ಬೆಂಗಳೂರು : ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಕ್ರೆಡಿಟ್ ವಾರ್ ಜೋರಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇದನ್ನೇ ಪ್ಲಸ್ ಮಾಡಿಕೊಳ್ಳೋಕೆ ಮೂರು ಪಕ್ಷಗಳಲ್ಲೂ ಸಮಬಲದ ಟಾಕ್ ವಾರ್ ನಡೆದಿದೆ. ನಾವು ತಂದಿದ್ದು, ನಾವು ಮಾಡಿದ್ದು, ನಮ್ಮ ಪ್ರಯತ್ನ ಎಂದು ಮೂರು ಪಕ್ಷಗಳಲ್ಲೂ ಕ್ರೆಡಿಟ್‌ಗಾಗಿ ಜಿದ್ದಾಜಿದ್ದಿ ಶುರುವಾಗಿದೆ. ಇದ್ರ ನಡುವೆ ಸ್ವಪಕ್ಷೀಯ ಬಿಜೆಪಿ ನಾಯಕರಲ್ಲೇ ಕ್ರೆಡಿಟ್‌ಗಾಗಿ ಪೈಪೋಟಿ ನಡೆದಿದೆ.


COMMERCIAL BREAK
SCROLL TO CONTINUE READING

ಮೊನ್ನೆಯಷ್ಟೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ‌ ಹೆಚ್ಚಳದ ನಿರ್ಣಯಕೈಗೊಳ್ಳಲಾಗಿದೆ. ಸರ್ವ ಪಕ್ಷ ಸಭೆಯಲ್ಲಿ ತೆಗೆದುಕೊಂಡ ಸಲಹೆಗಳಂತೆಯೇ ಎಸ್ಸಿ ಸಮುದಾಯಗಳಿಗೆ ಶೇ15 ರಿಂದ ಶೇ 17 ಹಾಗೂ ಎಸ್ಟಿ ಸಮುದಾಯಕ್ಕೆ ಶೇ3 ರಿಂದ ಶೇ 7% ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ ಪಡೆಯಲಾಗಿದೆ. ಕ್ಯಾಬಿನೆಟ್ ಸಮ್ಮತಿಯ ನಂತ್ರ ಮೊದಲ ಹಂತದ ಪ್ರಕ್ರಿಯೇನೋ ಮುಗಿದಿದೆ. ಆದ್ರೆ ಅನುಷ್ಠಾನವಾಗಬೇಕಲ್ಲ. ವಿಧಾನಮಂಡಲ ಅಧಿವೇಶನ ನಡೆಯಬೇಕು, ಉಭಯಸನದಗಳ ಒಪ್ಪಿಗೆ ಪಡೆಯಬೇಕು ನಂತ್ರ ರಾಷ್ಟ್ರಪತಿಗಳ ಅಂಗೀಕಾರವಾಗಬೇಕು. ಗೆಜೆಟ್ ಆದ ಬಳಿಕ ಅದು ಅಧಿಕೃತ ಕಾಯ್ದೆಯಾಗಿ ಜಾರಿಗೆ ಬಂದು ಅನುಷ್ಠಾನವಾಗಲಿದೆ. ಆದ್ರೆ ಇನ್ನೂ ಮೊದಲ ಹಂತದ ಪ್ರಕ್ರಿಯೆಯಲ್ಲೇ ರಾಜ್ಯದ ಮೂರು ರಾಜಕೀಯ ಪಕ್ಷಗಳ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ. ಚುನಾವಣೆ ಹತ್ತಿರವಾಗ್ತಿರೋದ್ರಿಂದ ಅದರ ಲಾಭ ಪಡೆಯಲು ನಾವು ಮಾಡಿದ್ದು, ನಾವು ತಂದಿದ್ದು, ನಾವು ಪ್ರಯತ್ನಿಸಿದ್ದು ಎಂಬ ಟಾಕ್ ವಾರ್ ಜೋರಾಗ್ತಿದೆ. ಮೂರು ಪಕ್ಷಗಳ ಲಾಭ ಪಡೆಯೋ ಪ್ರಯತ್ನ ನಡೆಸಿವೆ.


