ಬೆಂಗಳೂರು : ಡಿಕೆ ಶಿವಕುಮಾರ್ ಅವರ ಮನೆಗೆ ನಾನು ಹೋಗಬಾರದಾ..? ನಿವೇ ಹೇಳಿ.. ನಾನು ಏಕೆ ಹೋಗಿದ್ದೆ ಎಂದು ಅವರೇ ಹೇಳಿದ್ದಾರೆ. ಅದರಲ್ಲಿ ಬೇರೆ ಏನಿಲ್ಲ ಎಂದು ಸಚಿವ ಆನಂದ್ ಸಿಂಗ್(Anand Singh) ಪ್ರತಿಕ್ರಿಯಿಸಿದ್ದಾರೆ. 


COMMERCIAL BREAK
SCROLL TO CONTINUE READING

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK shivakumar) ನಿವಾಸಕ್ಕೆ ಆನಂದ್ ಸಿಂಗ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ  ಸಚಿವ ಆನಂದ್ ಸಿಂಗ್, ಮುನಿರೆಡ್ಡಿ ಪಾಳ್ಯದಲ್ಲಿ ನಮ್ಮ ಅಳಿಯನ ಮನೆಗೆ ತಿಂಡಿಗೆ ಹೋಗಿದ್ದೆ, ಖಾಸಗಿ ಕಾರಿನಲ್ಲಿ ಹೋಗಿದ್ದೆ, ಈ ವೇಳೆ ಡಿಕೆ ಶಿವಕುಮಾರ್ ಅವರು ಫೋನ್ ಮಾಡಿದ್ರು, ಕಾವೇರಿ ಆರತಿ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ್ರು, ಮನೆಗೆ ಬನ್ನಿ ಮಾತಾಡೋಣ ಅಂದ್ರು. ಹೀಗಾಗಿ ಖಾಸಗಿ ಕಾರಿನಲ್ಲೆ ಹೋಗಿದ್ದೆ. ಅದನ್ನೆ ಮಾಧ್ಯಮಗಳಲ್ಲಿ ದೊಡ್ಡ ವಿಚಾರ ಮಾಡಲಾಗಿದೆ ಎಂದು ಹೇಳಿದರು.


ಇದನ್ನೂ ಓದಿ : K Sudhakar : 'ರಾಜ್ಯದಲ್ಲಿ ಕ್ರಮೇಣ ಇಳಿಕೆಯಾಗುತ್ತಿದೆ ಕೋವಿಡ್ ಪಾಸಿಟಿವಿಟಿ ದರ'


ಆ ರೀತಿ ಏನು ಇಲ್ಲ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ವಿಚಾರವಾಗಿ ನನಗೆ ಯಾವುದೇ ಅಸಮಾಧಾನ ಇಲ್ಲ, ಅಸಮಧಾನ ಇದೆ ಎಂದು ನಾನು ಹೇಳಿದ್ದೇನಾ? ನಿವೇ ಏನೇನೊ ಮಾಡಿದ್ರೆ, ಕೊಪ್ಪಳಕ್ಕೆ ಸಂತೋಷದಿಂದ ಹೋಗಿದ್ದೇನೆ ಎಂದು ಮಾಧ್ಯಮದವರನ್ನ ಪ್ರಶ್ನಿಸಿದರು. 


ಮಾಧ್ಯಮಗಳು ಈ ವಿಚಾರವನ್ನ ಈ ರೀತಿ ಬಿಂಬಿಸ್ತೀರಾ ಎಂದು ಗೊತ್ತಿದ್ರೆ, ನಾನು(Anand Singh) ಹೋಗುತ್ತಿರಲಿಲ್ಲ.ಸಂಗಮದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಮಾಡುವ ವಿಚಾರ ಬಿಟ್ರೆ, ರಾಜಕೀಯವಾಗಿ ಏನು ಚರ್ಚೆ ಮಾಡಿಲ್ಲ ಎಂದು ಪ್ರಷ್ಠನೇ ನೀಡಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.