ಬೇಸಿಗೆ ರಜೆಯನ್ನು ಬಲಿ ಪಡೆಯುವುದೇ ಕೊರೊನಾ?
ಶಾಲಾ-ಕಾಲೇಜುಗಳ ಆರಂಭ ಮತ್ತು SSLC ಪರೀಕ್ಷೆ ನಡೆಸುವುದು ಆಯಾ ರಾಜ್ಯಗಳಿಗೆ ಬಿಟ್ಟಿದ್ದು ಎಂದು ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಂಡಿತ್ತು. ಜಿಜ್ಞಾಸೆಗೆ ಸಿಲುಕಿದ್ದ ರಾಜ್ಯ ಸರ್ಕಾರ ಪೋಷಕರ ತೀವ್ರ ವಿರೋಧದ ನಡುವೆಯೂ SSLC ಪರೀಕ್ಷೆ ನಡೆಸಿತ್ತು. ಈಗ ಮತ್ತೆ ಶಾಲಾ-ಕಾಲೇಜುಗಳ ಆರಂಭಿಸುವ ಬಗ್ಗೆ ಅದರಲ್ಲೂ SSLC ತರಗತಿಗಳನ್ನು ಆರಂಭಿಸುವ ಬಗ್ಗೆ `ಏನು ಮಾಡಬೇಕೆಂದು` ತಿಳಿಯದೆ ಕಂಗಾಲಾಗಿದೆ.
ಬೆಂಗಳೂರು: COVID-19 ವೈರಸ್ ಕಾರಣಕ್ಕೆ ಎಲ್ಲದರಲ್ಲೂ ವ್ಯತ್ಯಯಗಳಾಗುತ್ತಿದ್ದು ಶಾಲಾ ಕಾಲೇಜುಗಳಿಗೆ ಈ ಬಾರಿಯ ಬೇಸಿಗೆ ರಜೆ ಸಿಗುವುದು ಕೂಡ ಅನುಮಾನ ಮೂಡಿಸಿದೆ.
ಶಾಲಾ-ಕಾಲೇಜುಗಳ ಆರಂಭ ಮತ್ತು SSLC ಪರೀಕ್ಷೆ ನಡೆಸುವುದು ಆಯಾ ರಾಜ್ಯಗಳಿಗೆ ಬಿಟ್ಟಿದ್ದು ಎಂದು ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಂಡಿತ್ತು. ಜಿಜ್ಞಾಸೆಗೆ ಸಿಲುಕಿದ್ದ ರಾಜ್ಯ ಸರ್ಕಾರ ಪೋಷಕರ ತೀವ್ರ ವಿರೋಧದ ನಡುವೆಯೂ SSLC ಪರೀಕ್ಷೆ ನಡೆಸಿತ್ತು. ಈಗ ಮತ್ತೆ ಶಾಲಾ-ಕಾಲೇಜುಗಳ ಆರಂಭಿಸುವ ಬಗ್ಗೆ ಅದರಲ್ಲೂ SSLC ತರಗತಿಗಳನ್ನು ಆರಂಭಿಸುವ ಬಗ್ಗೆ 'ಏನು ಮಾಡಬೇಕೆಂದು' ತಿಳಿಯದೆ ಕಂಗಾಲಾಗಿದೆ.
ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಈ ಬಾರಿಯ ಬೇಸಿಗೆ ರಜಕ್ಕೆ ಬ್ರೇಕ್ ಹಾಕಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಜೂನ್ ನಲ್ಲಿ ಆರಂಭವಾಗಬೇಕಿದ್ದ ತರಗತಿಗಳು ಇನ್ನೂ ಆರಂಭ ಆಗಿಲ್ಲದಿರುವುದರಿಂದ ಬೇಸಿಗೆ ರಜೆ ಕಡಿತಗೊಳಿಸಿ ಆಗ 'ಪೋರ್ಷನ್ ಕವರ್ ಮಾಡುವ' ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಕರೋನಾವೈರಸ್ ನಡುವೆಯೂ ಈ ರಾಜ್ಯದಲ್ಲಿ ಜನವರಿ 1ರಿಂದ ತೆರೆಯಲಿವೆ ಶಾಲೆಗಳು
ಕಳೆದ 10 ತಿಂಗಳಿನಿಂದ ಶಾಲೆ ತೆರೆಯದ ಕಾರಣ 'ವಿದ್ಯಾಗಮ' ಸ್ಥಗಿತಗೊಂಡಿದೆ. ಇದರಿಂದ 'ಪರಿಷ್ಕೃತ ವಿದ್ಯಾಗಮ' ಆರಂಭವಾಗಬೇಕಿದೆ. ಸದ್ಯ ಆನ್ ಲೈನ್ ಕ್ಲಾಸ್ (Online Classes) ನಡೆಯುತ್ತಿದ್ದರೂ ಅದು ಪರಿಣಾಮಕಾರಿಯಾಗಿಲ್ಲ, ಮುಖ್ಯವಾಗಿ ಆನ್ ಲೈನ್ ಕ್ಲಾಸ್ ಗಳ ಮೂಲಕ ಪೋರ್ಷನ್ ಮುಗಿದಿಲ್ಲ. ಆದುದರಿಂದ ಏಪ್ರಿಲ್, ಮೇ ತಿಂಗಳಿನಲ್ಲಿ ರಜೆ ಕಡಿತ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ.
ತರಗತಿ ನಡೆಸಲು ಬೇಸಿಗೆ ರಜೆ (Summer Vacation) ಕಡಿತ ಅನಿವಾರ್ಯದ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಚರ್ಚೆಯಾಗಿದ್ದು ಶಿಕ್ಷಕರ ಸಂಘ 15 ದಿನವಾದರೂ ರಜೆ ನೀಡುವಂತೆ ಕೇಳಿಕೊಂಡಿದೆ ಎಂದು ತಿಳಿದುಬಂದಿದೆ.
ಶಿಕ್ಷಣ ಸಚಿವರಿಂದ ಶಾಲೆ ಪುನಾರಂಭದ ಬಗ್ಗೆ ಮಹತ್ವದ ಮಾಹಿತಿ..!
ಈ ನಡುವೆ ಶಾಲೆ-ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಶೀಘ್ರದಲ್ಲೇ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಕರೆದು ಚರ್ಚೆ ಮಾಡಲಾಗುವುದು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಇದಲ್ಲದೆ SSLC ಮತ್ತು PUC ತರಗತಿಗಳನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಸಚಿವ ಸುರೇಶ್ ಕುಮಾರ್ ಒತ್ತಿ ಹೇಳಿದ್ದಾರೆ.