ಇದನ್ನೂ ಓದಿ: ಹೆಣ್ಣಿನ ಈ ಗುಣಗಳ ಮುಂದೆ ಎಂತ ಶಕ್ತಿಶಾಲಿ ಪುರುಷನು ತಲೆಬಾಗುತ್ತಾನೆ!


ನಾಗಮೋಹನ್ ದಾಸ್ ಕಮಿಟಿ ರಚಿಸಿದ್ದು ನಾವು : ಮೂರು ಪಕ್ಷಗಳ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ. ಇಲ್ಲಿಯವರೆಗೆ ಯಾರೂ ಇದನ್ನ ಮಾಡಲಿಲ್ಲ. ಗಟ್ಟಿ ಗುಂಡಿಗೆ ಇದ್ರೆ ಮಾತ್ರ ಮಾಡೋಕೆ ಸಾಧ್ಯ. ಒಬಿಸಿಯಿಂದ ಎಸ್ಟಿಗೆ ವಾಲ್ಮೀಕಿ ಸಮುದಾಯ ತಂದಿದ್ದು ರಾಮಕೃಷ್ಣಹೆಗಡೆ. ಮೀಸಲಾತಿ ಹೆಚ್ಚಳ ಮಾಡಿದ್ದು ನಾವು ಅಂತ ಬಿಜೆಪಿ ನಾಯಕರು ತೊಡೆತಟ್ಟುತ್ತಿದ್ದಾರೆ. ಹಿಂದಿನಿಂದಲೂ ಕೊಡ್ಬೇಕು ಅಂತ ಪ್ರಯತ್ನ ನಡೆಸಿದ್ದು ನಾವು. ಕಾನೂನಾತ್ಮಕವಾಗಿ ಪರಿಶೀಲಿಸಿದ್ದು ನಾವು. ಸರ್ವಪಕ್ಷ ಸಭೆಯಲ್ಲಿ ಡಿಮ್ಯಾಂಡ್ ಮಾಡಿದ್ದೂ ನಾವೇ ಅಂತ ಕಾಂಗ್ರೆಸ್ ನಾಯಕರು ಶುರುಹಚ್ಚಿಕೊಂಡಿದ್ದಾರೆ. ನಿಮ್ಮಿಬ್ಬರಿಗಿಂತ ಮೊದಲೇ ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಿದ್ದವರು ನಾವು. ಇದಕ್ಕಾಗಿ ನ್ಯಾ.ನಾಗಮೋಹನ್ ದಾಸ್ ಕಮಿಟಿಯನ್ನ ರಚಿಸಿದ್ದು ನಾವೇ. ಇದ್ರ ಮೊದಲ ಕ್ರೆಡಿಟ್ ನಮಗೇ ಸಿಗ್ಬೇಕು ಅಂತ ಜೆಡಿಎಸ್ ನಾಯಕರು ಸದ್ದುಮಾಡ್ತಿದ್ದಾರೆ.


ಬಿಜೆಪಿ ವಾಲ್ಮೀಕಿ ನಾಯಕರಲ್ಲೂ ಕ್ರೆಡಿಟ್ ವಾರ್ : ಮೀಸಲಾತಿ ಹೆಚ್ಚಳದ ಕ್ರೆಡಿಟ್ ಪಡೆಯೋಕೆ ಸರ್ಕಾರ ಹಾಗೂ ಪ್ರತಿಪಕ್ಷಗಳು ಒಂದು ಕಡೆ ಪೈಪೋಟಿ ನಡೆಸಿದ್ರೆ, ವಾಲ್ಮೀಕಿ ಸಮುದಾಯದ ನಾಯಕರಲ್ಲೂ ಕ್ರೆಡಿಟ್ ತೆಗೆದುಕೊಳ್ಳುವ ಪ್ರಯತ್ನಗಳು ನಡೆದಿವೆ. ಸಮುದಾಯದ ಸಚಿವ ಶ್ರೀರಾಮುಲು ಹಾಗೂ ರಾಜುಗೌಡ ನಡುವೆ ಪೈಪೋಟಿ ಶುರುವಾಗಿದೆ. ನಾವೇ ಸರ್ಕಾರದ ಮೇಲೆ ಒತ್ತಡ ತಂದು ಮಾಡಿಸಿದ್ದು ಅಂತ ಓಡಾಡ್ತಿದ್ದಾರೆ. ಸಮುದಾಯಕ್ಕೆ ನಾವೇ ಮಾಡಿಸಿದ್ದು ಅನ್ನೋ ಸಂದೇಶ ಹೋಗ್ಬೇಕು. ಸಮುದಾಯ ನಮ್ಮ ಮಾತನ್ನ ಕೇಳ್ಬೇಕು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಚುನಾವಣೆಯಲ್ಲೂ ನಮಗೆ ಇದು ಪ್ಲಸ್ ಆಗ್ಬೇಕು ಅಂತ ಬಹಳ ಜೋರಾಗಿಯೇ ಹೇಳಿಕೆಗಳ ಮೇಲೆ ಹೇಳಿಕೆ ಕೊಡ್ತಿದ್ದಾರೆ. 


