ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ವೇಳೆಯೇ ಬಿಜೆಪಿ ಆಪರೇಷನ್ ನಡೆಸುತ್ತಿದೆ. ಇಂದು ಕೆಲ ಪ್ರಭಾವಿ ನಾಯಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಹಿರಿಯ ನಟ ಅನಂತ್ ನಾಗ್ ಬುಧವಾರ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.


COMMERCIAL BREAK
SCROLL TO CONTINUE READING

ಜೆಡಿಎಸ್ ಪಕ್ಷವನ್ನು ತೊರೆದು ನಟ ಅನಂತ್ ನಾಗ್ ಬಿಜೆಪಿ ಸೇರುತ್ತಿದ್ದಾರೆ. ಇವರ ಜೊತೆ ನೆಲಮಂಗಲದ ಕೆಲ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಸಹ ‘ಕಮಲ’ ಸೇರ್ಪಡೆಯಾಗಲಿದ್ದಾರೆ. ಇಂದು ಸಂಜೆ 4.30ಕ್ಕೆ ಬಿಜೆಪಿ ಕಚೇರಿಯಲ್ಲಿಗೆ ಸೇರ್ಪಡೆ ಕಾರ್ಯಕ್ರಮ ಆಯೋಜಿಸಲಾಗಿದೆ.


ಇದನ್ನೂ ಓದಿ: IAS vs IPS : ಆರ್‌ಟಿಐ ಕಾರ್ಯಕರ್ತನಿಗೆ ಡಿ.ರೂಪಾ ಅವಾಜ್ : ಆಡಿಯೋ ವೈರಲ್


ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವ ಡಾ.ಕೆ.ಸುಧಾಕರ್, ಸಚಿವ ಮುನಿರತ್ನ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ನಟ ಅನಂತ ನಾಗ್ ಅವರು 1983ರಿಂದ ಜನತಾದಳ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು.   


ಅನಂತ ನಾಗ್ ಅವರು 1983,198 ಮತ್ತು 1989ರ ಚುನಾವಣೆಗಳಲ್ಲಿ ಜನತಾದಳದ ಸ್ಟಾರ್ ಪ್ರಚಾರಕರಾಗಿದ್ದರು. 1994ರಲ್ಲಿ ಮಲ್ಲೇಶ್ವರಂ ಕ್ಷೇತ್ರದಿಂದ ವಿಧಾನಸಭೆಗೆ ಅವರು ಆಯ್ಕೆಯಾಗಿದ್ದರು. ಜೆ.ಎಚ್.ಪಟೇಲ್ ರ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಚಿವರಾಗಿದ್ದರು. 1983ರ ಲೋಕಸಭೆ ಚುನಾವಣೆಯಲ್ಲಿ ಕೂಡ ಅನಂತ್ ನಾಗ್ ಸ್ಪರ್ಧಿಸಿದ್ದರು.


ಇದನ್ನೂ ಓದಿ: ಸಂಸಾರ ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ ಎಂದು ರೂಪ ಪೋಸ್ಟ್: ರೂಪ ಗಂಡನ‌ ಮೇಲೆ ಕಣ್ಣಾಕಿದ್ರಾ ರೋಹಿಣಿ ಸಿಂಧೂರಿ..!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.