ಬೆಂಗಳೂರು: ಕಿಲ್ಲರ್ ಕೊರೊನಾ ಕಾರಣದಿಂದಾಗಿ ರಾಜ್ಯದಲ್ಲಿ ಸರಿಯಾಗಿ ಶಾಲೆಗಳು ಓಪನ್ ಆಗಿರಿಲಿಲ್ಲ. ಸದ್ಯ ನಾಲ್ಕನೇ ಅಲೆಯ ಪ್ರಭಾವ ಅಷ್ಟಕ್ಕಷ್ಟೆ ಅನ್ನೋ ಹಿನ್ನೆಲೆಯಲ್ಲಿ 2022 -23ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಬೇಗ ಆರಂಭ ಮಾಡಿದ್ದಾರೆ. ಇದರ ಮುಂದುವರೆದ ಭಾಗವಾಗಿ ನಾಳೆಯಿಂದ (16-05-2022) ಶಾಲೆಗಳು ಪುನಾರಂಭ ಆಗುತ್ತಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆಗಳು ನಡೆಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: ಬಿಎಂಟಿಸಿ ಬಸ್‌ ಬೆಂಕಿ ಪ್ರಕರಣಕ್ಕೆ ಮೆಗಾ ಟ್ವಿಸ್ಟ್: ಸಿಬ್ಬಂದಿ ಬುಡಕ್ಕೆ ಬೆಂಕಿ ಹಚ್ಚಿದ ನಿಗಮದ ನೋಟೀಸ್


ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನಾಳೆಯಿಂದ ಕಲಿಕಾ ಚೇತರಿಕೆ: 
ಬೇಸಿಗೆ ರಜೆ ಇದ್ದಿದ್ದರಿಂದ ಇಷ್ಟು ದಿನ ಜಾಲಿಯಾಗಿ ಕಾಲ ಕಳೆದಿದ್ದ ಮಕ್ಕಳು ಈಗ ಬ್ಯಾಗು ಹೆಗಲಿಗೇರಿಸಿಕೊಂಡು ಶಾಲೆಗೆ ಹೋಗಲು ತಯಾರಾಗಬೇಕಿದೆ. ಅಂದಹಾಗೆ ಸೋಮವಾರದಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ತೆರೆಯಲು ಶಿಕ್ಷಣ ಇಲಾಖೆ ಸೂಚನೆ ನೀಡಿರುವ ಕಾರಣ 1 ರಿಂದ 10ನೇ ತರಗತಿವರೆಗಿನ ಮಕ್ಕಳು ನಾಳೆಯೇ ಶಾಲೆಬರಬೇಕಿದೆ.  ಹೀಗಾಗಿ ರಾಜ್ಯಾದ್ಯಂತ ಇರುವ ಶಾಲೆಗಳಲ್ಲಿ ಭಾನುವಾರ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಯಿತು. ಶಿಕ್ಷಣ ಇಲಾಖೆ ಆದೇಶದಂತೆ  ನಗರದ ಮಲೇಶ್ವರದ ಸರ್ಕಾರಿ ಪಬ್ಲಿಕ್ ಶಾಲೆ, ಯುನೈಟೆಡ್ ಮಿಷನ್  ಹೈಸ್ಕೂಲ್, ಮಿತ್ರಾಲಯ ಬಾಲಕಿಯರ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಶಾಲೆಗಳಲ್ಲಿ ಮಕ್ಕಳನ್ನ ಸ್ವಾಗತಿಸಲು ಇಂದೇ ತಯಾರಿಯನ್ನು ನಡೆಸಿದವು. 


ಮಕ್ಕಳಿಗೆ ಸ್ವಾಗತ ಕೋರಲಿವೆ ತಳಿರು ತೋರಣ, ಬಣ್ಣದ ರಂಗೋಲಿ: 
ನಾಳೆ ವಿದ್ಯಾರ್ಥಿಗಳನ್ನು ಶಾಲೆಗೆ ಫುಲ್ ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡಿಕೊಳ್ಳಲು ಶಾಲಾ ಆಡಳಿತಾಧಿಕಾರಿಗಳು, ಸಿಬ್ಬಂದಿ ಬರದ ಸಿದ್ದತೆ ಮಾಡಿಕೊಂಡಿದ್ದಾರೆ. ಶಾಲೆಗೆ ತಳೀರು ತೋರಣ ಕಟ್ಟಿ ಸಿಂಗಾರಗೊಳಿಸಲಾಗಿದೆ. ಶಾಲೆಯ ಮುಂಭಾಗ ಕಲರ್ ಫುಲ್ ರಂಗೋಲಿ ಬಿಡಿಸುವ ಮೂಲಕ ಮಕ್ಕಳಿಗೆ ಸ್ವಾಗತ ಬಯಸುತ್ತಿವೆ. ಇನ್ನು ಮಕ್ಕಳಿಗೆ ಇಷ್ಟವಾಗುವ ಗಿಫ್ಟ್ , ಸ್ವೀಟ್ ಕೊಟ್ಟು ಶಾಲೆಯ ಒಳಗೆ ಮಕ್ಕಳನ್ನ ಬರಮಾಡಿಕೊಳ್ಳಲಾಗುತ್ತದೆ. 


ಶಾಲೆಗೆ ಬರುವ ಮಕ್ಕಳಿಗೆ ಕ್ಷೀರಭಾಗ್ಯ-ಬಿಸಿಯೂಟ: 
ಶಾಲೆಗಳಿಗೆ ಬರುವ ಮಕ್ಕಳಿಗೆ ಮೊದಲ ದಿನವೇ ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಬಿಸಿ ಊಟ ಸಿಗಲಿದೆ.  ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಸಲುವಾಗಿ ಮೊದಲಿಗೆ ಕಲಿಕಾ ಚೇತರಿಕೆ ವರ್ಷ ಕೂಡ ಪ್ರಾರಂಭಿಸಲಾಗ್ತಿದೆ. ಇಷ್ಟು ದಿನ ಕೋವಿಡ್‌ನಿಂದಾಗಿ ಕಲಿಕೆಯಿಂದ ಹಿಂದುಳಿದಿದ್ದ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ನೀಡಲು ಶಿಕ್ಷಕರು ಸಿದ್ಧರಾಗಿದ್ದಾರೆ.


ಇದನ್ನು ಓದಿ: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಹುಲ್ ಗಾಂಧಿ ಪಾದಯಾತ್ರೆ


ಒಟ್ಟಾರೆಯಾಗಿ ಕಳೆದ ಎರಡು ವರ್ಷದಿಂದ ದೂರವಾಗಿದ್ದ ಸೂಕ್ತ ಶಿಕ್ಷಣ ಈ ವರ್ಷದಿಂದಾದರೂ ಸಿಗಲಿ ಅನ್ನೋದು ಸರ್ಕಾರದ ಉದ್ದೇಶವಾಗಿದೆ. ಹೀಗಾಗಿ ನಾಳೆಯಿಂದ 15 ದಿನಗಳ ಕಾಲ ಕಲಿಕಾ ಚೇತರಿಕೆ ನಡೆಯಲಿದ್ದು, ಇದರಿಂದ ವಿದ್ಯಾರ್ಥಿಗಳನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾದ ರೀತಿಯಲ್ಲಿ ತರಬೇತಿ ನೀಡಲಾಗುತ್ತದೆ. ಬಳಿಕ ಪುಸ್ತಕದ ಪಾಠಕ್ಕೆ ಶಿಕ್ಷಕರು ಮುಂದಾಲಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.