ಈ ಬಾರಿ ಬಿಜೆಪಿ ಸೋಲಿಸಿ ಜನರು ಮತ್ತೆ ಕಾಂಗ್ರೆಸ್‍ಗೆ ಮತ್ತೆ ಆಶೀರ್ವಾದ ಮಾಡಲಿದ್ದಾರೆ: ಸಿದ್ದರಾಮಯ್ಯ
ಯಾರೇ ಬಂದರೂ ಸಹ ಕರ್ನಾಟಕದ ಜನತೆ ತೀರ್ಮಾನ ಮಾಡಿದ್ದಾರೆ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‍ಗೆ ಮತ್ತೆ ಆಶೀರ್ವಾದ ಮಾಡಬೇಕು ಅಂತಾ ರಾಜ್ಯದ ಜನತೆ ತೀರ್ಮಾನ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಿಜಯಪುರ: ಕೇಂದ್ರ ಗೃಹ ಸಚಿವ ಅಮಿತಾ ಶಾ ಕರಾವಳಿ ಭಾಗಕ್ಕೆ ಭೇಟಿ ನೀಡಿರುವ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಸಿಂದಗಿಯಲ್ಲಿ ಮಾತನಾಡಿರುವ ಅವರು, ಅಮಿತ್ ಶಾ, ಜೆ.ಪಿ.ನಡ್ಡಾ ಮತ್ತು ಪ್ರಧಾನಿ ಮೋದಿ ಯಾರಾದರೂ ಬರಲಿ, ಬರಬೇಡಿ ಅಂತಾ ಯಾರು ಹೇಳಿದ್ದಾರೆಂದು ಟಾಂಗ್ ನೀಡಿದ್ದಾರೆ.
ಯಾರೇ ಬಂದರೂ ಸಹ ಕರ್ನಾಟಕದ ಜನತೆ ತೀರ್ಮಾನ ಮಾಡಿದ್ದಾರೆ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‍ಗೆ ಮತ್ತೆ ಆಶೀರ್ವಾದ ಮಾಡಬೇಕು ಅಂತಾ ರಾಜ್ಯದ ಜನತೆ ತೀರ್ಮಾನ ಮಾಡಿದ್ದಾರೆ. ಎಷ್ಟು ಸಾರಿ ಬಂದ್ರೂ ಬಿಜೆಪಿಗೆ ಏನೂ ಪ್ರಯೋಜನ ಆಗಲ್ಲ. ಬಿಜೆಪಿಯವರು ಮಾಡಿರೋ ಭ್ರಷ್ಟಾಚಾರವನ್ನು ಬದಲಾವಣೆ ಮಾಡಲು ಸಾಧ‍್ಯವಿಲ್ಲವೆಂದು ಟೀಕಿಸಿದ್ದಾರೆ.
ಇದನ್ನೂ ಓದಿ: “ಸುಳ್ಳಿನ ಕಾರ್ಖಾನೆಯ ಮತ್ತೊಂದು ಹೆಸರು ಬಿಜೆಪಿ”-ಡಿಕೆಶಿ ವಾಗ್ದಾಳಿ
ಬೆಲೆಯೇರಿಕೆ ಬದಲಾವಣೆ ಮಾಡಲು ಆಗಲ್ಲ. ಯುವಕರು ಮತ್ತು ಮಹಿಳೆಯರ ಸಮಸ್ಯೆಗೆ ಸ್ಪಂದಿಸಲು ಆಗಿಲ್ಲ. ಇವತ್ತು ರೈತರು ಕಂಗಾಲಾಗಿದ್ದಾರೆ. 2017ರಲ್ಲಿ ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದಿದ್ರು. 5 ವರ್ಷ ಮುಗಿದು ಹೋಯ್ತು, ರೈತರ ಸಾಲ ದುಪ್ಪಟ್ಟು ಆಯ್ತೇ ಹೊರತು ರೈತರ ಆದಾಯ ಹೆಚ್ಚಾಗಲಿಲ್ಲ. ರೈತರ ಆದಾಯ ದುಪ್ಪಟ್ಟು ಆಗಿದ್ಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪೆಟ್ರೋಲ್-ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಆಗಿದ್ದು, ಸಹಮತವಿದ್ದರೇ ಬಿಜೆಪಿ ಪರ ಮಾತಾಡಿ. ಸಹಮತ ಇಲ್ಲ ಅನ್ನೋದಾದ್ರೆ ಬಿಜೆಪಿ ವಿರುದ್ಧ ಮಾತಾಡಿ. ಸತ್ಯ ಬರೆಯಿರಿ, ನಾವೇನು ಸುಳ್ಳು ಬರಿಯಿರಿ ಎಂದು ಹೇಳಲ್ಲವೆಂದು ಮಾಧ್ಯಮಗಳಿಗೆ ಸಲಹೆ ನೀಡಿದ ಸಿದ್ದರಾಮಯ್ಯ, ಸತ್ಯ ಬರೆಯಿರಿ ನಾವು ಸತ್ಯ ಹೇಳ್ತೀವಿ. ಸುಳ್ಳು ಹೇಳೋಕೆ ಹೋಗಲ್ಲ ಎಂದರು.
ಇದನ್ನೂ ಓದಿ: ಭಾರತವನ್ನು ಸರ್ವಶ್ರೇಷ್ಠವಾಗಿಸುವ ಧ್ಯೇಯದೊಂದಿಗೆ ಆಡಳಿತ – ಸಿಎಂ ಬೊಮ್ಮಾಯಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.