ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ತಂದೆ ತಾಯಿ ಅದೆಷ್ಟೋ ತ್ಯಾಗಗಳನ್ನು ಮಾಡುತ್ತಾರೆ. ಇನ್ನೊಂದು ಮಾತಲ್ಲಿ ಹೇಳೋದಾದರೆ ಹೆತ್ತವರ ಪ್ರೀತಿ ಪ್ರೇಮಕ್ಕೆ ಯಾವ ಹೋಲಿಕೆಯೂ ಸಲ್ಲದು. ಇಂತಹ ಪ್ರೀತಿ ತ್ಯಾಗಕ್ಕೆ ಸಾಕ್ಷಿ ಎಂಬಂತೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ತಾಯಿಯೊಬ್ಬರು ತನ್ನ ಮಗಳನ್ನು ಬೆಳೆಸುವ ಸಲುವಾಗಿ ಬರೋಬ್ಬರಿ 30 ವರ್ಷಗಳಿಂದ ಪುರುಷನ ವೇಷ ಧರಿಸುತ್ತಿದ್ದಾರೆ.
ಇದನ್ನು ಓದಿ: Taj Mahal Plea: ಹೈಕೋರ್ಟ್ ಮೆಟ್ಟಿಲೇರಿದ ʼತಾಜ್‌ಮಹಲ್ ಇತಿಹಾಸʼ: ಏನಿದು ಪ್ರಕರಣ!
ಒಂದು ಬಾರಿ ಆಶ್ಚರ್ಯ ಎನಿಸಿದರೂ ಇದು ಸತ್ಯ ಸಂಗತಿ. 30 ವರ್ಷಗಳ ಹಿಂದೆ ತೂತುಕುಡಿ ಜಿಲ್ಲೆಯ ಕಾಟುನಾಯಕನಪಟ್ಟಿ ಗ್ರಾಮದ 20 ವರ್ಷದ ಪೇಚಿಯಮ್ಮಳ್ ಎಂಬವರು ತಾನು ಮದುವೆಯಾದ 15 ದಿನಕ್ಕೆ ಹೃದಯಾಘಾತದಿಂದ ಪತಿಯನ್ನು ಕಳೆದುಕೊಂಡರು. ಇಂತಹ ಆಘಾತದ ನಡುವೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಪೇಚಿಯಮ್ಮಳ್ ಆಕೆಯ ಜೀವನ ಚೆನ್ನಾಗಿ ನಡೆಯಬೇಕು ಎಂಬ ಉದ್ದೇಶದಿಂದ ಕೆಲಸ ಮಾಡಲು ಆರಂಭಿಸಿದಳು. ಆದರೆ ಆಕೆ ಕೆಲಸ ಮಾಡುವ ಸ್ಥಳದಲ್ಲಿ ಕಿರುಕುಳಗಳನ್ನು ಅನುಭವಿಸಿದಳು. ಈ ಸಂದರ್ಭದಲ್ಲಿ ಇಂತಹ ಎಲ್ಲಾ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲಬೇಕು ಎಂದು ಭಾವಿಸಿ, ಮಗಳ ಜೀವನ ಚೆನ್ನಾಗಿ ನಡೆಯಬೇಕು ಎಂಬ ಉದ್ದೇಶದಿಂದ ಬರೋಬ್ಬರಿ 30 ವರ್ಷ ಗಂಡಸಿನ ರೀತಿ ವೇಷ ಹಾಕಿ ಜೀವನ ಸಾಗಿಸಿದ್ದಾಳೆ.
ಕೂದಲನ್ನು ಬಾಬ್ ಕಟ್ ಮಾಡಿಸಿಕೊಂಡ ಪೇಚಿಯಮ್ಮಳ್, ಲುಂಗಿ ಮತ್ತು ಶರ್ಟ್ ಧರಿಸಿ ಗಂಡಸಿನಂತೆ ಕಾಣಲು ಪ್ರಾರಂಭಿಸಿದಳು. ಕಳೆದ ಮೂರು ದಶಕಗಳಿಂದ ಮುತ್ತು ಎಂಬ ಹೆಸರಿನಲ್ಲಿ ಚೆನ್ನೈ ಮತ್ತು ತೂತುಕುಡಿಯ ಹೋಟೆಲ್, ಟೀ ಸ್ಟಾಲ್‌ಗಳಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾಳೆ.
ಈ ಬಗ್ಗೆ ಮಾತನಾಡಿರುವ ಪೇಚಿಯಮ್ಮಳ್, "ನಾನು ಪೈಂಟರ್, ಟೀ ಮಾಸ್ಟರ್, ಪರೋಟಾ ಮಾಸ್ಟರ್ ಆಗಿ ಕೆಲಸ ಮಾಡಿದ್ದೇನೆ. ನನ್ನ ಮಗಳ ಭವಿಷ್ಯದ ಬಗ್ಗೆ ಚಿಂತಿಸಿ ಈ ಕೆಲಸ ಮಾಡುತ್ತಿದ್ದೇನೆ. ನನ್ನ ಎಲ್ಲಾ ದಾಖಲೆಗಳಲ್ಲಿ ಮುತ್ತು ಎಂದೇ ಹೆಸರು ಇದೆ. ಮಗಳಿಗಾಗಿ ಪ್ರತೀ ಪೈಸೆಯನ್ನು ಕೂಡಿಟ್ಟಿದ್ದೇನೆ. ಆರಂಭದಲ್ಲಿ ಕಷ್ಟವಾಗಿತ್ತು. ಬಸ್‌ಗಳಲ್ಲಿ ಪುರುಷರ ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದೆ. ಅಷ್ಟೇ ಅಲ್ಲದೆ, ಗಂಡಸರು ಬಳಕೆ ಮಾಡುವ ಶೌಚಾಲಯವನ್ನೇ ನಾನು ಬಳಸಿದ್ದೇನೆ. ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಸರ್ಕಾರ ಘೋಷಣೆ ಮಾಡಿದರೂ ನಾನು ಆ ಯೋಜನೆಯನ್ನು ಬಳಕೆ ಮಾಡಿಲ್ಲ" ಎಂದು ಹೇಳಿದರು.
ಇದನ್ನು ಓದಿ: CNG Price Hike: ಸಿಎನ್‌ಜಿ ಬೆಲೆ ಮತ್ತೆ ಹೆಚ್ಚಳ, ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ!
"ನನಗೆ ಈಗ 57 ವರ್ಷವಾಗಿದೆ. ನನ್ನ ಮಗಳ ಮದುವೆಯಾಗಿದೆ. ನನ್ನ ಎಲ್ಲಾ ಆಸೆಗಳನ್ನು ನಾನು ಪೂರೈಸಿದ್ದೇನೆ" ಎಂದು ಭಾವುಕರಾಗುತ್ತಾ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.