ಬೆಂಗಳೂರು/ಚೆನ್ನೈ : ಚಂದನವನದ ಡ್ರಗ್ ಕೇಸ್ ಮಹತ್ವದ ತಿರುವು ಪಡೆದಿದ್ದು,  ಪ್ರಕರಣದ ಆರನೇ ಆರೋಪಿ ಆದಿತ್ಯ ಆಳ್ವಾ ಬಂಧನವಾಗಿದೆ. ಮಾಜಿ ಸಚಿವ ಜೀವರಾಜ್ ಆಳ್ವಾ ಅವರ ಪುತ್ರ ಆದಿತ್ಯ ಆಳ್ವಗಾಗಿ, ಕಳೆದ ನಾಲ್ಕು ತಿಂಗಳಿನಿಂದ ಪೊಲೀಸರು ಹುಡುಕಾಟ ನಡೆಸಿದ್ದರು. 


COMMERCIAL BREAK
SCROLL TO CONTINUE READING

ಸ್ಯಾಂಡಲ್ ವುಡ್ ಡ್ರಗ್ ಕೇಸ್ ನ ಅತಿ ಮುಖ್ಯ ಆರೋಪಿ :
ಸ್ಯಾಂಡಲ್ ವುಡ್ ಡ್ರಗ್ (Sandalwood Drug Case) ಪೂರೈಕೆ ದಂಧೆಯಲ್ಲಿ ಆದಿತ್ಯ ಆಳ್ವಾ (Aditya Alva) ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. ಸಿಸಿಬಿ (CCB) ಪೊಲೀಸರು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ದಿನಗಳಿಂದ ಆದಿತ್ಯ ಆಳ್ವಾ ತಲೆಮರೆಸಿಕೊಂಡಿದ್ದರು. ಬಾಲಿವುಡ್ (Bollywood) ನಟ ವಿವೇಕ್ ಒಬೆರಾಯ್ (Vivek Oberoi) ಬಾವಮೈದನಾಗಿರುವ ಆದಿತ್ಯ, ಮುಂಬಯಿನಲ್ಲಿರುವ ಅವರ ಸಹೋದರಿ ಮನೆಯಲ್ಲೂ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ, ಆದಿತ್ಯ ಮಾತ್ರ ಸಿಕ್ಕಿರಲಿಲ್ಲ. 


ಇದನ್ನೂ ಓದಿ : ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಹಿನ್ನಲೆಯಲ್ಲಿ 15 ನಟ-ನಟಿಯರಿಗೆ ಸಿಸಿಬಿ ನೊಟೀಸ್ ಸಾಧ್ಯತೆ


ಆದಿತ್ಯಗೆ ಖೆಡ್ಡಾ ರಚಿಸಿದ್ದ ಸಿಸಿಬಿ  :
ಸೆಪ್ಟೆಂಬರ್ 2020 ರಿಂದ ಆದಿತ್ಯ ಆಳ್ವಾ ತಲೆ ಮರೆಸಿಕೊಂಡಿದ್ದು, ಸಿಸಿಬಿ ಪೊಲೀಸರು ಅವರ ಹುಡುಕಾಟದಲ್ಲಿ ತೊಡಗಿದ್ದರು.  ಚೆನ್ನೈನ ರೆಸಾರ್ಟ್ (Resort) ಒಂದರಲ್ಲಿ ಆದಿತ್ಯ ಅಡಗಿರುವ ಸುದ್ದಿ ಸಿಸಿಬಿ ಕಿವಿಗೆ ಮುಟ್ಟಿತ್ತು. ಕೂಡಲೇ ಕಾರ್ಯಾಚರಣೆಗೆ ಇಳಿದ ಸಿಸಿಬಿ ತಂಡ, ಚೆನ್ನೈ ರೆಸಾರ್ಟ್ ನಲ್ಲಿ ಆದಿತ್ಯ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 


ಕಳೆದ ರಾತ್ರಿಯೇ ಆದಿತ್ಯ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ. ಚಾಮರಾಜಪೇಟೆ ಕಚೇರಿಯಲ್ಲಿ ಸಿಸಿಬಿ ವಿಚಾರಣೆ ನಡೆಸಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಪ್ರಕರಣದ ವಿಚಾರಣೆ ಸಿಸಿಬಿ ಕೈಗೆತ್ತಿಕೊಳ್ಳುತ್ತಿದ್ದಂತೆ ಆಳ್ವಾ ಪರಾರಿಯಾಗಿದ್ದ. ಬೆಂಗಳೂರಿನಲ್ಲಿರುವ (Bengaluru) ಆಳ್ವಾ ರೆಸಾರ್ಟಿನ ಮೇಲೂ ಪೊಲೀಸರು ದಾಳಿ ನಡೆಸಿದ್ದರು. ಅಲ್ಲಿ ಕೆಲವೊಂದು ಮಾದಕ ವಸ್ತುಗಳು ಸಿಕ್ಕಿದ್ದವು. ಆ ದಿನಗಳಿಂದ  ಆದಿತ್ಯ ಪರಾರಿಯಾಗಿದ್ದರು.


ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟಿಯರಾದ ರಾಗಿಣಿ ದ್ವಿವೇದಿ (Ragini), ಸಂಜನಾ ಗಲ್ರಾನಿ (Sanjana Galrani) ಅವರನ್ನು ಸಿಸಿಬಿ ವಶಕ್ಕೆ ಪಡೆದಿತ್ತು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.