"ಕುರಾನ್ ಧಾರ್ಮಿಕ ಗ್ರಂಥ, ಭಗವದ್ಗೀತೆ ಅಲ್ಲ" : ಸಚಿವ ಬಿ.ಸಿ.ನಾಗೇಶ್

BC Nagesh : ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರವು ಶಾಲೆಗಳಲ್ಲಿ ಭಗವದ್ಗೀತೆಯನ್ನು ನೈತಿಕ ಉಪನ್ಯಾಸವಾಗಿ ಪರಿಚಯಿಸಲು ಯೋಜಿಸುತ್ತಿದೆ ಎಂದು ಬಿ.ಸಿ.ನಾಗೇಶ್ ಹೇಳಿದರು.

Written by - Chetana Devarmani | Last Updated : Sep 21, 2022, 01:34 PM IST
  • ಕುರಾನ್ ಧಾರ್ಮಿಕ ಗ್ರಂಥ, ಭಗವದ್ಗೀತೆ ಅಲ್ಲ
  • ಯಾವುದೇ ಧಾರ್ಮಿಕ ಆಚರಣೆಗಳನ್ನು ಉತ್ತೇಜಿಸುವುದಿಲ್ಲ
  • ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ
"ಕುರಾನ್ ಧಾರ್ಮಿಕ ಗ್ರಂಥ, ಭಗವದ್ಗೀತೆ ಅಲ್ಲ" : ಸಚಿವ ಬಿ.ಸಿ.ನಾಗೇಶ್  title=
ಬಿ.ಸಿ.ನಾಗೇಶ್

ಬೆಂಗಳೂರು : ಮಂಗಳವಾರ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಭಗವದ್ಗೀತೆಯನ್ನು ಸರ್ಕಾರಿ ಶಾಲೆಗಳಲ್ಲಿ ನೈತಿಕ ಶಿಕ್ಷಣ ತರಗತಿಗಳಲ್ಲಿ ಸೇರಿಸುವ ಸರ್ಕಾರದ ಯೋಜನೆಯನ್ನು ಎತ್ತಿಹಿಡಿದರು. ಭಗವದ್ಗೀತೆ ಧಾರ್ಮಿಕ ಪುಸ್ತಕವಲ್ಲ ಮತ್ತು ಯಾವುದೇ ಧಾರ್ಮಿಕ ಆಚರಣೆಗಳನ್ನು ಉತ್ತೇಜಿಸುವುದಿಲ್ಲ ಎಂದು ಹೇಳಿದರು. ಭಗವದ್ಗೀತೆಯು ವಿದ್ಯಾರ್ಥಿಗಳಿಗೆ ನೈತಿಕತೆಯ ಪಾಠವನ್ನು ಪ್ರೇರೇಪಿಸುತ್ತದೆ ಮತ್ತು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಬಹಳಷ್ಟು ಜನರಿಗೆ ಸಹಾಯ ಮಾಡಿದೆ ಎಂದು ತಿಳಿಸಿದರು.

ಇದನ್ನೂ ಓದಿ : Smart Watch Tips: ಸ್ಮಾರ್ಟ್ ವಾಚ್ ಖರೀದಿಸುವಾಗ ಈ ಸಂಗತಿಗಳನ್ನು ನೆನಪಿನಲ್ಲಿಡಿ

ಸಚಿವ ಬಿ.ಸಿ.ನಾಗೇಶ್, ಕುರಾನ್ ಧಾರ್ಮಿಕ ಪುಸ್ತಕವಾಗಿದೆ. ಆದರೆ ಭಗವದ್ಗೀತೆ ಅಲ್ಲ. ಇದು ದೇವರ ಪೂಜೆ ಅಥವಾ ಯಾವುದೇ ಧಾರ್ಮಿಕ ಆಚರಣೆಗಳ ಬಗ್ಗೆ ಮಾತನಾಡುವುದಿಲ್ಲ. ಇದು ನೈತಿಕ ವಿಷಯವಾಗಿದೆ ಮತ್ತು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತದೆ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿಯೂ ಜನರು ಸ್ಫೂರ್ತಿ ಸಿಕ್ಕಿತು ಎಂದರು. ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರವು ಭಗವದ್ಗೀತೆಯನ್ನು ಶಾಲೆಗಳಲ್ಲಿ ನೈತಿಕ ಉಪನ್ಯಾಸವಾಗಿ ಪರಿಚಯಿಸಲು ಯೋಜಿಸುತ್ತಿದೆ ಎಂದು ಬಿ.ಸಿ.ನಾಗೇಶ್ ಸೋಮವಾರ ಹೇಳಿದರು. ಈಗಾಗಲೇ ಸಮಿತಿಯೊಂದು ಈ ಕುರಿತು ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷದ ಡಿಸೆಂಬರ್‌ನಿಂದ ಜಾರಿಗೆ ತರಲು ಯೋಜನೆ ರೂಪಿಸಿದ್ದೇವೆ. ಆದರೆ, ಇದು ಪಠ್ಯಕ್ರಮದ ಭಾಗವಲ್ಲ ಮತ್ತು ಬೋಧನೆಗಳ ಆಧಾರದ ಮೇಲೆ ಯಾವುದೇ ಪರೀಕ್ಷೆ ಇರುವುದಿಲ್ಲ ಎಂದು ಅವರು ಹೇಳಿದರು.

ರಾಜ್ಯದ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಭಾಗವಾಗಿ ಭಗವದ್ಗೀತೆಯನ್ನು ಸೇರಿಸಲು ರಾಜ್ಯ ಸರ್ಕಾರವು ಪರಿಗಣಿಸುತ್ತಿದೆ ಎಂದು 2022 ರ ಮಾರ್ಚ್‌ನಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದರು. ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ, ಮಾಜಿ ಸಿಎಂ ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಸರ್ಕಾರ ಗಮನ ಹರಿಸಬೇಕು ಎಂದರು.

ಇದನ್ನೂ ಓದಿ : Viral Video : 15 ಅಡಿ ಉದ್ದದ ಹಾವಿನ ಜೊತೆ ಸರಸ.! ಕೊನೆಗೆ ಆಗಿದ್ದೇನು ನೋಡಿ

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ, ಕುರಾನ್ ಅಥವಾ ಬೈಬಲ್ ಕಲಿಸಬಹುದು ಆದರೆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರದ ಆದ್ಯತೆ ಇರಬೇಕು. ಅದು ಪ್ರಾಥಮಿಕ ಧ್ಯೇಯವಾಗಿರಬೇಕು. ಪವಿತ್ರ ಗ್ರಂಥವನ್ನು ನೈತಿಕ ಶಿಕ್ಷಣ ಎಂದು ಕಲಿಸಲು ನಮ್ಮ ಪಕ್ಷದ ಯಾವುದೇ ವಿರೋಧವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News