ಬೆಂಗಳೂರು: ಹಿಂದುತ್ವ ಎಂಬುದು ಯಾವುದೇ ಜಾತಿ, ಧರ್ಮ, ಮತಕ್ಕೆ ಸಂಬಂಧಿಸಿದಲ್ಲ. ಹಿಂದುತ್ವ ಎಂಬುದು ಭಾರತೀಯರ ಉತ್ಕೃಷ್ಟ ಜೀವನ ಪದ್ಧತಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟರು. 


COMMERCIAL BREAK
SCROLL TO CONTINUE READING

ವಿಜಯನಗರದ ಎಂ.ಸಿ.ಬಡಾವಣೆಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ನಡೆದ  ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಪ್ರಮುಖ ಭಾಷಣ ಮಾಡಿದ ಅವರು ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದರು. 


'ನಿಮ್ಮ ಒಗ್ಗಟ್ಟು ರಾಹುಲ್‌ ಗಾಂಧಿ ಅವರು ಗುಜರಾತ್‌ನಲ್ಲಿ ಹೇಗೆ ದೇಗುಲಗಳ ದರ್ಶನ ಮಾಡಿಸಿತೋ ಹಾಗೆಯೇ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದು ಎನ್ನುವುದನ್ನು ಗೊತ್ತಾಗಿಸಿದೆ' ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಟಾಂಗ್‌ ನೀಡಿದರು. 


'ನಾನು ನಿನ್ನೆಯೆ ಇಲ್ಲಿಗೆ ಬಂದಿದ್ದೆ ಪತ್ರಿಕೆಯೊಂದರಲ್ಲಿ ನೋಡಿದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನಾನು ಹಿಂದು ಎಂದು ಹೇಳಿಕೊಂಡಿರುವುದು. ನಿಮ್ಮ ಒಗ್ಗಟ್ಟು ಎನ್ನುವುದು ಅವರಿಂದ ಈ ಹೇಳಿಕೆ ಹೊರ ಬರುವಂತೆ ಮಾಡಿದೆ' ಎಂದರು. 


"ಹಿಂದುತ್ವ ಭಾರತದ ಜೀವನ ಪದ್ಧತಿ. ಇದು ಜಾತಿ ಮತ ಅಲ್ಲ, ಭಾರತದ ಅನುಸಾರ ಜೀವನ ಮಾಡುವ ವಿಶ್ವದ ಉತ್ಕೃಷ್ಟ ಜೀವನ ಪದ್ಧತಿ . ಹಿಂದು ಧರ್ಮದಲ್ಲಿ  ಗೋಮಾಂಸ ತಿನ್ನುವುದನ್ನು ಒಪ್ಪುವುದಿಲ್ಲ. ನೀವು ಗೋಮಾಂಸ ತಿನ್ನುವುದನ್ನು ನಾವು ಒಪ್ಪುತ್ತೇವಾ" ಎಂದು ಪ್ರಶ್ನಿಸಿದರು. 


'ಬಿಜೆಪಿ ಅಧಿಕಾರದಲ್ಲಿದ ವೇಳೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಾಡಿದ್ದೆವು. ಆದರೆ ಕಾಂಗ್ರೆಸ್‌ ಅದಕ್ಕೆ ಅವಕಾಶ ನೀಡಲಿಲ್ಲ. ಅದನ್ನು ತೆಗೆದುಹಾಕಿತು. ಅಲ್ಲದೆ, ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿದೆ. ಕರ್ನಾಟಕವನ್ನು ಕಾಂಗ್ರೆಸ್ ATM ರೀತಿ ಬಳಸುತ್ತಿದೆ. ಹೀಗಾಗಿ ಜನ ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ" ಎಂದು ಕಿಡಿ ಕಾರಿದರು. 


'ಮುಂದಿನ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಾಡುತ್ತಿರುವ ಸಮಗ್ರ ಭಾರತದ ಅಭಿವೃದ್ಧಿಗೆ ಕೈಜೋಡಿಸಿ' ಎಂದು ಯೋಗಿ ಕರೆ ನೀಡಿದರು.