CM Siddaramaiah : ಕರ್ನಾಟಕ ಕಾಂಗ್ರೆಸ್‌ ಹಿರಿಯ ನಾಯಕ ಸಿದ್ದರಾಮಯ್ಯ ಸುಮಾರು 40 ವರ್ಷಗಳ ಕಾಲ ರಾಜಕೀಯದಲ್ಲಿ ಪಳಗಿದವರು. 1983ರಲ್ಲಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಸೇವೆ ಆರಂಭಿಸಿ, 2013ರಲ್ಲಿ ಸಿಎಂ ಗದ್ದುಗೆ ಏರುವವರೆಗೂ ಹಲವಾರು ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಲ್ಲದೆ, ಸಿಎಂ ಆದ ನಂತರವೂ ಅತ್ಯಂತ ಜವಾಬ್ದಾರಿಯುತವಾಗಿ ತಮ್ಮ ಸ್ಥಾನವನ್ನು ನಿರ್ವಹಿಸಿದ ಹೆಗ್ಗಳಿಕೆ ಸಿದ್ದರಾಮಯ್ಯಾ ಅವರದ್ದು. 


COMMERCIAL BREAK
SCROLL TO CONTINUE READING

ಹೌದು.. 2013 ರಿಂದ 2018 ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಸಿದ್ದರಾಮಯ್ಯ ಅವರಿಗೆ ಆಡಳಿತದ ಅನುಭವ ಹೆಚ್ಚು. ಅಲ್ಲದೆ, ಜಾತಿ ಮತ್ತು ವರ್ಗಗಳ ಮೇಲೆ ಪ್ರಾಬಲ್ಯ ಹೊಂದಿದ್ದಾರೆ. ಬಹುಪಾಲು ಕಾಂಗ್ರೆಸ್ ಶಾಸಕರ ಬೆಂಬಲ ಸಹ ಅವರಿಗಿದೆ. ಕರ್ನಾಟಕದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಜನಸಾಮಾನ್ಯರು ಅವರ ಹತ್ತಿರ ಕೇಳಿಕೊಂಡಿದ್ದು ಒಂದೇ ಒಂದು ಮಾತು.. ಮುಂದಿನ ಸಿಎಂ ನೀವೇ ಆಗ್ಬೇಕು ಅಂತ... ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿಯೂ ಸಹ ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಘೋಷಣೆಗಳು ಪ್ರತಿಧ್ವನಿಸಿದ್ದು ಎಐಸಿಸಿ ನಾಯಕ ರಾಹುಲ್‌ ಗಾಂಧಿ ಗಮನಕ್ಕೂ ಬಂದಿತ್ತು.


ಇದನ್ನೂ ಓದಿ: ಸಿದ್ದು ಕ್ಯಾಬಿನೆಟ್ ನಲ್ಲಿ ಯಾರಿಗೆ ಮಂತ್ರಿ ಭಾಗ್ಯ? ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ


ಹೆಚ್ಚಾಗಿ ಚುನಾವಣೆಗೂ ಮುಂಚೆಯೇ, ಪಕ್ಷ ಗೆದ್ದರೆ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಸೂಕ್ತ ಎಂದು ಕಾಂಗ್ರೆಸ್ ಉನ್ನತ ನಾಯಕರಲ್ಲಿ ವ್ಯಾಪಕವಾದ ಒಪ್ಪಂದವಾಗಿತ್ತು. ಏಕೆಂದರೆ ಕಾಂಗ್ರೆಸ್ ಪಕ್ಷದ ದಿವಂಗತ ದೇವರಾಜ್ ಉರ್ಜ್ ಹೊರತುಪಡಿಸಿ ಈ ಹುದ್ದೆಯಲ್ಲಿ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯರಾಗಿದ್ದರು. ಅಲ್ಲದೆ, ಕಾಂಗ್ರೆಸ್‌ ಹೈಕಮಾಂಡ್‌ 2024 ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯನವರಿಗೆ ಸಿಎಂ ಪಟ್ಟ ಕಟ್ಟಿದೆ.


