Siddaramaiah : ಹಿಜಾಬ್ ಪರವಾಗಿ ನಿಂತ ಸಿದ್ದರಾಮಯ್ಯ : ಸುತ್ತೋಲೆ ವಾಪಾಸ್ ಪಡೆಯಲು ಆಗ್ರಹ!
ಇವತ್ತು, ನಾಳೆ, ಎಲ್ಲಿಯವರೆಗೂ ಅಸೆಂಬ್ಲಿ ನಡೆಯುತ್ತದೆ ಅಲ್ಲಿಯವರೆಗೂ ಅಹೋರಾತ್ರಿ ಧರಣಿ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು : ಅಲ್ಪಸಂಖ್ಯಾತ ಶಾಲಾ ಸಂಸ್ಥೆಗಳಿಗೂ ಸಮವಸ್ತ್ರ ಕಡ್ಡಾಯ, ಹಿಜಾಬ್ ಧರಿಸುವಂತಿಲ್ಲ ಎಂಬ ಸುತ್ತೋಲೆ ವಾಪಾಸ್ ಪಡೆಯಲು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ ಮಾಡಿದರು.
ಈ ಕುರಿತು ವಿಧಾನಸಭೆಯ ಕಲಾಪ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ(Siddaramaiah), ಹೆಣ್ಣುಮಕ್ಕಳ ಪೋಷಕರು ಆತಂಕದಲ್ಲಿದ್ದಾರೆ, ಸಿಎಂ ಗೆ ಆಗ್ರಹಿಸಿದ್ದೇನೆ, ಕೂಡಲೇ ಈ ಹೊಸ ಸರ್ಕ್ಯುಲೇಷನ್ (ಸುತ್ತೋಲೆ) ವಾಪಾಸ್ ಪಡೆಯಬೇಕು.ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತ ಮಾಡುವುದಕ್ಕಿಂತ ಸಂವಿಧಾನ ಬಾಹಿರ ಕೆಲಸ ಮತ್ತೊಂದಿಲ್ಲ,ಸಂವಿಧಾನಬಾಹಿರ ಎಂದರೆ ದೇಶದ್ರೋಹದ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಧರಣಿ ಕೈ ಬಿಡದ ಕಾಂಗ್ರೆಸ್ : ಸೋಮವಾರದ ಬಳಿಕ ಸದನ ಅನಿರ್ದಿಷ್ಟಾವಧಿ ಗೆ ಮುಂದೂಡಲು ಸರ್ಕಾರ ತೀರ್ಮಾನ ?
ಅಲ್ಪಸಂಖ್ಯಾತರು, ಅದರಲ್ಲೂ ಮುಸಲ್ಮಾನರು ಇತ್ತೀಚೆಗೆ ಶಿಕ್ಷಣಕ್ಕೆ ಹೆಚ್ಚು ಬರುತ್ತಿದ್ದಾರೆ.ಹಿಂದೆ ಬಹಳ ಹಿಂದುಳಿದಿದ್ದರು,
ಈಗ ಅವರ ಹೆಣ್ಣುಮಕ್ಕಳು ಶಾಲೆಗೆ ಬರುತ್ತಿದ್ದಾರೆ.ಈಗ ಹಿಜಾಬ್(Hijab) ವಿಷಯ ಎತ್ತಿ ಸಂಘಪರಿವಾರದವರು ಆ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿ ಮಾಡಲು ಮುಂದಾಗಿದ್ದಾರೆ ಎಂದರು.
