ರಾಜ್ಯದಲ್ಲಿ ಪ್ರವಾಹ: ಬಿಜೆಪಿ ಸರ್ಕಾರದ ಬೇಜವಾಬ್ದಾಯಿಂದ ಈ ಪರಿಸ್ಥಿತಿ ನಿರ್ಮಾಣ- ಸಿದ್ದರಾಮಯ್ಯ
ರಾಜ್ಯದಲ್ಲಿ ಹವಾಮಾನ ಬದಲಾವಣೆಯಾಗುತ್ತಿದ್ದು, ಇದರ ಬಗ್ಗೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆ ಸದನದಲ್ಲಿ ನಿಯಮ 69 ಅಡಿಯಲ್ಲಿ ನಿಲುವಳಿ ಸೂಚನೆ ಮಂಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧವಾಗ್ದಾಳಿ ನಡೆಸಿದರು. ಸರ್ಕಾರದ ಬೇಜವಾಬ್ದಾಯಿಂದಲೇ ರಾಜ್ಯದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇದೇ ವೇಳೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ಮಂಗಳವಾರ ಈ ಬಗ್ಗೆ ಮಾತಾನಾಡಿದ ಸಿದ್ದರಾಮಯ್ಯ, ‘ರಾಜ್ಯದ 20 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಮುಂದಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ಭೀಕರ ಸಮಸ್ಯೆ ಎದುರಿಸಬೇಕಾಗುತ್ತೆ ಅಂತಾ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿತ್ತು. ನಾನೂ ಸಹ ಈ ಬಗ್ಗೆ ಪ್ರಸ್ತಾಪಿಸಿ ಅಗತ್ಯ ಕ್ರಮಕ್ಕೆ ಆಗ್ರಹಿಸಿದ್ದೆ. ಕಳೆದ ವರ್ಷವೇ ಈ ಕುರಿತು ಎಚ್ಚರಿಸಿದ್ದೆ’ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅರ್ಜಿ ಹಾಕದೆ ಸರ್ಕಾರಿ ಉದ್ಯೋಗಿಯಾಗಬಹುದಿತ್ತು: ಬಿಜೆಪಿ
ಅತಿವೃಷ್ಟಿಯಿಂದ ಒಟ್ಟಾರೆ ಶೇ.5.6ರಷ್ಟು ಭತ್ತದ ಉತ್ಪಾದನೆ ಕಡಿಮೆಯಾಗಬಹುದು. ಅದೇ ರೀತಿ ಶೇ.12ರಷ್ಟು ರಾಗಿ, ಶೇ.19.2ರಷ್ಟು ಕಡಲೆ, ಶೇ.9ರಷ್ಟು ಶೇಂಗಾ ಮತ್ತು ಶೇ.28.6ರಷ್ಟು ಸೋಯಾಬಿನ್ ಕಡಿಮೆಯಾಗಬಹುದು ಎಂದು ಅಂದಾಜು ಮಾಡಲಾಗಿತ್ತು. ಹತ್ತಿ ಬೆಳೆ ಹೆಚ್ಚಾಗಬಹುದು, ಶೇ.24.5ರಷ್ಟು ಜೋಳ ಮತ್ತು ಶೇ.6.1ರಷ್ಟು ಕಬ್ಬು ಹೆಚ್ಚಾಗಬಹುದು ಎಂದು ಅಂದಾಜು ಮಾಡಲಾಗಿತ್ತು.ಇದರ ಬಗ್ಗೆ ಹವಾಮಾನ ಇಲಾಖೆ ತಜ್ಞರೇ ಹೇಳಿದ್ದರು. ಕರಾವಳಿ ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿದೆ ಬಯಲು ಸೀಮೆಯಲ್ಲಿ ಮಳೆ ಹೆಚ್ಚಾಗಿದೆ. ಈ ಮುನ್ಸೂಚನೆ ಬಗ್ಗೆ ಸರ್ಕಾರದ ಬಳಿಯೂ ವರದಿ ಇದೆ ಎಂದು ಸಿದ್ದರಾಮಯ್ಯ ವಿವರಿಸಿದರು.
ನಿರಂತರ ಮಳೆ ಸುರಿದ ಪರಿಣಾಮ ರಾಜ್ಯದ ಜನರು ಬಹಳ ಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರು ಒಳಗೆ ಮತ್ತು ಹೊರಗೆ ಜನಸಾಮಾನ್ಯರು ಪರದಾಡುವಂತಾಗಿದೆ. ಭಾರೀ ಮಳೆಯಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ಕರ್ನಾಟಕ ಸ್ಟೇಟ್ ಆ್ಯಕ್ಷನ್ ಪ್ಲಾನ್ ವರದಿ ಇದೆಯೇ? ಇದರ ಬಗ್ಗೆ ಯಾರು ಉತ್ತರ ಕೊಡ್ತೀರಾ? ನೀನು ಕೊಡ್ತೀಯಾ ಅಥವಾ ಸಿಎಂ ಕೊಡ್ತಾರಾ? ಅಂತಾ ಸಚಿವ ಆರ್.ಅಶೋಕ್ ಅವರಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು. ಹವಾಮಾನ ಬದಲಾವಣೆ ಆಗುತ್ತಿದೆ. ಇದರ ಬಗ್ಗೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕೆಂದು ಇದೇ ವೇಳೆ ಅವರು ಸಲಹೆ ನೀಡಿದರು.
ಇದನ್ನೂ ಓದಿ: CT Ravi : 'ಭಾರತದ ಎಲ್ಲಾ ಭಾಷೆಗಳು ಸಹ ಭಾರತದ ಆತ್ಮ, ಮಾತೃಭಾಷೆಯಲ್ಲೇ ವ್ಯವಹರಿಸಿ'
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.