ಬೆಂಗಳೂರು:  ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎನ್.ಆರ್.ಮಠದ್( ನರಹರಿ ರಾಮಚಂದ್ರ ಮಠದ್)  ಅವರು ಇಂದು‌ ಮಧ್ಯಾಹ್ನ 4 ರ ಸುಮಾರಿಗೆ ರಾಜಾಜಿನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.ಅವರಿಗೆ 101 ವರ್ಷ ವಯಸ್ಸಾಗಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಾಂಗ್ರೆಸ್ ತನ್ನ ಶಾಸಕರನ್ನು ಭದ್ರಮಾಡಿಕೊಳ್ಳಲಿ : ಸಿಎಂ ಬೊಮ್ಮಾಯಿ


ಅಖಿಲ ಭಾರತ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷರಾಗಿದ್ದ ಎನ್.ಆರ್.ಮಠದ್ ಅವರು ಡಿಸೆಂಬರ್ 13 1921 ರಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ಜನಿಸಿದರು.ಗಾಂಧೀಜಿ ಅವರಿಂದ ಸ್ಫೂರ್ತಿಗೊಂಡು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಎನ್.ಆರ್.ಮಠದ್ ಸೇರಿ ಅವರ ಕುಟುಂಬದ ಏಳು ಮಂದಿಯನ್ನು ಬಂಧಿಸಲಾಯಿತು.


ಇದನ್ನೂ ಓದಿ: "ಪಶುಸಂಗೋಪನಾ ಸಚಿವರಿಗೆ ಮೇಕೆ, ದನಗಳು ಯಾವುದು ಎಂದು ಗೊತ್ತಿಲ್ಲ"


1972 ರಲ್ಲಿಅವರ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾ ಗಾಂಧಿ ಅವರು ತಾಮ್ರ ಪತ್ರವನ್ನು ನೀಡಿ ಗೌರವಿಸಿದ್ದರು.2019ರಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಎನ್.ಆರ್.ಮಠದ್ ಅವರನ್ನು ದೆಹಲಿ ಸನ್ಮಾನಿಸಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.