Shakti Yojana Bad Effect: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಮಹಿಳೆಯರಿಗಾಗಿ ಉಚಿತ ಪ್ರಯಾಣ "ಶಕ್ತಿ ಯೋಜನೆ" ಪರಿಣಾಮ ಆಟೋ ಚಾಲಕರು ಅಕ್ಷರಶಃ ಬೀದಿಗೆ ಬೀದಿದ್ದಾರೆ.  ಶಕ್ತಿ ಯೋಜನೆಯ ಎಫೆಕ್ಟ್ ನಿಂದ ಹುಬ್ಬಳ್ಳಿಯಲ್ಲಿ ಆಟೋ ಮಾರಾಟಕ್ಕಿದೆ ಎಂಬ ಫಲಕಗಳು ರಾರಾಜಿಸುತ್ತಿವೆ. ಈ ಕುರಿತು ಒಂದು Exclusive ಸ್ಟೋರಿ ಇಲ್ಲಿದೆ. 


COMMERCIAL BREAK
SCROLL TO CONTINUE READING

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊದಲೇ ಯೋಜನೆ "ಶಕ್ತಿ ಯೋಜನೆ" ಜಾರಿ ಆಗಿದ್ದು ಸಾರಿಗೆ ಬಸ್ ನಲ್ಲಿ  ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡುವ ಸೌಲಭ್ಯ ಲಭ್ಯವಾಗುತ್ತಿದೆ. ಸರ್ಕಾರದ ಈ ಯೋಜನೆಗೆ ರಾಜ್ಯದ ಮಹಿಳಾ ಮಣಿಯರಿಂದ ಉತ್ತಮ ರೆಸ್ಪಾನ್ಸ್  ಕೂಡ ಲಭ್ಯವಾಗುತ್ತಿದೆ. ಆದರೆ, ಇದು ಮಹಿಳೆಯರಿಗೆ ಅನುಕೂಲವಾಯಿತಾದರೂ ಇನ್ನುಳಿದವರ ಪಾಡೇನು ಅಂತಾ ಸರ್ಕಾರ ಚಿಂತನೆ ಮಾಡಲೇ ಇಲ್ಲ. ಈಗ  ಅಟೋ ಚಾಲಕರು ಸಂಕಷ್ಟ ಸಿಲುಕಿದ್ದಾರೆ. 


ಶಕ್ತಿ ಯೋಜನೆ ಜಾರಿಯಿಂದ ಆಟೋ ಚಾಲಕರ ಮೇಲೆ ನೇರ ಪರಿಣಾಮ: 
ಶಕ್ತಿ ಯೋಜನೆ ಜಾರಿಯಿಂದ ಆಟೋ ಚಾಲಕರ ಮೇಲೆ ನೇರ ಪರಿಣಾಮ ಬೀರಿದ್ದು, ಶಕ್ತಿ ಯೋಜನೆ ಜಾರಿ ಬಳಿಕ ನಿರೀಕ್ಷಿತ ವಹಿವಾಟು ನಡೆಯದೆ ಕಂಗಾಲಾದ ಆಟೋ ಚಾಲಕರು, ಅನಿವಾರ್ಯವಾಗಿ ಆಟೋ ಮಾರಾಟಕ್ಕೆ ಮುಂದಾಗಿದ್ದಾರೆ. ಯೋಜನೆ ಜಾರಿಯಾದ ಬಳಿಕ ಆಟೋ ಡ್ರೈವರ್ ಗೆ ಸಂಕಷ್ಟ ಎದುರಾಗಿದೆ. ಹಾಗಾಗಿ ನಾವು ಆಟೋ ಮಾರಾಟಕ್ಕೆ ಇಟ್ಟಿದ್ದೇವೆ ಎನ್ನುತ್ತಾರೆ ಆಟೋ ಚಾಲಕರು.


ಇದನ್ನೂ ಓದಿ- "ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್ ನವರು ಎಲ್ಲ ಹೋರಾಟಗಳಿಗೂ ಸಿದ್ಧರಾಗಬೇಕಿದೆ"