ಮೂರು 'ಅಹಿಂದ' ರ್ಯಾಲಿಗಳನ್ನು ಆಯೋಜಿಸಿದ ನಂತರ 2006 ರಲ್ಲಿ ಜೆಡಿಎಸ್ ತೊರೆದು ತಮ್ಮ ಹೊಸ ಸಂಘಟನೆಯನ್ನು ರಚಿಸಿದರು, ಇದು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತನ್ನ ಗುರುತನ್ನು ಪಡೆದುಕೊಂಡಿತು. ನಂತರ ಕಾಂಗ್ರೆಸ್ ನಾಯಕತ್ವದ ಪ್ರಸ್ತಾಪವನ್ನು ಅನುಸರಿಸಿ, ಅವರು 2006 ರಲ್ಲಿ ತಮ್ಮ ಅನುಯಾಯಿಗಳೊಂದಿಗೆ ಕೈ ಪಡೆ ಸೇರಿಕೊಂಡರು. ಒಂಬತ್ತು ಅವಧಿಯ ಶಾಸಕರಾಗಿದ್ದ ಸಿದ್ದರಾಮಯ್ಯ ಅವರು ಕೈ ಪಾಳಯದಲ್ಲಿ ಹಲವಾರು ಮಹತ್ವದ ಸ್ಥಾನಗಳನ್ನು ಅಲಂಕರಿಸಿದ್ದರು. 


ಇದನ್ನೂ ಓದಿ: ಸೋಮಣ್ಣ ಸೋಲಿಸಿದ ಪುಟ್ಟರಂಗಶೆಟ್ಟಿಗೆ ಒಲಿಯುತ್ತಾ ಮಂತ್ರಿ ಪಟ್ಟ..?


ಸಿದ್ದರಾಮಯ್ಯರ ʼಅಹಿಂದʼ.. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರನ್ನು ಪ್ರತಿನಿಧಿಸುವ ಸಾಮಾಜಿಕ-ರಾಜಕೀಯ ಪರಿಕಲ್ಪನೆಯಾಗಿದೆ. ಇನ್ನು ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಚಾಮುಂಡೇಶ್ವರಿ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಉಪಚುನಾವಣೆಗೆ ನಿಂತು ಗೆಲುವಿನ ನಗೆ ಬಿರಿದರು. ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಸಾರ್ವತ್ರಿಕ ಚುನಾವಣೆ-2008ಕ್ಕೆ ನೇಮಿಸಲಾಯಿತು. ಕಾಂಗ್ರೆಸ್ ಪರವಾಗಿ ಗರಿಷ್ಠ ಮತಗಳನ್ನು ಗಳಿಸಲು ಶ್ರಮಿಸಿದರು. 2008 ರ ಚುನಾವಣೆಯಲ್ಲಿ ಮರುನಾಮಕರಣಗೊಂಡ ವರುಣಾ ಕ್ಷೇತ್ರಕ್ಕೆ ಆಯ್ಕೆಯಾದರು.


ಮೈಸೂರು ಜಿಲ್ಲೆಯ ವರುಣಾ ಹೋಬಳಿಯ ಹಳ್ಳಿ ಸಿದ್ದರಾಮನ ಹುಂಡಿಯಲ್ಲಿ ಆಗಸ್ಟ್ 12, 1948 ರಂದು ಬಡ ರೈತ ಸಮುದಾಯದಲ್ಲಿ ಸಿದ್ದರಾಮಯ್ಯನವರು ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ವಿಜ್ಞಾನ ಮತ್ತು ಕಾನೂನು ಪದವಿಯನ್ನು ಪಡೆದು ಸ್ವಲ್ಪ ಕಾಲ ವಕೀಲ ವೃತ್ತಿಯನ್ನು ನಡೆಸಿದರು. ಅಪಾರ ಜ್ಞಾನ ಹೊಂದಿರುವ ಸಿದ್ದರಾಮಯ್ಯನವರು ಇಂದು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