು ಪ್ರಮಾಣಿಕರೋ ಗೊತ್ತಿಲ್ಲ, ತನಿಖೆ ಸರಿಯಾಗಿ ನಡೆದಲ್ಲಿ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದರು.
ಸಂಪುಟ ವಿಸ್ತರಣೆಗೆ ಕ್ಲೈಮಾಕ್ಸ್ : ಶೀಘ್ರದಲ್ಲೇ ಹೊರ ಬೀಳಲಿದೆ ಪಟ್ಟಿ..!?