ಹುಬ್ಬಳ್ಳಿ ಧಾರವಾಡ ಅವಳಿನಗರದಿಂದ ಹೊರಗಡೆ ಸಂಚರಿಸುವ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ. ಆದರೆ, ನಗರದ ಆಟೊಗಳು ಓಡುವುದೇ ಮಹಿಳೆಯರನ್ನು ಅವಲಂಬಿಸಿ. ನಗರದಲ್ಲಿ  ಪರವಾನಗಿ ಇರುವ  ಸಾವಿರಾರು ಆಟೋಗಳಿವೆ. ಉಚಿತ ಪ್ರಯಾಣದ ಕಾರಣ ಮಹಿಳೆಯರು ಆಟೋಗಳಿಂದ ದೂರವಾಗಿದ್ದಾರೆ. ಅವರ ಪತಿ, ಮಕ್ಕಳು ಸಹ ಬರುತ್ತಿಲ್ಲ ಇದರಿಂದ ನಮ್ಮ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ’ ನಮಗೆ ಅಟೋ ಮಾರಾಟ ಮಾಡದೇ ಬೇರೆ ದಾರಿನೇ ಇಲ್ಲ ಎಂದು ಕೆಲ ಆಟೋ ಚಾಲಕರು ಅಳಲು ತೋಡಿಕೊಂಡಿದ್ದಾರೆ. 


ಈ ಕುರಿತಂತೆ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿರುವ ಇಮಾಮ್ ಎಂಬ ಆಟೋ ಚಾಲಕರ ಸಂಘದ ಮುಖಂಡ, ಈಗಾಗಲೇ ಸಾಲ ಸೋಲ ಮಾಡಿ ಅಟೋ ಖರೀದಿ ಮಾಡಲಾಗಿದ್ದು ಬ್ಯಾಂಕ್ ಕಂತು ಕಟ್ಟಲು ಸಹ ಆಗುತ್ತಿಲ್ಲ.‌ ಇದರಿಂದಾಗಿ ಆಟೋ ಪಾಡು  ಹೇಳತೀರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 


ಇದನ್ನೂ ಓದಿ- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಗೃಹ ಜ್ಯೋತಿಗೆ ಭರ್ಜರಿ ಪ್ರತಿಕ್ರಿಯೆ


ಇನ್ನೂ ಸರ್ಕಾರದ "ಶಕ್ತಿ ಯೋಜನೆ" ಬಗ್ಗೆ ತೀವ್ರ ವಿರೋಧ ವ್ಯಕ್ತ ಪಡಿಸಿರುವ ಆಟೋ ಚಾಲಕರು, ಈ ಉಚಿತ ಯೋಜನೆಗೆ ನಮ್ಮ ವಿರೋಧವಿದ್ದು ಇದೇ ಯೋಜನೆ ಹಣವನ್ನು ಅಕ್ಕಿ ತರಲು ಹಾಕಿ. ಆಗ, ಬಡವರ ಹೊಟ್ಟೆ ‌ಆದರೂ ತುಂಬುತ್ತದೆ. ಸುಮ್ಮನೆ ಯಾವುದೇ ಗೊತ್ತು ಗುರಿ ‌ಇಲ್ಲದೇ ಒಂದು ಯೋಜನೆ ಜಾರಿ ಮಾಡಿದರೆ ಬೇರೆಯೊಬ್ಬರ ಬದುಕಿಗೆ‌ ಹೊಡೆತ ಕೊಟ್ಟಂತೆ ಆಗುತ್ತದೆ. ಇದಕ್ಕೆ ಸರ್ಕಾರ ಅವಕಾಶ ನೀಡಬಾರದು. ಪುರುಷರು ಬೈಕು, ಕಾರುಗಳಲ್ಲಿ ಓಡಾಡುತ್ತಾರೆ. ವಿದ್ಯಾರ್ಥಿಗಳಿಗೆ ಪಾಸ್‌ಗಳಿವೆ. ಆಟೋಗಳಲ್ಲಿ ಓಡಾಡುವುದು ಮಹಿಳೆಯರು ಮಾತ್ರ. ಈಗ ಅವರೂ ಇಲ್ಲದಿದ್ದರೆ ನಮ್ಮ ಜೀವನ ಕಷ್ಟವಾಗುತ್ತದೆ. ಈ ಸರ್ಕಾರ ನಮಗೆ ಪರ್ಯಾಯ ಏನಾದರೂ ಮಾಡಲಿ ಎಂದು ಆಟೋ ಚಾಲಕರು ಬೇಡಿಕೊಂಡಿದ್ದಾರೆ. ಸರ್ಕಾರ ಇವರ ಮನವಿಯನ್ನು ಎಷ್ಟರ ಮಟ್ಟಿಗೆ ಗಣನೆಗೆ ತೆಗೆದುಕೊಳ್ಳುತ್ತದೆ ಎಂಬುದನ್ನೂ ಕಾದು ನೋಡಬೇಕಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.