ಬೆಂಗಳೂರು : ಉಕ್ರೇನ್ ವಿರುದ್ದ ರಷ್ಯಾ ಯುದ್ಧ (Russia Ukraine war)ಘೋಷಿಸಿದ ದಿನದಿಂದ ಆತಂಕ ಮುಂದುವರಿದಿದೆ.  ಉಕ್ರೇನ್ ನಲ್ಲಿ  ಅದೆಷ್ಟೋ ಭಾರತೀಯರೂ ಸಿಲುಕಿ ಹಾಕಿಕೊಂಡಿದ್ದಾರೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಗೆ ತೆರಳಿರುವ ವಿದ್ಯಾರ್ಥಿಗಳು , ಅವರ ಪೋಷಕರು ಆತಂಕದಲ್ಲಿದ್ದಾರೆ. 


COMMERCIAL BREAK
SCROLL TO CONTINUE READING

ಉಕ್ರೇನ್ ನಲ್ಲಿ ಸಿಲುಕಿ ಹಾಕಿರುವ ವಿದ್ಯಾರ್ಥಿಗಳನ್ನು (Karntaka students in Ukraine) ವಾಪಸ್ ತವರಿಗೆ ಕರೆ ತರುವಲ್ಲಿ ಸರಕಾರ ಕೂಡಾ ಬಹಳ ಶ್ರಮ ವಹಿಸುತ್ತಿದೆ. ಇದೀಗ  ಉಕ್ರೇನ್ ನಲ್ಲಿ ಸಿಲುಕಿದ್ದ ರಾಜ್ಯದ ವಿದ್ಯಾರ್ಥಿಗಳು ಬೆಂಗಳೂರಿಗೆ ವಾಪಸಸಾಗಿದ್ದಾರೆ (Bengaluru Airport) .  ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಗೆ  ತೆರಳಿದ್ದ ರಾಜ್ಯದ ಏಳು ವಿದ್ಯಾರ್ಥಿಗಳು ಇಂದು ಬೆಂಗಳೂರು ತಲುಪಿದ್ದಾರೆ. ಬೆಂಗಳೂರಿಗೆ ಬಂದಿಳಿದ ವಿದ್ಯಾರ್ಥಿಗಳನ್ನು ಸುದರ್ಶನ್, ಇಮಾನ್ ರಾಜ್, ಆಲಿ ಅಬ್ಬಾಸ್ ರಾಜ್, ಆದೀಪ್, ಧನುಜಾ, ಅರ್ಪಿತಾ, ಮತ್ತು ಮೇದಾ ಬೆಂಗಳೂರಿಗೆ ಬಂದಿಳಿದ ವಿದ್ಯಾರ್ಥಿಗಳು. 


ಇದನ್ನೂ ಓದಿ : ಮೇಕೆದಾಟು ಹೋರಾಟದಲ್ಲಿ ರಾಹುಲ್ ಗಾಂಧಿ ಸಾಥ್ ನೀಡುತ್ತಿಲ್ಲವೇಕೆ?: ಬಿಜೆಪಿ


ನಾವಿದ್ದ ಸ್ಥಳದಲ್ಲಿ ಸುರಕ್ಷಿತವಾಗಿದ್ದೆವು.  ಊಟ ನೀರಿನ ಸಮಸ್ಯೆ ಏನು ಆಗಿರಲಿಲ್ಲ. ಎಂಬಸ್ಸಿ ಅಧಿಕಾರಿಗಳು ಸಂಪರ್ಕ ಮಾಡಿ ಸಹಾಯ ಮಾಡಿದ್ದರು ಎಂದು ಬೆಂಗಳೂರಿಗೆ (Bengaluru) ವಾಪಾಸಾದ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಏರ್ಪೋಟ್ ಗೆ ತೆರಳಬೇಕಾದರೆ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು.  ಹೀಗಾಗಿ ಸ್ವಲ್ಪ ತಡವಾಯಿತು ಎಂದು ಹೇಳಿದ್ದಾರೆ. ಅಲ್ಲದೆ ತವರಿಗೆ ಇಷ್ಟು ಬೇಗ ಬರುತ್ತೇವೆ ಎಂದು ನಿರೀಕ್ಷಿರಲಿಲ್ಲ, ಆದರೆ ಈಗ ವಾಪಾಸಾಗಿರುವುದು ಸಂತೋಷವಾಗುತ್ತಿದೆ ಎಂದು  ಹೇಳಿದ್ದಾರೆ. 


ಬೆಳಿಗ್ಗೆ 10:45 ರ ವಿಮಾನದಲ್ಲಿ  ಈ ಏಳು ವಿದ್ಯಾರ್ಥಿಗಳು ಕೆಂಪೇಗೌಡ ವಿಮಾನ ನಿಲ್ದಾಣ ತಲುಪಿದ್ದಾರೆ. ಇವರು ಉಕ್ರೇನ್ ನಿಂದ (Ukraine)ನಿನ್ನೆ ದೆಹಲಿಗೆ ‌ಬಂದಿಳಿದಿದ್ದರು.  ಇಂದು ದೆಹಲಿಯಿಂದ ಬೆಂಗಳೂರು ತಲುಪಿದ್ದಾರೆ.  ನಿನ್ನೆ ದೆಹಲಿಗೆ ಆಗಮಿಸಿದ್ದರೂ, ಈ ವಿದ್ಯಾರ್ಥಿಗಳು ರಾತ್ರಿ ಕರ್ನಾಟಕ ಭವನದಲ್ಲಿ (Karnataka bhavana) ಉಳಿದುಕೊಂಡಿದ್ದರು. ಇದೀಗ ಬೆಂಗಳೂರಿಗೆ ಆಗಮಿಸುವ ಮೂಲಕ ಈ ವಿದ್ಯಾರ್ಥಿಗಳು ತಮ್ಮ ಪೋಷಕರ ಮಡಿಲು ಸೇರಿದ್ದಾರೆ. 


ಇದನ್ನೂ ಓದಿ : ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಗ್ರಹವಾಗುವ ಶುಲ್ಕವೆಲ್ಲ ಆಯಾ ಸಂಸ್ಥೆಗಳಿಗೇ ವರ್ಗಾವಣೆ: ಸಚಿವ ಅಶ್ವತ್ಥನಾರಾಯಣ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.