Harsha Murder : ಶಿವಮೊಗ್ಗದಲ್ಲಿ ಹಿಂದುಪರ ಸಂಘಟನೆ ಕಾರ್ಯಕರ್ತನ ಬರ್ಬರ ಕೊಲೆ!

ಈ ಕುರಿತು ದೊಡ್ಡ ಪೇಟೆ ಪೊಲೀಸ್ ಠಾಣೆ(Dodda pete Police Station)ಯಲ್ಲಿ ಪ್ರಕರಣ ದಾಖಲಾಗಿದ್ದು. ಕೊಲೆಗೆ ಕಾರಣ ತಿಳಿದು ಬಂದಿಲ್ಲ. 

Written by - Zee Kannada News Desk | Last Updated : Feb 21, 2022, 09:15 AM IST
  • ಹಿಂದುಪರ ಸಂಘಟನೆ ಕಾರ್ಯಕರ್ತನನ್ನ ಬರ್ಬರ ಕೊಲೆ
  • ಕಾಮತ್ ಪೆಟ್ರೋಲ್ ಬಂಕ್ ಬಳಿಯ ಭಾರತಿ ನಗರದಲ್ಲಿ ಘಟನೆ ನಡಿದೆ
  • 26 ವರ್ಷದ ಹರ್ಷ ಎಂಬವ ಕೊಲೆಯಾದ ಯುವಕ.
Harsha Murder : ಶಿವಮೊಗ್ಗದಲ್ಲಿ ಹಿಂದುಪರ ಸಂಘಟನೆ ಕಾರ್ಯಕರ್ತನ ಬರ್ಬರ ಕೊಲೆ! title=

ಶಿವಮೊಗ್ಗ : ಹಿಂದುಪರ ಸಂಘಟನೆ ಕಾರ್ಯಕರ್ತನನ್ನ ಬರ್ಬರ ಕೊಲೆ ಮಾಡಿರುವ ಘಟನೆ ಕಾಮತ್ ಪೆಟ್ರೋಲ್ ಬಂಕ್ ಬಳಿಯ ಭಾರತಿ ನಗರದಲ್ಲಿ ಘಟನೆ ನಡಿದೆ. 26 ವರ್ಷದ ಹರ್ಷ ಎಂಬವ ಕೊಲೆಯಾದ ಯುವಕ.

ಈ ಕುರಿತು ದೊಡ್ಡ ಪೇಟೆ ಪೊಲೀಸ್ ಠಾಣೆ(Dodda pete Police Station)ಯಲ್ಲಿ ಪ್ರಕರಣ ದಾಖಲಾಗಿದ್ದು. ಕೊಲೆಗೆ ಕಾರಣ ತಿಳಿದು ಬಂದಿಲ್ಲ. 

ಇದನ್ನೂ ಓದಿ : ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದ ವತಿಯಿಂದ ಮಾರ್ಚ್ ನಲ್ಲಿ ತರಬೇತಿ ಶಿಬಿರ

ಈ ಯುವಕನ ಕೊಲೆಗೆ ಸಂಭಂದ ಪಟ್ಟಂತೆ ಹಳೆ ಶಿವಮೊಗ್ಗ(Shimoga) ನಗರ ಉದ್ವಿಗ್ನ ಸ್ಥಿತಿ ರೂಪಗೊಂಡಿದೆ. ಕ್ಲರ್ಕ್ ಪೇಟೆ, ಎಂ.ಕೆ.ಕೆ. ರಸ್ತೆ, ಸೀಗೆಹಟ್ಡಿ , ಇಮಾಮ್ ಬಡಾ ಬಡಾವಣೆಗಳಲ್ಲಿ ನಿನ್ನೆ ರಾತ್ರಿ ಕಲ್ಲು ತೂರಾಟ ಮಾಡಿ, ಬೈಕ್ ಗೆ ಬೆಂಕಿ ಹಚ್ಚಿದ್ದಾರೆ. ಸಧ್ಯ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

ಹಲ್ಲೆಗೊಳಗಾದವರು ಯಾರು ಆಸ್ಪತ್ರೆಗೆ ದಾಖಲಾಗಿಲ್ಲ. ಮೃತ ಹರ್ಷ ಶವ ಪರೀಕ್ಷೆ(Post Mortem) ‌ನಂತರ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ.ಕೆಲವೇ ನಿಮಿಷಗಳಲ್ಲಿ ಹೋಮ್ ಮಿನಿಸ್ಟರ್ ಸುದ್ದಿಗೋಷ್ಠಿ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News