ಭಾರತವನ್ನು ಸರ್ವಶ್ರೇಷ್ಠವಾಗಿಸುವ ಧ್ಯೇಯದೊಂದಿಗೆ ಆಡಳಿತ – ಸಿಎಂ ಬೊಮ್ಮಾಯಿ

ಕಾಂಗ್ರೆಸ್ ಕುರಿತು ಶಾಸಕ ಸಿ.ಟಿ.ರವಿಯವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿ, ಯಾವ ಪಕ್ಷದವರು ಯಾವ ಸಂಸ್ಕೃತಿ ಎಂದು ಜನರಿಗೆ ತಿಳಿದಿದೆ.ರಾಜ್ಯ ಭಾಜಪ ಪಕ್ಷದ್ದು ನರೇಂದ್ರ ಮೋದಿ ಸಂಸ್ಕೃತಿ. ಭಾರತವನ್ನು ಸಶಕ್ತ, ಸಮೃದ್ಧವಾಗಿ ಕಟ್ಟುವ ಕಾಲ ಸ್ವಾತಂತ್ರ್ಯಾ ನಂತರ 75 ವರ್ಷಗಳ ನಂತರ ಅವಕಾಶ ದೊರಕಿದೆ ಎಂದರು.

Written by - Prashobh Devanahalli | Edited by - Manjunath N | Last Updated : Feb 10, 2023, 05:42 PM IST
  • ಕಾಂಗ್ರೆಸ್ ಕುರಿತು ಶಾಸಕ ಸಿ.ಟಿ.ರವಿಯವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿ, ಯಾವ ಪಕ್ಷದವರು ಯಾವ ಸಂಸ್ಕೃತಿ ಎಂದು ಜನರಿಗೆ ತಿಳಿದಿದೆ
  • ರಾಜ್ಯ ಭಾಜಪ ಪಕ್ಷದ್ದು ನರೇಂದ್ರ ಮೋದಿ ಸಂಸ್ಕೃತಿ
  • ಭಾರತವನ್ನು ಸಶಕ್ತ, ಸಮೃದ್ಧವಾಗಿ ಕಟ್ಟುವ ಕಾಲ ಸ್ವಾತಂತ್ರ್ಯಾ ನಂತರ 75 ವರ್ಷಗಳ ನಂತರ ಅವಕಾಶ ದೊರಕಿದೆ ಎಂದರು
ಭಾರತವನ್ನು ಸರ್ವಶ್ರೇಷ್ಠವಾಗಿಸುವ ಧ್ಯೇಯದೊಂದಿಗೆ ಆಡಳಿತ – ಸಿಎಂ ಬೊಮ್ಮಾಯಿ title=
Photo Courtsey: Twitter

ಹುಬ್ಬಳ್ಳಿ : ಪ್ರಧಾನಿ ಮೋದಿಯವರು ಅಮೃತ ಕಾಲವನ್ನು ಕರ್ತವ್ಯ ಕಾಲ ಎಂದು ಕರೆದಿದ್ದು, ಕರ್ತವ್ಯದ ಮುಖಾಂತರ ಭಾರತವನ್ನು ವಿಶ್ವದಲ್ಲಿ ಸರ್ವಶ್ರೇಷ್ಠ ಮಾಡುವ ಧ್ಯೇಯವನ್ನಿಟ್ಟುಕೊಂಡು ಆಡಳಿತ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್ ಕುರಿತು ಶಾಸಕ ಸಿ.ಟಿ.ರವಿಯವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿ, ಯಾವ ಪಕ್ಷದವರು ಯಾವ ಸಂಸ್ಕೃತಿ ಎಂದು ಜನರಿಗೆ ತಿಳಿದಿದೆ.ರಾಜ್ಯ ಭಾಜಪ ಪಕ್ಷದ್ದು ನರೇಂದ್ರ ಮೋದಿ ಸಂಸ್ಕೃತಿ. ಭಾರತವನ್ನು ಸಶಕ್ತ, ಸಮೃದ್ಧವಾಗಿ ಕಟ್ಟುವ ಕಾಲ ಸ್ವಾತಂತ್ರ್ಯಾ ನಂತರ 75 ವರ್ಷಗಳ ನಂತರ ಅವಕಾಶ ದೊರಕಿದೆ ಎಂದರು.

ಇದನ್ನೂ ಓದಿ: ಬಿಜೆಪಿ ಜಾತಿ ಆಧಾರದ ಮೇಲೆ ಸಿಎಂ ಆಯ್ಕೆ ಮಾಡಲ್ಲ: ಶಾಸಕ ರಘುಪತಿ ಭಟ್

ಲಕ್ಕುಂಡಿ ಉತ್ಸವದ ಮೂಲಕ ಪ್ರವಾಸೋದ್ಯಮಕ್ಕೆ ಇಂಬು :

ಲಕ್ಕುಂಡಿ ಜಗತ್ಪ್ರಸಿದ್ಧವಾದ ಐತಿಹಾಸಿಕ ಸ್ಥಳ.ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಇಂಬು ನೀಡಲು ಲಕ್ಕುಂಡಿ ಉತ್ಸವವನ್ನು ಆಯೋಜಿಸಲಾಗಿದೆ. ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿಪ್ರಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದೆಯೂ ಸರ್ಕಾರ ಈ ತೀರ್ಮಾನ ಕೈಗೊಂಡಾಗಲೂ ತನ್ನ ಹೆಸರನ್ನು ವಿಮಾನ ನಿಲ್ದಾಣಕ್ಕೆ ಸೂಚಿಸುವುದು ಬೇಡ ಎಂದಿದ್ದರು.ಇತ್ತೀಚೆಗಿನ ಶಿವಮೊಗ್ಗ ಪ್ರವಾಸದ ಸಂದರ್ಭದಲ್ಲಿ ಸಾರ್ವಜನಿಕರಿಂದ ಈ ಬಗ್ಗೆ ಒತ್ತಡ ಬಂದಿದೆ. ಈ ಬಗ್ಗೆ ಅವರೊಂದಿಗೆ ಚರ್ಚಿಸಲಾಗುವುದು ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News