ಡಿಕೆಶಿಗಿಂತ ಮೊದಲೇ ತೆರಳಿ ‘ರಾಗಾ’ಗೆ ಸ್ವಾಗತ: ಜೊತೆಗೆ ತಿಂಡಿ ಸೇವಿಸಿದ ಸಿದ್ದರಾಮಯ್ಯ
ಡಿಕೆಶಿ ಬಿಟ್ಟು ಒಬ್ಬರೇ ಆಗಮಿಸಿ ರಾಹುಲ್ ಗಾಂಧಿಗೆ ಸ್ವಾಗತ ಕೋರಿದ ಸಿದ್ದರಾಮಯ್ಯ ಖಾಸಗಿ ರೆಸಾರ್ಟ್‍ನಲ್ಲಿ ಜೊತೆಗೆ ಉಪಹಾರ ಸೇವಿಸಿದ್ದಾರೆ.
ಚಾಮರಾಜನಗರ: ರಾಜ್ಯದಲ್ಲಿ ಇಂದಿನಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ’ ಯಾತ್ರೆ ಆರಂಭವಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ಅಗಮಿಸಿದ ರಾಹುಲ್‍ರನ್ನು ಸ್ವಾಗತಿಸಲು ಮಾಜಿ ಸಿಎಂ ಸಿದ್ದರಾಮಯ್ಯನವರು ಕೆಪಿಸಿಸಿ ಅಧ‍್ಯಕ್ಷ ಡಿ.ಕೆ.ಶಿವಕುಮಾರ್‍ಗಿಂತಲೂ ಮೊದಲೇ ತೆರಳಿ ಸ್ವಾಗತಿಸಿದ್ದಾರೆ.
ಗುಂಡ್ಲುಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದ ಬಳಿ ರಾಹುಲ್ ಗಾಂಧಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅದಕ್ಕೂ ಮೊದಲೇ ದಾರಿ ಮಧ್ಯೆ ಸಿದ್ದರಾಮಯ್ಯನವರು ರಾಹುಲ್ ಗಾಂಧಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ. ರಾಹುಲ್ ಗಾಂಧಿಗೆ ಅರಣ್ಯ ಪ್ರದೇಶದ ಮಧ್ಯ ಸಿದ್ದರಾಮಯ್ಯ ಸ್ವಾಗತ ಕೋರಿದರೇ ವೇದಿಕೆ ಕಾರ್ಯಕ್ರಮದ ಸಿದ್ಧತೆಯನ್ನು ಡಿ.ಕೆ.ಶಿವಕುಮಾರ್ ನೋಡಿಕೊಂಡಿದ್ದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಖಾಕಿ ಅಲರ್ಟ್!!
ಡಿಕೆಶಿಯನ್ನು ಬಿಟ್ಟು ಒಬ್ಬರೇ ಆಗಮಿಸಿ ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಸ್ವಾಗತ ಕೋರಿದ್ದಾರೆ. ನಂತರ ದಾರಿ ಮಧ್ಯೆ ಖಾಸಗಿ ರೆಸಾರ್ಟ್‍ನಲ್ಲಿ ರಾಹುಲ್ ಜೊತೆಗೆ ಕುಳಿತು ಸಿದ್ದರಾಮಯ್ಯನವರು ಉಪಹಾರ ಸೇವಿಸಿದ್ದಾರೆ. ಉಪಾಹಾರ ವೇಳೆ ಸಿದ್ದರಾಮಯ್ಯ ಬೆಂಬಲಿತ ಮುಖಂಡರು ಇದ್ದರೇ, ವೇದಿಕೆ ಬಳಿ ಡಿಕೆಶಿ ಬೆಂಬಲಿಗರಿದ್ದರು.
ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ ಐಕ್ಯತಾ ಯಾತ್ರೆ ಶುಕ್ರವಾರ ಗುಂಡ್ಲುಪೇಟೆ ಮೂಲಕ ರಾಜ್ಯದಲ್ಲಿ ಸಂಚಾರ ಆರಂಭಿಸಲಿದೆ. ರಾಜ್ಯದ 8 ಜಿಲ್ಲೆಗಳಲ್ಲಿ 21 ದಿನ ಸಾಗಲಿರುವ ಈ ಯಾತ್ರೆಗೆ ಈಗಾಗಲೇ ಅದ್ದೂರಿ ಚಾಲನೆ ದೊರಕಿದೆ. ಕೇರಳ ಮೂಲಕ ರಾಜ್ಯಕ್ಕೆ ಆಗಮಿಸಿರುವ ಈ ಐಕ್ಯತಾ ಯಾತ್ರೆಯ ರಾಜ್ಯ ಸಂಚಾರಕ್ಕೆ ಗುಂಡ್ಲುಪೇಟೆಯಿಂದ ಚಾಲನೆ ದೊರೆತಿದೆ. ಉದ್ಘಾಟನಾ ಕಾರ್ಯಕ್ರಮ ಹಾಗೂ ನಂತರ ನಡೆಯುವ ಪಾದಯಾತ್ರೆಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ: ಬಂಡೀಪುರ ಕಾಡಿನ ಮೂಲಕ ರಾಜ್ಯಕ್ಕೆ ರಾಗಾ ಎಂಟ್ರಿ; ನಾಯಕನನ್ನು ಸ್ವಾಗತಿಸಿದ ರಾಜ್ಯ ನಾಯಕರ ದಂಡು!!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.