ಬೆಂಗಳೂರು : ರಾಜ್ಯದ ಕಂದಾಯ ಇಲಾಖೆಗಳಲ್ಲಿ ವಿವಿಧ ಕೆಲಸಕ್ಕಾಗಿ ಓಡಾಡುವ ಜನಸಾಮಾನ್ಯರಿಗೆ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ. ಇದರ ಬಗ್ಗೆ ಸರ್ಕಾರದ ಕ್ರಮ ಏನು ಎಂದು ಕಾಂಗ್ರೆಸ್ ಪರಿಷತ್ ಸದಸ್ಯ ಸಲೀಂ ಅಹ್ಮದ್ ವಿಧಾನ ಪರಿಷತ್ ನಲ್ಲಿ ಪ್ರಶ್ನಿಸಿದರು. ಈ ಬಗ್ಗೆ ದಾಖಲೆ ಕೊಡಲು ಸಮಯಾವಕಾಶ ಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು. 


COMMERCIAL BREAK
SCROLL TO CONTINUE READING

ಇದಕ್ಕೆ ಕೆಂಡಾಮಂಡಲವಾದ ಸಲೀಂ ಅಹ್ಮದ್ ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು. ಭೂ- ಮಂಜೂರಾತಿ, ಭೂ-ಪರಿವರ್ತನೆ, ಆದಾಯ, ಜಾತಿ ಪ್ರಮಾಣ ಪತ್ರ, ಜನನ-ಮರಣ ನೋಂದಣಿಗೆ ಲಂಚ ಕೊಡದೆ ಸಮಯಕ್ಕೆ ಸರಿಯಾಗಿ ಕೆಲಸಗಳು ಆಗ್ತಿಲ್ಲ. ಇದು ಸರ್ಕಾರದ ಗಮನಕ್ಕೆ ಬಂದಿದೆಯಾ ಅಂತ ಕೇಳಲಾಗಿದೆ. ಕಳೆದ 3 ವರ್ಷದಲ್ಲಿ ಮಧ್ಯವರ್ತಿಗಳ ಜೊತೆ ಶಾಮೀಲಾಗಿ ಅಧಿಕಾರಿಗಳು ಭ್ರಷ್ಟಾಚಾರ ಮಾಡಿರುವ ಎಷ್ಟು ಪ್ರಕರಣ ಇದೆ. ಇದರ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಸಲೀಂ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರ ಸಿಗದಿದ್ದಾಗ ಇದೊಂದು ಬೇಜವಾಬ್ದಾರಿ ಸರ್ಕಾರ ಅಂತ ಆಕ್ರೋಶಗೊಂಡು ಸದನದ ಬಾವಿಗಿಳಿದರು.


ಇದನ್ನೂ ಓದಿ:  "ಕುರಾನ್ ಧಾರ್ಮಿಕ ಗ್ರಂಥ, ಭಗವದ್ಗೀತೆ ಅಲ್ಲ" : ಸಚಿವ ಬಿ.ಸಿ.ನಾಗೇಶ್


ಸಲೀಂ ನಡೆಗೆ ಸಚಿವ ಅಶೋಕ್ ಹಾಗೂ ಸುಧಾಕರ್ ಕಿಡಿಕಾರಿ, ನಮ್ದಲ್ಲ ಬೇಜವಾಬ್ದಾರಿ, ನಿಮ್ಮದು ಬೇಜವಾಬ್ದಾರಿ, ನೀವಿದ್ದಾಗ ಏನು ಮಾಡ್ತಿದ್ದೀರಿ ಎಂದು ಅಶೋಕ್ ಕಿಡಿಕಾರಿದರು. ಸರ್ಕಾರದ ಪಲಾಯನವಾದ ಇದು ಬೇಜವಾಬ್ದಾರಿ ಪರಮಾವಧಿ ಎಂದು ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಆಕ್ರೋಶ ಹೊರಹಾಕಿದರು. ಪರಿಷತ್ ಬಾವಿಗಿಳಿದು ಕಾಂಗ್ರೆಸ್ ಸದಸ್ಯರ ಧರಣಿ ಆರಂಭಿಸಿದರಿಂದ 5 ನಿಮಿಷ ಸದನ ಮುಂದೂಡಲಾಯ್ತು. 


ಸಚಿವ ಆರ್ ಅಶೋಕ್ ಸ್ಪಷ್ಟನೆ ನೀಡಿ, ಭೂ ಮಂಜುರಾತಿ ಬಗ್ಗೆ ಕೇಳಿರುವ ಪ್ರಶ್ನೆಯಲ್ಲಿ ಸ್ಪಷ್ಟತೆ ಇಲ್ಲ, ಕಾಲಮಿತಿ ಇಲ್ಲ. ಭೂಪರಿವರ್ತನೆ, ಜನನ ಮರಣ ಎಲ್ಲ ಇಡೀ ರಾಜ್ಯದ ದಾಖಲೆ ಕೇಳಿದ್ದಾರೆ ಇದನ್ನು ಕೊಡಲು ಸಾಧ್ಯಾನಾ? ಅಶೋಕ್ ವ್ಯಂಗ್ಯವಾಡಿದರು.  ಪರಿಷತ್ ಪುನಃ ಆರಂಭವಾದ ಬಳಿಕ ಕಾಂಗ್ರೆಸ್ ಸದಸ್ಯ ಪಿ ಆರ್ ರಮೇಶ್ ಮಾತನಾಡಿ, ಕಂದಾಯ ಇಲಾಖೆಯಲ್ಲಿ 3 ವರ್ಷದಿಂದ ದಾಖಲಾಗಿರುವ ಭ್ರಷ್ಟಾಚಾರದ ಪ್ರಕರಣ ಎಷ್ಟು? ಮಧ್ಯವರ್ತಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸರ್ಕಾರ ತಗೊಂಡ ಕ್ರಮ ಏನು ಅಂತ ಕೇಳಲಾಗಿದೆ.


ಸಚಿವ ಆರ್ ಅಶೋಕ್ ಅವರು ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಲಂಚದ ಹಣ ನೀಡದೆ ಯಾವುದೇ ಕೆಲಸ ಆಗುವುದಿಲ್ಲ. ಯಾವ ದಾಖಲೆಯೂ ಕೇಳಿಲ್ಲ. ಆದರೆ ಅಶೋಕ್ ಅವರ ಉತ್ತರ ಲಂಚ ಸಿಕ್ಕಾಪಟ್ಟೆ ಇದೆ, ಅದು ಕೊಡೋದು ಕಷ್ಟದ ಕೆಲಸ ಅನ್ನುವ ಹಾಗಿತ್ತು ಎಂದು ತಿರುಗೇಟು ನೀಡಿದರು‌. ಪರಿಷತ್ ಸದನ ಇನ್ನೂ ಮೂರು ದಿನ ನಡೆಯಲಿದ್ದು, ಅಷ್ಟರಲ್ಲಿ ಉತ್ತರ ಕೊಡಿಸುವುದಾಗಿ ಹೇಳಿ ಸಭಾಪತಿ ಸದನದ ಗದ್ದಲ ತಣ್ಣಗೆ ಮಾಡಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.