ಬಿಎಂಟಿಸಿ ಚಾಲಕರ ಮೇಲೆ ಕರಿನೆರಳು .! ಖಾಸಗೀಕರಣದತ್ತ ಹೆಜ್ಜೆ ಹಾಕುತ್ತಿದೆಯಾ ಬಿಎಂಟಿಸಿ..?
ಬಿಎಂಟಿಸಿ ಚಾಲಕರ ಪಾಲಿಗೆ ಇದೊಂದು ಶಾಕಿಂಗ್ ಸುದ್ದಿ. ಬಿಎಂಟಿಸಿಗೆ ಖಾಸಗೀ ಚಾಲಕರು ಎಂಟ್ರಿಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಹೌದು ಈ ಬಗ್ಗೆ ಬಿಎಂಟಿಸಿ ಆಡಳಿತ ಮಂಡಳಿಯಿಂದ ಗಂಭೀರ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು : ಬಿಎಂಟಿಸಿ ಖಾಸಗೀಕರಣದತ್ತ ಹೆಜ್ಜೆ ಹಾಕುತ್ತಿದೆಯಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಔಟ್ ಸೋರ್ಸ್ ಏಜೆನ್ಸಿಯಿಂದ ಚಾಲಕರ ನೇಮಕಕ್ಕೆ ಬಿಎಂಟಿಸಿ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಎಂಟಿಸಿ ಆಡಳಿತ ಮಂಡಳಿಯಿಂದ ಈ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಬಿಎಂಟಿಸಿ ಚಾಲಕರ ಪಾಲಿಗೆ ಇದೊಂದು ಶಾಕಿಂಗ್ ಸುದ್ದಿ. ಬಿಎಂಟಿಸಿಗೆ ಖಾಸಗೀ ಚಾಲಕರು ಎಂಟ್ರಿಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಹೌದು ಈ ಬಗ್ಗೆ ಬಿಎಂಟಿಸಿ ಆಡಳಿತ ಮಂಡಳಿಯಿಂದ ಗಂಭೀರ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಗುತ್ತಿಗೆ ಆಧಾರದಲ್ಲಿ ಖಾಸಗೀ ಡ್ರೈವರ್ ನಿಯೋಜನೆಗೆ ಬಿಎಂಟಿಸಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಬೀದಿನಾಯಿಗಳಿಗೆ ಹಿಂಸೆ ಕೊಟ್ಟರೆ ಸೇರಬೇಕಾಗುತ್ತದೆ ಜೈಲು, ಬೀಳಲಿದೆ ಭಾರೀ ದಂಡ ..!
ಬಿಎಂಟಿಸಿ ಈ ಯೋಚನೆಯಿಂದ ಚಾಲಕರ ಮೇಲೆ ಖಾಸಗಗೀಕರಣದ ಕರಿನೆರಳು ಹರಿದಾಡುತ್ತಿದೆ. ಬಾಹ್ಯ ಏಜೆನ್ಸಿ ಮೂಲಕ ಚಾಲಕರ ನೇಮಕಕ್ಕೆ ಬಿಎಂಟಿಸಿ ಮುಂದಾದರೆ ಖಾಸಗಿ ಚಾಲಕರು ಬಿಎಂಟಿಸಿಗೆ ಪ್ರವೇಶ ಪಡೆಯುತ್ತಾರೆ. ಈ ಬಗ್ಗೆ ನಿನ್ನೆ ಬಿಎಂಟಿಸಿ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಸಾಧಕ-ಬಾಧಕಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ.
ಖಾಸಗಿ ಚಾಲಕರನ್ನು ನೇಮಕ ಮಾಡುವ ಮೂಲಕ ಉಳಿತಾಯದ ಯೋಜನೆಯಲ್ಲಿದೆ ಬಿಎಂಟಿಸಿ. ಒಂದು ವೇಳೆ ಬಿಎಂಟಿಸಿಯ ಈ ಪ್ಲ್ಯಾನ್ ಗೆ ಸರ್ಕಾರ ಅಸ್ತು ಎಂದು ಹೇಳಿದರೆ ಈಗಾಗಲೇ ವಜಾಗೊಂಡ, ಕೆಲಸ ಕಳೆದುಕೊಂಡ ಕಾರ್ಮಿಕರ ಆಸೆಗೆ ಶಾಶ್ವತ ತಣ್ಣೀರು ಎರಚಿದಂತಾಗುತ್ತದೆ. ಬಿಎಂಟಿಸಿ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ಸಾರಿಗೆ ನೌಕರರ ಸಂಘದಿಂದಲೂ ಭಾರೀ ವಿರೋಧ ವ್ಯಕ್ತವಾಗಿದೆ. ಈ ನಿರ್ಧಾರದಿಂದ ಸಾರಿಗೆ ನೌಕರರ ಸಂಘ ಕೆಂಡಾಮಂಡಲವಾಗಿದೆ.
ಇದನ್ನೂ ಓದಿ : ಜಾಮಿಯಾ ಮಸೀದಿಯಲ್ಲಿ ಮೊದಲು ದೇವಸ್ಥಾನ ಇತ್ತು ಅನ್ನೋದು ಗೊತ್ತಾಗಿದೆ- ಮುತಾಲಿಕ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.