HD Kumaraswamy: ‘ತಮ್ಮ ಪಕ್ಷದ ಕಾರ್ಯಕರ್ತರನ್ನೇ ರಕ್ಷಣೆ ಮಾಡದವರು ರಾಜ್ಯವನ್ನು ಹೇಗೆ ರಕ್ಷಣೆ ಮಾಡ್ತಾರೆ?’
ಶಿವಮೊಗ್ಗದಲ್ಲಿ ನಡೆದಿರುವ ಹಿಂದುಪರ ಸಂಘಟನೆ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಎಚ್ಡಿಕೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು: ನಿಮ್ಮ ಪಕ್ಷದ ಕಾರ್ಯಕರ್ತರನ್ನೇ ರಕ್ಷಣೆ ಮಾಡಿಲ್ಲವೆಂದ್ರೆ ರಾಜ್ಯವನ್ನು ಹೇಗೆ ರಕ್ಷಣೆ ಮಾಡುತ್ತೀರಾ ಎಂದು ಆಡಳಿತ ಪಕ್ಷ ಬಿಜೆಪಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಪ್ರಶ್ನಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದಿರುವ ಹಿಂದುಪರ ಸಂಘಟನೆ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಎಚ್ಡಿಕೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಹತ್ಯೆಯಾದ ಯುವಕ(Youth Murder)ನ ಮನೆಗೆ ಎಲ್ಲಾ ರಾಜಕೀಯ ಪಕ್ಷದ ನಾಯಕರು ಭೇಟಿ ಕೊಡ್ತಾರೆ. ಮೊಸಳೆ ಕಣ್ಣೀರನ್ನೂ ಹಾಕ್ತಾರೆ. ಆ ಮೇಲೆ ಮನೆ ಬಳಿಯೇ ಸುಳಿಯುವುದಿಲ್ಲ. ಪ್ರಕರಣವನ್ನು ದುರುಪಯೋಗ ಪಡಿಸಿಕೊಂಡು ಅಶಾಂತಿ ಸೃಷ್ಟಿ ಮಾಡ್ತಾರೆ. ಕುಟುಂಬದವರು ಇದಕ್ಕೆ ಬಲಿಯಾಗಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭೂಕಬಳಿಕೆ ಆರೋಪ: ಜಮೀರ್ ಅಹಮದ್ ವಿರುದ್ಧ ದಾಖಲಾಯ್ತು ಎಫ್ಐಆರ್
ಊರೆಲ್ಲ ಬೆಂಕಿ ಹಚ್ಚಿದ ಮೇಲೆ ಪೈರ್ ಇಂಜಿನ್ ತೆಗೆದುಕೊಂಡು ಹೋಗುವುದಲ್ಲ. ‘ಊರೆಲ್ಲಾ ದೋಚಿಕೊಂಡು ಹೋದಮೇಲೆ ದೊಡ್ಡಿ ಬಾಗಿಲು ಹಾಕಿದರಂತೆ’ ಎಂಬಂತಾಗಿದೆ. ರಾಜ್ಯ ಸರ್ಕಾರ(BJP Government) ತನ್ನ ಜವಾಬ್ದಾರಿ ಮರೆಯಬಾರದು. ಇಂತಹ ಘಟನೆಗಳಲ್ಲಿ ಸಾಯಿವುದೆ ಅಮಾಯಕರ ಮಕ್ಕಳು. ರಾಜ್ಯದಲ್ಲಿ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ. ರಾಜಕಾರಣಿಗಳು ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್, ಕುಂಕುಮದ ಬಗ್ಗೆ ಚರ್ಚೆಯಾಗಲ್ಲ’ ಅಂತಾ ಕಿಡಿಕಾರಿದ್ದಾರೆ.
‘ಬರೀ ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಹಿಜಾಬ್(Hijab), ಅರಿಶಿಣ-ಕುಂಕುಮ ಇಟ್ಟುಕೊಳ್ಳವುದರ ಬಗ್ಗೆ ಚರ್ಚೆ ಆಗುತ್ತದೆ. ಎರಡು ಸಮಾಜಕ್ಕೆ ನಾನು ಹೇಳುತ್ತೇನೆ. ನಿಮ್ಮನ್ನು ರಕ್ಷಣೆ ಮಾಡುತ್ತೇವೆಂದು ಎರಡು ಪಕ್ಷಗಳು ಬೋರ್ಡ್ ಹಿಡಿದುಕೊಂಡು ಬರುತ್ತಾರೆ. ಇದರಿಂದ ಜನರು ಎಚ್ಚೆತ್ತುಕೊಳ್ಳಬೇಕು’ ಅಂತಾ ಎಚ್ ಡಿಕೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: 'ಬಿಜೆಪಿಗೆ ರಾಷ್ಟ್ರ ಧ್ವಜಕ್ಕಿಂತ ಸಚಿವ ಸ್ಥಾನವೇ ಮುಖ್ಯವಾದಂತಿದೆ'-ಸಿದ್ಧರಾಮಯ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.