Senior Citizens: 60 ವರ್ಷಕ್ಕಿಂತ ಮೇಲ್ಪಟ್ಟ ತೆರಿಗೆ ಪಾವತಿದಾರರಿಗೊಂದು ಮಹತ್ವದ ಮಾಹಿತಿ

Senior Citizen Taxpayers - 60 ವರ್ಷಕ್ಕಿಂತ ಮೇಲ್ಪಟ್ಟ ತೆರಿಗೆ ಪಾವತಿದಾರರಿಗೆ ಮೆಡಿಕ್ಲೈಮ್ ಅಥವಾ ಆರೋಗ್ಯ ವಿಮೆ ನೀಡುವ ವಿಷಯದ ಬಗ್ಗೆಯೇ ಆಗಲಿ ಅಥವಾ ಹೊಸದಾಗಿ ಯೋಜನೆಯನ್ನು ಪ್ರಾರಂಭಿಸಲು ಸರ್ಕಾರಕ್ಕೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

Written by - Nitin Tabib | Last Updated : Dec 13, 2021, 04:19 PM IST
  • 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ತೆರಿಗೆ ಪಾವತಿದಾರರಿಗೊಂದು ಮಹತ್ವದ ಸುದ್ದಿ,
  • ಮೆಡಿಕ್ಲೇಮ್ ಅಥವಾ ವೈದ್ಯಕೀಯ ವಿಮೆ ನೀಡುವ ಕುರಿತು ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದ ಸರ್ಕಾರ.
  • ಸರ್ಕಾರವೂ ಕೂಡ ಈ ನಿಟ್ಟಿನಲ್ಲಿ ಯೋಜನೆ ರೂಪಿಸುವ ಗುರಿ ಹೊಂದಿಲ್ಲ.
Senior Citizens: 60 ವರ್ಷಕ್ಕಿಂತ ಮೇಲ್ಪಟ್ಟ ತೆರಿಗೆ ಪಾವತಿದಾರರಿಗೊಂದು ಮಹತ್ವದ ಮಾಹಿತಿ  title=
Senior Citizen Taxpayers (File Photo)

Senior Citizen Taxpayers: 60 ವರ್ಷ ಮೇಲ್ಪಟ್ಟ ಹಿರಿಯ ತೆರಿಗೆ ಪಾವತಿದಾರರಿಗೊಸ್ಕರ ಮೆಡಿಕ್ಲೈಮ್ (Mediclaim) ಅಥವಾ ಆರೋಗ್ಯ ವಿಮೆಯನ್ನು (Health Insurance) ಒದಗಿಸುವ ಯಾವುದೇ ಯೋಜನೆಯನ್ನು ಅನುಮೋದಿಸಲು ಹಣಕಾಸು ಸಚಿವ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ನಿರಾಕರಿಸಿದ್ದಾರೆ. ಅಂತಹ ಯೋಜನೆಯನ್ನು ಪ್ರಾರಂಭಿಸಲು ಸರ್ಕಾರವು ಯಾವುದೇ ಪ್ರಸ್ತಾವನೆಯನ್ನು ಪಡೆದಿಲ್ಲ ಹಾಗೂ ಅಂತಹ ಯಾವುದೇ ಹೊಸ ಪ್ರಸ್ತಾವನೆಯನ್ನು ಜಾರಿಗೆ ತರಲು ಸರ್ಕಾರ ಕೂಡ ಚಿಂತಿಸುತ್ತಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ-Dish TV: ಯೆಸ್ ಬ್ಯಾಂಕ್ ವಿರುದ್ಧ ಡಿಶ್ ಟಿವಿಯ ಹೊಸ ಆರೋಪ, ಬಿಡ್‌ ಉಲ್ಲಂಘನೆ ಕುರಿತಂತೆ SEBIಗೆ ಪತ್ರ

ಈ ಕುರಿತು ಸರ್ಕಾರವನ್ನು ಪ್ರಶ್ನಿಸಲಾಗಿತ್ತು
ವಾಸ್ತವವಾಗಿ, ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ, ಸಂಸದರಾದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ ಮತ್ತು ದೀಪಸಿಂಗ್ ಶಂಕರ್ ಸಿಂಗ್ ರಾಥೋಡ್ ಅವರು ಹಣಕಾಸು ಸಚಿವರನ್ನು 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ತೆರಿಗೆದಾರರಿಗೆ ಸಾಮಾಜಿಕ ಭದ್ರತೆಯ ಅಡಿಯಲ್ಲಿ ಸರ್ಕಾರವು ಎಲ್ಲಾ ಆದಾಯ ತೆರಿಗೆ ಮೌಲ್ಯಮಾಪನಗಳನ್ನು ನೀಡುತ್ತದೆಯೇ ಎಂದು ಪ್ರಶ್ನಿಸಿದ್ದರು. ತೆರಿಗೆ ಪಾವತಿದಾರರ ಒಟ್ಟು ಆದಾಯ ತೆರಿಗೆ ಕೊಡುಗೆಯನ್ನು ತಲುಪಿದಾಗ, ಅವರು ಪಾವತಿಸಿದ ತೆರಿಗೆಯ ಆಧಾರದ ಮೇಲೆ ಗುಂಪು ವಿಮೆಯ ಪೂಲ್ ಅನ್ನು ರಚಿಸುವ ಮೂಲಕ ಆರೋಗ್ಯ ಅಥವಾ ವೈದ್ಯಕೀಯ ವಿಮೆ ನೀಡಬಹುದು? ಅಥವಾ ಈ ಯೋಜನೆಯನ್ನು ಪ್ರಾರಂಭಿಸುವ ಬಗ್ಗೆ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ  ಬಂದಿದೆಯೇ? ಎಂದು ಅವರು ಪ್ರಶ್ನಿಸಿದ್ದರು.

ಇದನ್ನೂ ಓದಿ-SBI Special Current Account ವಹಿವಾಟು ಸೇರಿದಂತೆ ಸಿಗಲಿದೆ ಅನೇಕ ಪ್ರಯೋಜನ

ಹಣಕಾಸು ಸಚಿವರ ಉತ್ತರ ಏನು?
ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರ್ಕಾರಕ್ಕೆ ಅಂತಹ ಯಾವುದೇ ಪ್ರಸ್ತಾವನೆ ಬಂದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲು ನಿರಾಕರಿಸಿದ್ದು, ಇದೀಗ ಅಂತಹ ಯಾವುದೇ ಜ್ಞಾಪಕ ಪತ್ರದ ಆಧಾರದ ಮೇಲೆ ಅನುಮೋದನೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ-Renault Offers: ಈ ಕಂಪನಿಯ ಕಾರುಗಳ ಮೇಲೆ 1.30 ಲಕ್ಷ ರೂ.ವರೆಗಿನ ಭರ್ಜರಿ ಆಫರ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News