ಕಲಬುರಗಿ: ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನಮಾನವಿದೆ‌. ಆದರೆ ಇತ್ತೀಚಿನ ದಿನಗಳಲ್ಲಿ ಗುರುವಿನ ಮೇಲೆ ಗೌರವ ಕಡಿಮೆಯಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಕಲಬುರಗಿ(Kalaburagi District)ಯಲ್ಲಿ ಮನ ಕಲಕುವ ಘಟನೆಯೊಂದು ನಡೆದಿದೆ.


COMMERCIAL BREAK
SCROLL TO CONTINUE READING

ಸೇಡಂ ತಾಲೂಕಿನ ಲಿಂಗಂಪಲ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶ್ರೀನಿವಾಸ ಕುಲಕರ್ಣಿ ಬೇರೊಂದು ಶಾಲೆ(Government School)ಗೆ ವರ್ಗಾವಣೆಯಾಗಿದ್ದರು. ಹೀಗಾಗಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಆದರೆ ಈ ವೇಳೆ ಶಾಲೆಯ ಸಹ ಶಿಕ್ಷಕರು, ವಿದ್ಯಾರ್ಥಿಗಳು ಕಣ್ಣೀರಿಡುತ್ತ ಶ್ರೀನಿವಾಸ ಕುಲಕರ್ಣಿ ಅವರನ್ನು ಬೀಳ್ಕೊಟ್ಟಿದ್ದಾರೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಭಾವನಾತ್ಮಕ ಸಂಬಂಧಕ್ಕೆ ಈ ಘಟನೆ ಸಾಕ್ಷಿಯಾಗಿದೆ‌.


ಇದನ್ನೂ ಓದಿ: Crorepati:ದಿನಕ್ಕೆ ಕೇವಲ 20 ರೂ. ಹೂಡಿಕೆ ಮಾಡಿ... ಕೋಟ್ಯಾಧಿಪತಿಗಳಾಗಿ.!


'ಪ್ಲೀಸ್ ಸರ್ ಹೋಗಬೇಡಿ'


‘ನಮಗೆ ಚೆನ್ನಾಗಿ ಪಾಠ ಮಾಡ್ತೀರಿ.. ನೀವು ಇನ್ನೂ ಪಾಠ ಮಾಡಬೇಕು. ದಯವಿಟ್ಟು ನೀವು ಹೋಗಬೇಡಿ, ಇಲ್ಲೇ ಇರಿ’ ಎಂದು ಶಾಲೆಯ ಹಲವಾರು ವಿದ್ಯಾರ್ಥಿಗಳು ಶಿಕ್ಷಕ ಶ್ರೀನಿವಾಸ ಕುಲಕರ್ಣಿ(Teacher) ಅವರ ಬಳಿ ಕಣ್ಣೀರು ಹಾಕುತ್ತಾ ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಎಂತವರ ಕಣ್ಣಂಚಲ್ಲಿಯೂ ನೀರು ಜೀನುಗಿಸುವಂತಿತ್ತು.


ಅಂದಹಾಗೆ 2013 ರಿಂದ ಸೇಡಂ ತಾಲೂಕಿನ ಲಿಂಗಂಪಲ್ಲಿ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಶ್ರೀನಿವಾಸ ಕುಲಕರ್ಣಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸರಳವಾಗಿ ಪಾಠ ಮಾಡಿ ವಿದ್ಯಾರ್ಥಿ(Students)ಗಳ ನೆಚ್ಚಿನ ಶಿಕ್ಷಕರಾಗಿದ್ದರು. ಹೀಗಾಗಿ ತಮ್ಮ ನೆಚ್ಚಿನ ಶಿಕ್ಷಕ ವರ್ಗಾವಣೆ ಆಗುತ್ತಿರುವುದು ವಿದ್ಯಾರ್ಥಿಗಳಿಗೆ ನೋವು ತಂದಿತ್ತು. ಬೀಳ್ಕೊಡುವ ಸಂದರ್ಭದಲ್ಲಿ ಸಹಶಿಕ್ಷಕರು, ವಿದ್ಯಾರ್ಥಿಗಳು ಕಣ್ಣೀರು ಹಾಕಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


ಇದನ್ನೂ ಓದಿ: Senior Citizens: 60 ವರ್ಷಕ್ಕಿಂತ ಮೇಲ್ಪಟ್ಟ ತೆರಿಗೆ ಪಾವತಿದಾರರಿಗೊಂದು ಮಹತ್ವದ ಮಾಹಿತಿ


ಕೆಲವು ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅಳುತ್ತಲೇ ವರ್ಗಾವಣೆ(Teacher Transfer)ಯಾಗಿರುವ ಶಿಕ್ಷಕರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಅಳುವುದನ್ನು ಕಂಡು ಶಿಕ್ಷಕರು ಸಹ ಕಣ್ಣೀರು ಸುರಿಸಿದ್ದಾರೆ. ಲಿಂಗಂಪಲ್ಲಿ ಶಾಲೆಯಿಂದ ವರ್ಗವಾಗಿರುವ ಶ್ರೀನಿವಾಸ ಕುಲಕರ್ಣಿ ಅವರು ಇದೀಗ ಸೇಡಂನ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ವರ್ಗವಾಗಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.