ಶಿಕ್ಷಣ ಎಲ್ಲರ ಹಕ್ಕು ,ಕೋರ್ಟ್ ನಿಂದ ಆದೇಶ ಆಗಿದೆ
ಎಲ್ಲಿ ಡೆವಲಪ್ಮೆಂಟ್ ಕಮಿಟಿ ಸಮವಸ್ತ್ರ(Uniform) ಕಡ್ಡಾಯ ಮಾಡಿದ್ದಾರೆ ಅಲ್ಲಿ ಸಮವಸ್ತ್ರ ಧರಿಸುವುದು ಕಡ್ಡಾಯ ಅಂದಿದ್ದಾರೆ. ಎಲ್ಲರಿಗೂ ಇದು ಅಪ್ಲೈ ಆಗುವುದಿಲ್ಲ, ಇತ್ತೀಚೆಗೆ ಅಶ್ವಥ್ ನಾರಾಯಣ್ ಹೇಳಿಕೆ ಕೊಟ್ಟಿದ್ದಾರೆ. ಡ್ರೆಸ್ ಕೋಡ್ ಡಿಗ್ರಿ ಕಾಲೇಜ್ ಗಳಿಗೆ ಅನ್ವಯ ಆಗಲ್ಲ ಎಂದಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯ ಶಾಲಾ ಕಾಲೇಜಿಗೂ ಅನ್ವಯ ಆಗುತ್ತದೆ ಅಂತ ಆದೇಶ ಹೊರಡಿಸಿದ್ದಾರೆ.ಆದರೆ ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಡೆವಲಪ್ಮೆಂಟ್ ಕಮಿಟಿಯೇ ಇಲ್ಲ.ಹೀಗಾಗಿ ಹೈಕೋರ್ಟ್ ಆರ್ಡರ್ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ? ಎಂದು ಪ್ರಶ್ನಿಸಿದರು.
ಹಿಜಾಬ್ ಪರವಾಗಿ ನಿಂತ ಸಿದ್ದರಾಮಯ್ಯ:
ಅನಗತ್ಯವಾಗಿ ಸಂಘಪರಿವಾರದವರು ಹಿಜಾಬ್ ಬಗ್ಗೆ ವಿವಾದ ಹುಟ್ಟುಹಾಕಿದ್ದಾರೆ, ಹಿಜಾಬ್ ಧರಿಸುವುದು ಅನೇಕ ವರ್ಷದಿಂದ ನಡೆದಿರುವ ಪದ್ಧತಿ.ಕಾಲಕ್ರಮೇಣ ಕೆಲವು ವಿದ್ಯಾರ್ಥಿಗಳು(Students) ಹಾಕದೇ ಇರಬಹುದು.ಆದರೆ ಬಹುತೇಕ ವಿದ್ಯಾರ್ಥಿಗಳು ಧರಿಸಿಯೇ ಹೋಗುತ್ತಾರೆ.ಹಿಜಬ್ ಧರಿಸುವುದರಿಂದ ಬೇರೆ ಯಾರಿಗೂ ತೊಂದರೆ ಆಗುವುದಿಲ್ಲ,
ಇದನ್ನೂ ಓದಿ : ಹಿಜಾಬ್ ತೆಗೆದು ಪಾಠ ಮಾಡಲು ಉಪನ್ಯಾಸಕಿ ನಕಾರ, ಕೆಲಸಕ್ಕೆ ರಾಜೀನಾಮೆ
ಈಗಾಗಲೇ ಕೋರ್ಟ್ ನಲ್ಲಿ ಈ ವಿಚಾರ ಚರ್ಚೆಯಲ್ಲಿದೆ,ಗಂಭೀರವಾಗಿ ಕೋರ್ಟ್ ಪರಿಗಣಿಸಿದೆ ಎಂದು ವಿದ್ಯಾರ್ಥಿನಿಯರ ಹಿಜಾಬ್ ವಿಚಾರ ಸಮರ್ಥಿಸಿಕೊಂಡರು.
ಆಯಾ ಧರ್ಮದ ಸಂಪ್ರದಾಯ ಏನಿದೆ, ಅದನ್ನು ಅವರು ಪಾಲಿಸುತ್ತಾರೆ ಹಿಂದೂ, ಕ್ರಿಶ್ಚನ್, ಜೈನ್, ಮುಸ್ಲಿಂ, ಬುದ್ಧರು ಅವರವರ ಧರ್ಮ ಆಚರಣೆಗೆ ಸಂವಿಧಾನ ಅವಕಾಶ ಕೊಟ್ಟಿದೆ.ಇದಕ್ಕೆ ಯಾರೂ ಅಡ್ಡಿಪಡಿಸಬಾರದು,ಸಂವಿಧಾನದತ್ತ ಹಕ್ಕು ಅದು ಎಂದರು.
ಇವತ್ತು, ನಾಳೆ, ಎಲ್ಲಿಯವರೆಗೂ ಅಸೆಂಬ್ಲಿ ನಡೆಯುತ್ತದೆ ಅಲ್ಲಿಯವರೆಗೂ ಅಹೋರಾತ್ರಿ ಧರಣಿ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.