ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅರ್ಜಿ ಹಾಕದೆ ಸರ್ಕಾರಿ ಉದ್ಯೋಗಿಯಾಗಬಹುದಿತ್ತು: ಬಿಜೆಪಿ

#ಭ್ರಷ್ಟರಾಮಯ್ಯನವರೇ ಹಗರಣ ಮಾಡಿ, ತನಿಖೆಗೆ ಹೆದರಿ ತನಿಖಾ ಸಂಸ್ಥೆಗಳನ್ನು ಮುಚ್ಚುವಾಗ ನಿಮ್ಮ ಧಮ್‌ ಎಲ್ಲಿ ಹೋಗಿತ್ತು? ಎಂದು ಬಿಜೆಪಿ ಪ್ರಶ್ನಿಸಿದೆ.

Written by - Puttaraj K Alur | Last Updated : Sep 13, 2022, 12:23 PM IST
  • 2014-15ರ ಸಾಲಿನ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಹಗರಣ ಒಂದೊಂದಾಗಿಯೇ ಹೊರಬೀಳುತ್ತಿದೆ
  • ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅರ್ಜಿಯೇ ಹಾಕದೆ ಸರ್ಕಾರಿ ಉದ್ಯೋಗಿಯಾಗಬಹುದಿತ್ತು
  • ಕಾಂಗ್ರೆಸ್ ಮಾಡಿದ್ದೆಲ್ಲವೂ ಹಗರಣವೇ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅರ್ಜಿ ಹಾಕದೆ ಸರ್ಕಾರಿ ಉದ್ಯೋಗಿಯಾಗಬಹುದಿತ್ತು: ಬಿಜೆಪಿ title=
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅರ್ಜಿಯೇ ಹಾಕದೆ ಸರ್ಕಾರಿ ಉದ್ಯೋಗಿಯಾಗಬಹುದಿತ್ತು ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿರುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘#ಭ್ರಷ್ಟರಾಮಯ್ಯನವರೇ, ನಿಮ್ಮ ಅವಧಿಯಲ್ಲಿ ನಡೆದ 2014-15ರ ಸಾಲಿನ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಹಗರಣ ಒಂದೊಂದಾಗಿಯೇ ಹೊರಬೀಳುತ್ತಿದೆ. ಕಾಂಗ್ರೆಸ್ ಸರ್ಕಾರ 100% ಕಮಿಷನ್ ಸರ್ಕಾರ ಎಂಬ ನಮ್ಮ ವಾದದಲ್ಲಿ ಏನು ತಪ್ಪಿದೆ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಒತ್ತುವರಿದಾರರಿಗೆ ಬಿಸಿ ಮುಟ್ಟಿಸುತ್ತಿರುವ ಬಿಬಿಎಂಪಿ, ಅನಧಿಕೃತವಾಗಿ ನಿರ್ಮಾಣವಾಗಿದ್ದ ಪ್ರಾರ್ಥನಾ ಮಂದಿರ ನೆಲಸಮ

‘ಬಿಜೆಪಿ ಸರ್ಕಾರದ ಮೇಲೆ ಪೊಳ್ಳು ಆರೋಪ‌ ಮಾಡುವ #ಭ್ರಷ್ಟರಾಮಯ್ಯ ಅವರೇ, ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು ಗಮನಕ್ಕೆ ಬಂದಾಕ್ಷಣ ಬಿಜೆಪಿ ಸರ್ಕಾರ ತನಿಖೆಗೆ ಒಪ್ಪಿಸಿದೆ. ಶಿಕ್ಷಕರ ನೇಮಕಾತಿ ಹಗರಣ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದು ಏಕೆ?’ ಅಂತಾ ಟೀಕಿಸಿದೆ.

‘ತಾಕತ್ತಿದ್ದರೆ ನಮ್ಮ ಹಗರಣಗಳನ್ನು ಬಯಲಿಗೆಳೆಯಿರಿ ಎನ್ನುವ #ಭ್ರಷ್ಟರಾಮಯ್ಯ ಅವರೇ, ಹಗರಣ ಮಾಡಿ, ತನಿಖೆಗೆ ಹೆದರಿ ತನಿಖಾ ಸಂಸ್ಥೆಗಳನ್ನು ಮುಚ್ಚುವಾಗ ನಿಮ್ಮ ಧಮ್‌ ಎಲ್ಲಿ ಹೋಗಿತ್ತು? ಶಿಕ್ಷಕರ ನೇಮಕಾತಿ ಹಗರಣ, ಅರ್ಕಾವತಿ ರೀಡೂ ಹಗರಣ, ಇಂಧನ ಇಲಾಖೆ ಹಗರಣ ಒಂದೇ ಎರಡೇ, ಕಾಂಗ್ರೆಸ್ ಮಾಡಿದ್ದೆಲ್ಲವೂ ಹಗರಣವೇ’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಕರ್ನಾಟಕದತ್ತ ಭಾರತ ಐಕ್ಯತಾ ಯಾತ್ರೆ, ಸರ್ವರಿಗೂ ಕಾಂಗ್ರೆಸ್ ಮುಕ್ತ ಆಹ್ವಾನ!

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅರ್ಜಿಯೇ ಹಾಕದೆ ಸರ್ಕಾರಿ ಉದ್ಯೋಗಿಯಾಗಬಹುದಿತ್ತು. #ಭ್ರಷ್ಟರಾಮಯ್ಯ ಸಿಎಂ ಆಗಿದ್ದಾಗ 14 ಜನರು ಅಕ್ರಮವಾಗಿ ಶಿಕ್ಷಕರಾಗಿ ನೇಮಕಾತಿಯಾಗಿದ್ದರು. ಈ ಅಕ್ರಮ ನೇಮಕಾತಿಗೆ ಕಾಂಗ್ರೆಸ್ ಫಿಕ್ಸ್‌ ಮಾಡಿದ ಕಮಿಷನ್ ಪರ್ಸಂಟೇಜ್‌ ಎಷ್ಟು?’ ಎಂದು ಬಿಜೆಪಿ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News