ಬೆಂಗಳೂರು: ಇತ್ತೀಚೆಗೆ ನಿರ್ಗತಿಕ ಮತ್ತು ಮಾನಸಿಕ ಅಸ್ವಸ್ಥತೆ ಹಾಗೂ 8 ತಿಂಗಳ ಗರ್ಭೀಣಿ ಮಹಿಳೆಗೆ ಸಖಿ ಕೇಂದ್ರದ ಆಸರೆ ಕಲ್ಪಿಸಿದೆ.


COMMERCIAL BREAK
SCROLL TO CONTINUE READING

ಸಖಿ-ಒನ್ ಸ್ಟಾಪ್ ಸೆಂಟರ್ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿ ಆಪ್ತಸಮಾಲೋಚನೆಯೊಂದಿಗೆ ಮಹಿಳೆಯ ಕುಟುಂಬದ ಮಾಹಿತಿ ಪತ್ತೆ ಮಾಡಿಕೊಂಡು ಕಾರಟಗಿ ಪೊಲೀಸ್ ಠಾಣೆರವರ ನೆರವಿನೊಂದಿಗೆ ಚಳ್ಳೂರು ಗ್ರಾಮ ಪಂಚಾಯಿತಿಯವರನ್ನ ಕರೆಯಿಸಿಕೊಂಡು ವಿಚಾರಿಸಿದಾಗ ನಿರ್ಗತಿಕ ಮಹಿಳೆಗೆ 25 ವರ್ಷ ವಯಸ್ಸು, ಹೆಸರು ದೇವಮ್ಮ ಗಂಡ ಚೌಡಪ್ಪ ಹಾಗೂ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಚಳ್ಳೂರು ಗ್ರಾಮದ ನಿವಾಸಿ ಎಂದು ಮಾಹಿತಿಯನ್ನು ಪಡೆಯಲಾಗಿದೆ.


ಇದನ್ನೂ ಓದಿ: ಭಾರತವು ಪ್ರಜಾಪ್ರಭುತ್ವದ ಶಕ್ತಿಯನ್ನು ಪ್ರತಿನಿಧಿಸುತ್ತದೆ-ಪ್ರಧಾನಿ ಮೋದಿ


ಈ ಮಹಿಳೆಯು ಕಳೆದ 4 ವರ್ಷಗಳಿಂದ ಮಾನಸಿಕ ಅಸ್ಥವ್ಯಸ್ಥಳಾಗಿ ಭಿಕ್ಷಾಟನೆ ಮಾಡಿಕೂಂಡು ಅಲೆದಾಡುತ್ತಿದ್ದು, ತನ್ನ 4 ವರ್ಷದ ಮಗಳನ್ನು ಗಂಡನ ಮನೆಯಲ್ಲಿ ಬಿಟ್ಟು ಬಂದಿರುತ್ತಾಳೆ. ತವರು ಮನೆಯಲ್ಲಿ ಬಾಧಿತಳ ತಾಯಿಯು ಕೂಡಾ ಮಾನಸಿಕ ಅಸ್ಥವ್ಯಸ್ಥಳಾಗಿದರಿಂದ ಬಾಧಿತಳನ್ನು ನೋಡಿಕೂಳ್ಳಲು ತವರು ಮತ್ತು ಗಂಡನ ಮನೆಯವರು ನಿರಾಕರಿಸಿರುತ್ತಾರೆ ಎಂಬ ಮಾಹಿತಿ ಬಂದಿರುತ್ತದೆ.


ಇದನ್ನೂ ಓದಿ: ಕರ್ನಾಟಕದಲ್ಲಿ ಓಮಿಕ್ರಾನ್ ರೂಪಾಂತರದ ಐದು ಹೊಸ ಪ್ರಕರಣಗಳು ಪತ್ತೆ


ಆದರಿಂದ ನಿರ್ಗತಿಕ ಮಹಿಳೆಯ ಮುಂದಿನ ಪೋಷಣೆ ಮತ್ತು ಅಭಿರಕ್ಷಣೆಗಾಗಿ ಬಾಧಿತಳ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಿಗೆ ಈ ಪ್ರಕರಣದ ಮಾಹಿತಿಯನ್ನು ಅವಗಾಹನೆಗೆ ಸಲ್ಲಿಸಿ, ನಂತರ ಅವರ ಅನುಮತಿ ಪಡೆದುಕೂಂಡು ಸ್ರೀ-ಸೇವಾ ನಿಕೇತನ ವಸತಿ ನಿಲಯ ಶಾಂತಿಧಾಮ, ಕಂಟೋನ್‌ಮೆಂಟ್ ಬಳ್ಳಾರಿ, ಇಲ್ಲಿಗೆ ಬಿಡಲು ಅನುಮತಿ ಪತ್ರ ಮತ್ತು ಚಳ್ಳೂರು ಗ್ರಾಮ ಪಂಚಾಯತಿರವರ ವಾಹನ ಸೌಕರ್ಯದೂಂದಿಗೆ ಡಿಸೆಂಬರ್ 06 ರಂದು ಬಿಟ್ಟು ಬರಲಾಗಿದ್ದು, ಈ ಮಹಿಳೆಯು ಸುರಕ್ಷಿತವಾಗಿರುತ್ತಾಳೆಂದು ಸಖಿ-ಒನ್ ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಪ್ರಕಟಣೆ ತಿಳಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.