K Sudhakar : 'ರಾಜ್ಯದಲ್ಲಿ ಕ್ರಮೇಣ ಇಳಿಕೆಯಾಗುತ್ತಿದೆ ಕೋವಿಡ್ ಪಾಸಿಟಿವಿಟಿ ದರ'

ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಇಳಿಕೆಯಾಗಿದೆ. ಬೇರೆ ಜಿಲ್ಲೆಗಳಲ್ಲಿ ಕೂಡ ಕ್ರಮೇಣ ಇಳಿಕೆಯಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಮಾತ್ರ ಕೋವಿಡ್ ಪಾಸಿಟಿವಿಟಿ ಹೆಚ್ಚಾಗುತ್ತಿದೆ. ಆದರೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ 2-3% ರಷ್ಟಿದೆ. ಜೊತೆಗೆ 0.05% ನಷ್ಟು ಮರಣ ಪ್ರಮಾಣವಿದೆ.

Written by - Channabasava A Kashinakunti | Last Updated : Jan 31, 2022, 06:28 PM IST
  • ಲಸಿಕೆ ಪ್ರಮಾಣದಲ್ಲಿ ರಾಜ್ಯ ಮುಂಚೂಣಿ
  • ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಇಳಿಕೆ
  • ಹೊಸ ವೈರಾಣು ಒಮಿಕ್ರಾನ್ ತೀವ್ರವಾಗಿ ಬಾಧಿಸುತ್ತಿಲ್ಲ
K Sudhakar : 'ರಾಜ್ಯದಲ್ಲಿ ಕ್ರಮೇಣ ಇಳಿಕೆಯಾಗುತ್ತಿದೆ ಕೋವಿಡ್ ಪಾಸಿಟಿವಿಟಿ ದರ' title=

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಕ್ರಮೇಣ ಇಳಿಕೆಯಾಗುತ್ತಿದೆ. ಆದರೂ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಎಚ್ಚರದಿಂದ ಪಾಲಿಸಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ ಕೆ.ಸುಧಾಕರ್(K Sudhakar), ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಇಳಿಕೆಯಾಗಿದೆ. ಬೇರೆ ಜಿಲ್ಲೆಗಳಲ್ಲಿ ಕೂಡ ಕ್ರಮೇಣ ಇಳಿಕೆಯಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಮಾತ್ರ ಕೋವಿಡ್ ಪಾಸಿಟಿವಿಟಿ ಹೆಚ್ಚಾಗುತ್ತಿದೆ. ಆದರೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ 2-3% ರಷ್ಟಿದೆ. ಜೊತೆಗೆ 0.05% ನಷ್ಟು ಮರಣ ಪ್ರಮಾಣವಿದೆ. ಇದು ಸದ್ಯದ ಸಮಾಧಾನಕಾರ ಸಂಗತಿಯಾಗಿದೆ. ಆದರೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕಿದೆ. ಕೋವಿಡ್ ಪ್ರಕರಣಗಳ ಬಗ್ಗೆ ಬೇರೆ ದೇಶ, ರಾಜ್ಯಗಳ ಸ್ಥಿತಿಗತಿಯನ್ನು ಗಮನಿಸಲಾಗುತ್ತಿದೆ ಎಂದರು.

ಇದನ್ನೂ ಓದಿ : ಡಿಕೆಶಿ-ಆನಂದ್ ಸಿಂಗ್ ಭೇಟಿ ವಿಚಾರ.. "ರಾಜಕೀಯ ರೆಸಾರ್ಟ್, ಹೊಟೇಲ್ ನಲ್ಲಿ ಮಾತಾಡುತ್ತೇವೆ"

ಕೋವಿಡ್ ಲಸಿಕಾಕರಣದಲ್ಲಿ(Covid Vaccine) ರಾಜ್ಯ ಮುಂಚೂಣಿಯಲ್ಲಿದೆ. ಜನರ ಸಹಕಾರ, ಆರೋಗ್ಯ ಸಿಬ್ಬಂದಿಯ ಪರಿಶ್ರಮ ಹಾಗೂ ಉತ್ತಮ ಆಡಳಿತದಿಂದಾಗಿ ಮೊದಲ ಡೋಸ್ ನಲ್ಲಿ ಶೇ.100 ಸಾಧನೆಯಾಗಿದೆ. ಎರಡನೇ ಡೋಸ್ ನಲ್ಲಿ 87% ಸಾಧನೆಯಾಗಿದೆ. ಆದರೂ ನಿರಂತರವಾಗಿ ಎಚ್ಚರಿಕೆಯಿಂದ ಇರಬೇಕು ಎಂದರು.

ಮೂರನೇ ಅಲೆಯಲ್ಲಿ(covid 3rd wave) ಮತ್ತೆ ಪ್ರಕರಣಗಳ ಪ್ರಮಾಣ ಹೆಚ್ಚಲಿದೆ ಎಂದು ಹೇಳಲಾಗುವುದಿಲ್ಲ. ಪ್ರತಿ ದಿನ ರಾಜ್ಯದಲ್ಲಿ 2.5 ಲಕ್ಷ ಕೊರೊನಾ ಪರೀಕ್ಷೆ ಮಾಡಿ ಸಂಪರ್ಕಿತರ ಪತ್ತೆ ಮಾಡಲಾಗುತ್ತಿದೆ. 32% ಪಾಸಿಟಿವಿಟಿ ದರವಿದ್ದರೂ ಅದು ಇಳಿಕೆಯಾಗುತ್ತಿದೆ. ಹೊಸ ವೈರಾಣು ಒಮಿಕ್ರಾನ್ ತೀವ್ರವಾಗಿ ಬಾಧಿಸುತ್ತಿಲ್ಲ. ಆದರೆ ಇದು ವೇಗವಾಗಿ ಹರಡುವ ಲಕ್ಷಣ ಹೊಂದಿದೆ. ಈ ವೈರಾಣುವಿನಲ್ಲೇ ಏನಾದರೂ ಬದಲಾವಣೆಯಾಗಲಿದೆಯೇ ಎಂದು ಗಮನಿಸಬೇಕಿದೆ. ಚಿತ್ರಮಂದಿರಗಳು ಮುಚ್ಚಿದ ಸ್ಥಳವಾಗಿದ್ದು, ಬೇರೆ ಉದ್ಯಮಕ್ಕಿಂತ ಭಿನ್ನವಾಗಿದೆ. ಚಿತ್ರಮಂದಿರಗಳಿಗೆ ವಿಧಿಸಿದ ನಿರ್ಬಂಧಗಳ ಸಡಿಲಿಕೆ ಕುರಿತು ಮುಖ್ಯಮಂತ್ರಿಗಳೇ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News