ಇದನ್ನೂ ಓದಿ: ಪಡ್ಡೆ ಹೈಕ್ಳ ಬಾಡಿ ಟೆಂಪರೇಚರ್ ಹೆಚ್ಚಿಸಿದ ಶ್ರದ್ಧಾ ಶೃಂಗಾರ ವೈಭವ..!


ಆದ್ರೆ ನಿಜವಾಗಿಯೂ ಮೀಸಲಾತಿ ಹೋರಾಟವನ್ನ ಬಡಿದೆಬ್ಬಿಸಿದ್ದು ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಪಟ್ಟು ಬಿಡದೆ ಹೋರಾಟವನ್ನ ಮಾಡಿದವ್ರು ಸಮುದಾಯದ ಗುರು ಪ್ರಸನ್ನಾನಂದರು. ಸುಧೀರ್ಘ 242 ದಿನಗಳ ಕಾಲ ಧರಣಿ ಮಾಡುವ ಮೂಲಕ ಸರ್ಕಾರದ ಮೇಲೆ ಒತ್ತಡ ತಂದವರು ಶ್ರೀಗಳು. ಒಂದು ದಿನವೂ ಧರಣಿಗೆ ಸಾಥ್ ನೀಡದ ನಾಯಕರು ಈಗ ಮಾತ್ರ ತಾವು ಮಾಡಿದ್ದು, ನಾವೇ ಒತ್ತಡ ತಂದಿದ್ದು ಅಂತ ಓಡಾಡ್ತಿದ್ದಾರೆಂಬ ಮಾತು ಅವರ ಸಮಾಜದಲ್ಲಿ ಕೇಳಿಬರ್ತಿದೆ.


ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದ ಕ್ರೆಡಿಟ್ ವಾರ್ ಜೋರಾಗಿದೆ. ಇನ್ನೂ ಅನುಷ್ಟಾನವೇ ಆಗಿಲ್ಲ, ಆಗಲೇ ಬಿಜೆಪಿ ನಾಯಕರು ನಾವು ಮಾಡಿದ್ದು ಅಂತ ಓಡಾಡ್ತಿದ್ದಾರೆ. ಚುನಾವಣೆಯಲ್ಲಿ ಇದ್ರ ಲಾಭ ಪಡೆಯೋಕೆ ಮುಂದಾಗಿದ್ದಾರೆ. ಮತ್ತೊಂದು ಕಡೆ ನಾಗಮೋಹನ್ ದಾಸ್ ಕಮಿಟಿ ಮಾಡಿದ್ದು ನಾವು, ಸರ್ವಪಕ್ಷ ಸಭೆಯಲ್ಲಿ ಧ್ವನಿ ಎತ್ತಿದ್ದು ನಾವು ಅಂತ ಜೆಡಿಎಸ್, ಕಾಂಗ್ರೆಸ್ ಕೂಡ ಓಡಾಡ್ತಿವೆ. ಆದ್ರೆ ಸಮುದಾಯದ ಜನ ಮಾತ್ರ ಅನುಷ್ಟಾನ ಯಾವಾಗ ಅಂತ ತಲೆಮೇಲೆ ಕೈಹೊತ್ತು ಎದುರು ನೋಡ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.