ಜಾತಿ ಗಣತಿ ವರದಿ ನೋಡಿ ಅಂತಿಮ ನಿರ್ಧಾರ: ಸಚಿವ ಎಂ ಬಿ ಪಾಟೀಲ್
Minister MB Patil: ಜಾತಿ ಗಣತಿ ವರದಿ ಬಗ್ಗೆ ವಿಶೇಷವಾಗಿ ವೀರಶೈವ ಲಿಂಗಾಯತ ಸಮುದಾಯದವರಿಗೆ ಆತಂಕ ಇರುವುದು ನಿಜ. ಏಕೆಂದರೆ ಇಲ್ಲಿ ಹೆಚ್ಚಿನವರು ಉಪಪಂಗಡಗಳ ಹೆಸರು ಬರೆಸಿದ್ದಾರೆ. ಇದರ ಬದಲು ಎಲ್ಲ ಉಪಪಂಗಡಗಳೂ `ವೀರಶೈವ ಲಿಂಗಾಯತ` ಎಂದಾಗಬೇಕು ಎಂದು ನಾವು ದನಿ ಎತ್ತಿದ್ದು ನಿಜ ಎಂದು ಅವರು ವಿವರಿಸಿದರು.
ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗವು ಸರ್ಕಾರಕ್ಕೆ ಜಾತಿ ಗಣತಿ ವರದಿಯನ್ನು ಸಲ್ಲಿಸಿದೆ. ಅದರಲ್ಲಿ ಏನಿದೆಯೋ ಗೊತ್ತಿಲ್ಲ. ಅದನ್ನು ಗಮನಿಸಿದ ಮೇಲೆ ವರದಿಯನ್ನು ಒಪ್ಪಿಕೊಳ್ಳಬೇಕೋ, ಬಿಡಬೇಕೋ ಎನ್ನುವುದನ್ನು ಸರ್ಕಾರವು ತೀರ್ಮಾನಿಸಲಿದೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳು ಗುರುವಾರ ಇಲ್ಲಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಇದನ್ನೂ ಓದಿ: Coconut Milk: ಜಸ್ಟ್ ಒಂದು ಕಪ್ ತೆಂಗಿನಕಾಯಿ ಹಾಲು… ಅನೇಕ ರೋಗಗಳಿಗೆ ಇದೊಂದೇ ರಾಮಬಾಣ
ಜಾತಿ ಗಣತಿ ವರದಿ ಬಗ್ಗೆ ವಿಶೇಷವಾಗಿ ವೀರಶೈವ ಲಿಂಗಾಯತ ಸಮುದಾಯದವರಿಗೆ ಆತಂಕ ಇರುವುದು ನಿಜ. ಏಕೆಂದರೆ ಇಲ್ಲಿ ಹೆಚ್ಚಿನವರು ಉಪಪಂಗಡಗಳ ಹೆಸರು ಬರೆಸಿದ್ದಾರೆ. ಇದರ ಬದಲು ಎಲ್ಲ ಉಪಪಂಗಡಗಳೂ 'ವೀರಶೈವ ಲಿಂಗಾಯತ' ಎಂದಾಗಬೇಕು ಎಂದು ನಾವು ದನಿ ಎತ್ತಿದ್ದು ನಿಜ ಎಂದು ಅವರು ವಿವರಿಸಿದರು.
ಇದನ್ನೂ ಓದಿ: ವಾಟ್ಸ್ ಆಪ್ ನಲ್ಲಿ ಇನ್ಮುಂದೆ ದಿನಾಂಕ ಆಧರಿಸಿ ನೀವು ಈ ಕೆಲಸ ಮಾಡಬಹುದು, ಹೊಸ ವೈಶಿಷ್ಟ್ಯ ಬಿಡುಗಡೆ!
ಇದೇ ರೀತಿಯ ಗೊಂದಲ, ಆತಂಕಗಳು ಒಕ್ಕಲಿಗರು ಸೇರಿದಂತೆ ಹಲವು ಸಮುದಾಯಗಳಿಗೆ ಇದೆ. ಇವೆಲ್ಲವನ್ನೂ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಲಿದೆ. ಅಂತಿಮ ತೀರ್ಮಾನ ಸರಕಾರದ ವಿವೇಚನೆಗೆ ಬಿಟ್ಟಿದ್ದು ಎಂದು ಅವರು ಪ್ರತಿಪಾದಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್