ಬಿಜೆಪಿ ನಾಯಕರನ್ನು ಮುಜುಗರಕ್ಕೆ ಒಳಪಡಿಸಿದ ಶ್ರೀರಾಮಲು!
ಸುಳ್ಯ: ನವ ಕರ್ನಾಟಕ ನಿರ್ಮಾಣಕ್ಕಾಗಿ ಬಿಜೆಪಿ ಕೈಗೊಂಡಿರುವ ಪರಿವರ್ತನಾ ಯಾತ್ರೆಯ ವೇಳೆ ವೀರಾವೇಶದ ಭಾಷಣ ಮಾಡುವ ಭರದಲ್ಲಿ ಸಂಸದ ಶ್ರೀರಾಮಲು ಬಿಜೆಪಿ ನಾಯಕರನ್ನು ಮುಜುಗರಕ್ಕೆ ಒಳಪಡಿಸಿದ್ದಾರೆ.
ಪರಿವರ್ತನಾ ಯಾತ್ರೆಯಲ್ಲಿ ಭಾಷಣದ ವೇಳೆ 'ಕೆಲದಿನಗಳ ಹಿಂದೆ ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಡಿ.ವಿ. ಸದಾನಂದಗೌಡ ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿಸುವಂತ ಕಾರ್ಯ ನಿರ್ವಹಿಸಿದ್ದರು. ನೀವೆಲ್ಲಾ ಅದನ್ನು ನೋಡಿದ್ದೀರಿ ಎಂದು ಹೇಳಿದರು. ಏನೋ ಮಾತನಾಡಲು ಹೋಗಿ ಏನೋ ಮಾತನಾಡಿದ ಶ್ರೀರಾಮಲು ಅವರಿಂದ ವೇದಿಕೆಯಲ್ಲಿದ್ದ ಬಿಜೆಪಿ ನಾಯಕರಿಗೆ ಮುಜುಗರ ಉಂಟು ಮಾಡಿದ್ದಾರೆ.